ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ) ಇದರ ಹದಿನೇಳನೇ ವರ್ಷದ ವಾರ್ಷಿಕೋತ್ಸವ

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ) ಇದರ ಹದಿನೇಳನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ, ಮಕ್ಕಳ ಯಕ್ಷಗಾನ ಬಯಲಾಟದ ವಾರ್ಷಿಕ ಕಲಾಪದಲ್ಲಿ ಫೆ.26ರಂದು ಜಾನಪದ ಸಂಶೋಧಕ,ಕಟೀಲಿನ ಯಕ್ಷಪ್ರಭಾ ಪತ್ರಿಕೆಯ ಸಂಪಾದಕ ಕೆ.ಎಲ್.ಕುಂಡಂತಾಯರಿಗೆ “ವಿಶೇಷ ಸಾಧನಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು.ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ಪ್ರಶಸ್ತಿ ಪ್ರದಾನಿಸಿದರು. ಶ್ರೀ ಕ್ಷೇತ್ರ ಮಲ್ಲ‌ ಮೊಕ್ತೇಸರ ವಿಷ್ಣು ಭಟ್,ನಿವೃತ್ತ ಐಎಎಸ್ ಅಧಿಕಾರಿ( ಕೇರಳ ಸರಕಾರದ ಸೆಕ್ರೆಟರಿ) ಕೆ.ಗೋಪಾಲಕೃಷ್ಣ ಭಟ್ ಎಡನೀರು,ಅಡ್ಯನಡ್ಕ ಅಮೃತಧಾರಾ ಕ್ಲಿನಿಕ್ ನ ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ಪೆರ್ಲದ ಜ್ಯೋತಿ ಮೆಡಿಕಲ್ಸ್ ನ ಡಾ.ಎಸ್.ಎನ್.ಭಟ್ ಪೆರ್ಲ, ಪ್ರಸಿದ್ಧ ಭಾಗವತ ಡಾ.ಸತ್ಯನಾರಾಯಣ ಪಣಿಂಚಿತ್ತಾಯ, ಕೃಷ್ಣ ಭಟ್ ದೇವಕಾನ,ಹಾಗೂ ಎನ್.ಕೆ.ರಾಮಚಂದ್ರ ಭಟ್ ಪನೆಯಾಲ ಮತ್ತು ಕೇಂದ್ರದ ನಾಟ್ಯಗುರು ಮತ್ತು ಅಧ್ಯಕ್ಷರಾದ ಸಬ್ಬಣಕೋಡಿ ರಾಮ ಭಟ್ ಅವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply