ಸಂಧಾನಕ್ಕೆ ರಷ್ಯಾ ಕರೆದರೂ ಯೂಕ್ರೇನ್‌ ನಿರಾಕರಣೆ.

ಕೀವ್: ಯೂಕ್ರೇನ್‌ ವಿರುದ್ಧ ಯುದ್ಧ ಸಾರಿರುವ ರಷ್ಯಾ ಇದೀಗ ಸಂಧಾನಕ್ಕೆ ಮುಂದಾಗಿದೆ. ವಿಶ್ವದ ಹಲವು ರಾಷ್ಟ್ರಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸಂಧಾನಕ್ಕೆ ಯೂಕ್ರೇನ್‌ಗೆ ಆಹ್ವಾನಿಸಿದೆ.

ಆದರೆ ಯೂಕ್ರೇನ್‌ ಮಾತ್ರ ಸಂಧಾನಕ್ಕೆ ಒಪ್ಪಿಕೊಂಡಿಲ್ಲ!

ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುತಿನ್, ಯೂಕ್ರೇನ್ ಜೊತೆಗೆ ಸಂಧಾನಕ್ಕೆ ನಿಯೋಗ ಕಳುಹಿಸಲು ಒಪ್ಪಿದ್ದರು. ಬೆಲಾರಸ್‍ನಲ್ಲಿ ಸಂಧಾನಕ್ಕೆ ರಷ್ಯಾ, ಉಕ್ರೇನ್‍ಗೆ ಆಹ್ವಾನ ನೀಡಿತ್ತು. ಆದರೆ ಈ ಆಹ್ವಾನವನ್ನು ಉಕ್ರೇನ್ ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಯುದ್ಧದಿಂದ ಸಹಸ್ರಾರು ಯೋಧರು, ಜನರನ್ನು ಕಳೆದುಕೊಂಡು ಕಂಗೆಟ್ಟಿರುವ ಯೂಕ್ರೇನ್‌ ಸಂಧಾನಕ್ಕೆ ನಿರಾಕರಣೆ ಮಾಡಿದ್ದು ಏಕೆ ಎನ್ನುವ ಹಿಂದೆಯೂ ಕಾರಣವಿದೆ.

ಅದೇನೆಂದರೆ ರಷ್ಯಾ ಸಂಧಾನಕ್ಕಾಗಿ ಆಯ್ಕೆ ಮಾಡಿಕೊಂಡಿರುವುದು ಬೆಲಾರಸ್‌ ಪ್ರದೇಶ. ಆದರೆ ಯೂಕ್ರೇನ್‌ ವಿರುದ್ಧದ ಯುದ್ಧದಲ್ಲಿ ಬೆಲಾರಸ್ ರಷ್ಯಾ ಜತೆಗಿದ್ದು ಯುದ್ಧವನ್ನು ಸಪೋರ್ಟ್‌ ಮಾಡುತ್ತಿದೆ. ಆದ್ದರಿಂದ ಈ ಪ್ರದೇಶದಲ್ಲಿ ಸಂಧಾನಕ್ಕೆ ತಾನು ಬರಲು ಸಿದ್ಧವಿಲ್ಲ, ಆದರೆ ಬೇರೆ ಪ್ರದೇಶ ಎಲ್ಲಿಯೇ ಕರೆದರೂ ತಾನು ಸಿದ್ಧ ಎಂದಿದೆ ಯೂಕ್ರೇನ್‌.

ಅದೇ ಇನ್ನೊಂದು ಕಡೆ, ಯೂಕ್ರೇನ್‌ ಕೀವ್, ಖಾರ್ಕಿವ್ ಪ್ರದೇಶದಲ್ಲಿ ರಷ್ಯಾ ಗುಂಡಿನ ಸುರಿಮಳೆ ಸುರಿಸಿದೆ. ಮಿಲಿಟರಿ ವಾಹನಗಳನ್ನು ಸುಟ್ಟು ಭಸ್ಮ ಮಾಡಿದೆ.

 
 
 
 
 
 
 
 
 
 
 

Leave a Reply