ಕರ್ನಾಟಕ ಸರಕಾರದ “ಯಕ್ಷ ರಂಗಾಯಣ” ನಿರ್ದೇಶಕರಾಗಿ ಜೀವನ್ ರಾಂ.ಸುಳ್ಯ ಆಯ್ಕೆ

ಕರ್ನಾಟಕ ಸರಕಾರದ “ಯಕ್ಷ ರಂಗಾಯಣ” ನಿರ್ದೇಶಕರಾಗಿ ರಂಗ ಮಾಂತ್ರಿಕ ಜೀವನ್ ರಾಂ.ಸುಳ್ಯ ಆಯ್ಕೆಯಾದ ಹಿನ್ನಲೆಯಲ್ಲಿ ಇಂದು ಉಡುಪಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ರವರಿಂದ ಶುಕ್ರವಾರ ಆಯ್ಕೆ ಪತ್ರವನ್ನು ಪಡೆದು ಕೊಂಡರು.

ಜೀವನ್ ರಾಂ ಸುಳ್ಯ :-
* ಕರ್ನಾಟಕದ ಸೃಜನಶೀಲ ರಂಗನಿರ್ದೇಶಕರ ಸಾಲಿನಲ್ಲಿ ಕೇಳಿ ಬರುವ ಪ್ರಮುಖ ಹೆಸರು ಜೀವನ್ ರಾಂ ಸುಳ್ಯ.
* ನೀನಾಸಂ ರಂಗ ಶಿಕ್ಷಣ ಕೇಂದ್ರದ ಪದವೀಧರ ನಾಗಿ,ನೀನಾಸಂ ತಿರುಗಾಟದಲ್ಲಿ ಐದು ವರ್ಷ ಮುಖ್ಯ ನಟನಾಗಿ,ತಂಡದ ಸಂಚಾಲಕನಾಗಿ ದುಡಿದವರು.
* ಮಕ್ಕಳ ಮತ್ತು ಕಾಲೇಜು ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಹೊಂದಿದವರಾಗಿದ್ದು ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ರಂಗಭೂಮಿ ಬಗ್ಗೆ ಆಸಕ್ತಿ ಮೂಡಿಸಿದವರು.
* ಬಾಲ್ಯದಲ್ಲಿ ತನ್ನ ತಂದೆಯ ಜೊತೆ ಯಕ್ಷಗಾನ ಪ್ರಪಂಚದಲ್ಲೇ ಬೆಳೆದ ಇವರು,ಯಕ್ಷಗಾನದ ಅನೇಕ ಪಾತ್ರಗಳಿಗೆ ಜೀವ ತುಂಬಿದವರು. ಮಾತ್ರವಲ್ಲ ಯಕ್ಷಗಾನವನ್ನು ತನ್ನ ರಂಗಪ್ರಯೋಗಗಳಲ್ಲಿ
ಸಮರ್ಥವಾಗಿ ಬಳಸಿಕೊಂಡು ನಾಡಿನೆಲ್ಲೆಡೆ ಪ್ರದರ್ಶಿಸಿದವರು.

* ಕೊಡಗು,ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಸುಮಾರು 700 ಕ್ಕಿಂತಲೂ ಹೆಚ್ಚು ಬುಡಕಟ್ಟು ಜನಾಂಗದ ಮಕ್ಕಳಿಗೆ ‘ಚಿಣ್ಣರಮೇಳ’ ರಂಗ ಶಿಬಿರ ನಿರ್ದೇಶಿಸಿದವರು…

* ರಂಗವಿನ್ಯಾಸ,ಬೆಳಕು ಸಂಯೋಜನೆ,ವಸ್ತ್ರವಿನ್ಯಾಸ,
ಅಭಿನಯ,ಮಾತುಗಾರಿಕೆ,ರಂಗ ಪರಿಕರ,ಮುಖವಾಡ,
ಸಂಗೀತ ಸಂಯೋಜನೆ,ಪ್ರಸಾಧನ,ರಂಗ ಸಂಘಟನೆ
— ಹೀಗೆ ರಂಗಭೂಮಿಯ ಸರ್ವ ಪ್ರಕಾರಗಳಲ್ಲೂ ಪರಿಣತಿ ಪಡೆದ ಇವರು ನಿರ್ದೇಶಿಸಿದ ನಾಟಕಗಳು
ಒಂದಕ್ಕಿಂತ ಒಂದು ಭಿನ್ನ.

ನಿರ್ದೇಶಿಸಿದ ಪ್ರಮುಖ ನಾಟಕಗಳು
—————-+—————————-
ಮಹಾಮಾಯಿ(107ಪ್ರದರ್ಶನ ಕಂಡಿವೆ) * ಮೃಚ್ಛಕಟಿಕ
* ಸೂರ್ಯ ಶಿಕಾರಿ ದೂತವಾಕ್ಯ(48 ಪ್ರ.) ಊರುಭಂಗ *ಪಂಜರಶಾಲೆ (105 ಪ್ರ.) ಭಾಸ ಭಾರತ (20ಪ್ರ.) ಢಾಣಾಡಂಗುರ (64 ಪ್ರ.) * ಝುಂ ಝಾಂ ಆನೆ (38 ಪ್ರ.)* ಸಾಹೇಬರು ಬರುತ್ತಾರೆ * ದೇವವೃದ್ಧರು-
ಕಿರುನಾಟಕ (125 ಪ್ರ.)ಅಭಿವೃದ್ಧಿ * ಅಸುದ್ದೋ(ತುಳು)
* ಮಕ್ಕಳ ಮಾಯಾಲೋಕ (270 ಕ್ಕೂ ಹೆಚ್ಚು)
* ಅಗ್ನಿ ಮತ್ತು ಮಳೆ * ಏಕಾದಶಾನನ (68 ಪ್ರ.) *ಅಲಾದೀನ ಮಾಂತ್ರಿಕ ದೀಪ(16 ಪ್ರ.) * ಪುಷ್ಪರಾಣಿ(12 ಪ್ರ.) * ಮಧ್ಯಮ ವ್ಯಾಯೋಗ (53 ಪ್ರ.)
* ದೂತ ಘಟೋತ್ಕಚ (50 ಪ್ರ.)* ಅಂಧಯುಗ * ನಾಯಿಮರಿ ನಾಟಕ (_24 ಪ್ರ.)* ತಲೆದಂಡ * ಪಿಲಿಪತ್ತಿ ಗಡಸ್ – ತುಳು(486 ಪ್ರದರ್ಶನ) * ಬರ್ಬರೀಕ (22 ಪ್ರ.)
* ಧಾಂ ಧೂಂ ಸುಂಟರಗಾಳಿ (172 ಪ್ರದರ್ಶನ)….
ಇತ್ಯಾದಿ ನಾಟಕಗಳು ರಾಜ್ಯಾದ್ಯಂತ ಪ್ರದರ್ಶನಗೊಂಡ ಬಹುಬೇಡಿಕೆಯ ಪ್ರಯೋಗಗಳು.

* ಜನಜಾಗೃತಿಗಾಗಿ ತಾನೇ ರಚಿಸಿ,ನಿರ್ದೇಶಿಸಿ,ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಬೀದಿನಾಟಕ ಪ್ರದರ್ಶನಗಳ ಸಂಖ್ಯೆ ಒಟ್ಟು 3000 ಕ್ಕಿಂತಲೂ ಅಧಿಕ.
* ಬಾಲ ಕಾರ್ಮಿಕತೆ ಮತ್ತು ಬಾಲ್ಯ ವಿವಾಹ ವಿರುದ್ಧ ನಾಟಕ
* ಏಡ್ಸ್ ಎಚ್ಚರಿಕೆ ಬೀದಿನಾಟಕ
* ಸಾಕ್ಷರತಾ ಆಂದೊಲನ ನಾಟಕ
* ಭಾರತ ಜ್ಞಾನ ವಿಜ್ಞಾನ ಜಾಥಾದ ನಾಟಕ
* ಕರಾವಳಿ ಬಚಾವ್ ಸಾಂಸ್ಕೃತಿಕ ಅಭಿಯಾನದಲ್ಲಿ ನಾಟಕ
* ಸಂಸ್ಕೃತಿ ಬಚಾವ್ ಅಭಿಯಾನ ಬೀದಿನಾಟಕ
* ಪರಿಸರ ಸಂರಕ್ಷಣಾ ಜಾಗೃತಿ ನಾಟಕ
* ಸ್ವಚ್ಛ ಭಾರತ್ ಬೀದಿನಾಟಕ…..ಇತ್ಯಾದಿ.

ಅಭಿನಯಿಸಿದ ಕೆಲವು ಮುಖ್ಯ ನಾಟಕಗಳು
——————————————————-
ಅಗ್ನಿ ಮತ್ತು ಮಳೆ, ತಲೆದಂಡ, ನಾಗಮಂಡಲ,ವಾಯ್ಝಕ್,
ಸಂಗ್ಯಾಬಾಳ್ಯ, ತುಘಲಕ್, ಸ್ವಪ್ನ ವಾಸವದತ್ತ,
ಕಿರಗೂರಿನ ಗಯ್ಯಾಳಿಗಳು, ಆವೂರು ಈವೂರು,
ಹೂ ಹುಡುಗಿ, ಮಾಮಾಮೂಷಿ, ಕನಕಾಗಮನ,
ಗೋಕುಲ ನಿರ್ಗಮನ, ತೈಮನ್ ಆಫ್ ಅಥೆನ್ಸ್ ,
ಜೌರಂಗ ಜೇಬ, ಅಸುದ್ದೋ, ಪ್ರತಿಮಾ ನಾಟಕ,
ಮಕ್ಕಳ ಮಾಯಾಲೋಕ, ಪುಟ್ಟ ಓಲ್ಯಾ..ಇತ್ಯಾದಿ…

* ಸುಳ್ಯದಲ್ಲಿ ಪರಿವಾರ ರಂಗ ಅನ್ನುವ ಸಂಸ್ಥೆಯನ್ನು ಹುಟ್ಟು ಹಾಕಿ 10 ವರ್ಷ ಅನೇಕ ರಂಗ ಶಿಬಿರಗಳು,ನಾಟಕೋತ್ಸವ,ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಇವರು ಬಳಿಕ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿ,ತನ್ನ ವಾಸದ ಮನೆಯನ್ನೇ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವನ್ನಾಗಿಸಿದ ಹೆಮ್ಮೆ ಮತ್ತು ಸಾವಿರಾರು ಸಹೃದಯೀ ಪ್ರೇಕ್ಷಕರನ್ನು ಹುಟ್ಟು ಹಾಕಿದ ಕೀರ್ತಿ ಇವರದ್ದು. ಇದೀಗ 20 ವರ್ಷಗಳನ್ನು ಪೂರೈಸಿದ ರಂಗಮನೆಯು ತನ್ನ
ಕಲಾತ್ಮಕತೆ,ಸಮಯಪ್ರಜ್ಞೆ ಮತ್ತು ಉನ್ನತ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಪ್ರವಾಸಿಗರಿಗೂ ನೆಚ್ವಿನ ತಾಣವಾಗಿದೆ.

* ಪ್ರತಿವರ್ಷ ರಂಗಮನೆಯಲ್ಲಿ ಇವರ ನಿರ್ದೇಶನದಲ್ಲಿ ನಡೆಯುವ ರಾಜ್ಯಮಟ್ಟದ ‘ಚಿಣ್ಣರಮೇಳ’ ದಲ್ಲಿ ಭಾಗವಹಿಸಲು ರಾಜ್ಯದ ನಾನಾ ಕಡೆಗಳಿಂದ 300 ಕ್ಕಿಂತಲೂ ಹೆಚ್ಚು ಮಕ್ಕಳು ಆಗಮಿಸುತ್ತಾರೆ.
ಆ ಮೂಲಕ 30 ವರ್ಷಗಳ ತನ್ನ ವೃತ್ತಿ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ರಂಗವೇರಲು ಕಾರಣರಾಗಿದ್ದಾರೆ.

* ‘ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ’ ಅಲ್ಲದೆ ಸುಳ್ಯದ ‘ ರಂಗಮನೆ ನಾಟಕ ಶಾಲೆ ‘ ಮತ್ತು ತನ್ನ ತಂದೆಯ ಹೆಸರಿನಲ್ಲಿ ಆರಂಭಿಸಿದ ‘ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ ‘ ದ ಸ್ಥಾಪಕರೂ ಆಗಿದ್ದಾರೆ.

ಪ್ರಶಸ್ತಿ-ಸನ್ಮಾನಗಳು
—————————
ರಂಗದಶಾವತಾರಿ, ರಂಗಮಾಂತ್ರಿಕ, ರಂಗಮಾಣಿಕ್ಯ,
ಕಲಾಶ್ರೀ, ಬಾಲ ಸೇವಾರತ್ನ ಪುರಸ್ಕಾರ, ಸರಸ್ವತಿ ಪುರಸ್ಕಾರ, ಕರ್ನಾಟಕ ನಾಟಕ ಅಕಾಡೆಮಿ
ಸಿ.ಜಿ.ಕೆ.ಪುರಸ್ಕಾರ, ಸುವರ್ಣ ರಂಗ ಸಮ್ಮಾನ್, ಕಾರ್ಕಳ ಸಾಹಿತ್ಯ ಸಂಘ ಸಮ್ಮಾನ, ಸೌರಭ ಪ್ರಶಸ್ತಿ, ಉಪಾಧ್ಯಾಯ ಸಮ್ಮಾನ್,ಕಲಾ ಸಿಂಧು ಪುರಸ್ಕಾರ, ಆಳ್ವಾಸ್ ಮಕ್ಕಳ ಸಿರಿ ಪ್ರಶಸ್ತಿ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಶ್ರೀ ಪ್ರಶಸ್ತಿ, ಅರೆಹೊಳೆ ರಂಗಭೂಮಿ ಪ್ರಶಸ್ತಿ ಸೇರಿದಂತೆ ತನ್ನ ಅತ್ತುತ್ತಮ ನಿರ್ದೇಶನದ ಏಕಾಂಕ ಹಾಗೂ ಕಿರು ನಾಟಕಗಳಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಸತತ 11 ಬಾರಿ ರಾಷ್ಟೀಯ ರಂಗ ಪ್ರಶಸ್ತಿ ದೊರೆತಿದೆ..ಸಿಕ್ಕ ಸನ್ಮಾನಗಳು ನೂರಾರು.

* ಕನ್ನಡ ಭಾಷೆ ಬಾರದ ಮಕ್ಕಳಿಗೆ ಸ್ಪಷ್ಟವಾಗಿ ಕನ್ನಡವನ್ನು ಹೇಳಿಕೊಟ್ಟು ಅವರನ್ನು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಇವರದು.
* ಅಂಗ ನ್ಯೂನತೆಯ ಮಕ್ಕಳು, ಬುದ್ದಿಮಾಂದ್ಯ ವಿಶೇಷ ಮಕ್ಕಳಿಗೂ ನಾಟಕ ಶಿಬಿರ ನಡೆಸಿ ಆತ್ಮ ಸ್ಥೈರ್ಯ ತುಂಬಿದವರು.
***
* ನಾಟಕಗಳಲ್ಲಿ ಯಕ್ಷಗಾನ ಮಾತ್ರವಲ್ಲದೆ ಜಾದೂ ಕಲೆಯನ್ನೂ ಸಮರ್ಥವಾಗಿ ಅಳವಡಿಸುವ ಮೂಲಕ ರಂಗಭೂಮಿಗೆ ಹೊಸ ಆಯಾಮ ಮತ್ತು ನೂತನ ರಂಗತಂತ್ರಗಳನ್ನು ಪರಿಚಯಿಸಿದ ಮತ್ತೊಂದು ಹೆಗ್ಗಳಿಕೆ ಜೀವನ್ ರಾಂರದ್ದು.

* ಎರಡು ಸುಸಜ್ಜಿತ ಯಕ್ಷಗಾನ ಮ್ಯೂಸಿಯಂಗಳ ನಿರ್ಮಾಣ.
———————–
ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ನಿರ್ಮಾಣಗೊಂಡ ಮಂಗಳೂರು ವಿಶ್ಚವಿದ್ಯಾಲಯದ ‘ಯಕ್ಷಮಂಗಳ’ ಯಕ್ಷಗಾನ ಮ್ಯೂಸಿಯಂ ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕೇಂದ್ರದ ‘ಯಕ್ಷದೇಗುಲ’ ಮ್ಯೂಸಿಯಂಗಳು ಅಧ್ಯಯನಕ್ಕೆ ಪೂರಕವಾದ ಅಪರೂಪದ ವಸ್ತು ಸಂಗ್ರಹಾಲಯಗಳಾಗಿವೆ.

* ಸಾಕ್ಷ್ಯಚಿತ್ರ ನಿರ್ಮಾಣ( ಮಿಜಾರುಗುತ್ತು ಆನಂದ ಆಳ್ವ,ಮೋಹನ ಸೋನ), ಮುಖವಾಡ ತಯಾರಿ,ಚಿತ್ರಕಲೆ,ಕ್ರಾಫ್ಟ್,ರಂಗಗೀತೆ-
ಜನಪದ ಗಾಯನ,ಸಂಗೀತ ವಾದ್ಯಗಳನ್ನು ನುಡಿಸುವುದು,
ಸ್ಮರಣಿಕೆ ತಯಾರಿ,ಬೃಹತ್ ಕಲಾತ್ಮಕ ವೇದಿಕೆ ರಚನೆ,
ರಂಗಮಂದಿರಗಳ ವಿನ್ಯಾಸ,ಪವಾಡ ರಹಸ್ಯ ಬಯಲು ಕಾರ್ಯಕ್ರಮ ನೀಡುವುದು,ಕಣ್ಣಿಗೆ ಬಟ್ಟೆ ಕಟ್ಟಿ ಬೈಕ್ ಚಲಾಯಿಸುವ ಜಾದೂ ಸಾಹಸ-ಜಾದೂ ನಿರ್ದೇಶನ,
ಸಂಘಟನೆ-ಮುಂತಾದ ಹತ್ತು ಹಲವು ಕಲಾ ಪ್ರತಿಭೆ ಹೊಂದಿದವರು.
* ರಾಷ್ಟ್ರೀಯ ಜಾದೂ ಪ್ರಶಸ್ತಿ ಪಡೆದ ಕುದ್ರೋಳಿ ಗಣೇಶ್ ರವರ ವಿಸ್ಮಯ ರಾಷ್ಟ್ರೀಯ ಜಾದೂ ತಂಡದ ರಂಗನಿರ್ದೇಶಕರಾಗಿ ದುಡಿದಿದ್ದಾರೆ.

* ಕರ್ನಾಟಕ ನಾಟಕ ಅಕಾಡೆಮಿ ಸದಸ್ಯನಾಗಿ,ಕರ್ನಾಟಕ ಜಾನಪದ ಜಾತ್ರೆಯ ಜಿಲ್ಲಾ ಸಂಚಾಲಕನಾಗಿಯೂ ಸೇವೆ ಸಲ್ಲಿಸಿದ್ದಾರೆ.

* ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದ ‘ ತುಳು ಗ್ರಾಮ’ದ ರಂಗನಿರ್ದೇಶಕರಾಗಿ ಪ್ರಸಿದ್ಧರು..
* ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಸುಮಾರು 9 ಗಂಟೆಯ, 315 ಕಲಾವಿದರು ಭಾಗವಹಿಸಿದ, ರಾಷ್ಟ್ರ ಮಟ್ಟದಲ್ಲಿ ತುಂಬ ಸುದ್ದಿ ಮಾಡಿದ
“ಬಾಹುಬಲಿ ಪಂಚ ಮಹಾ ವೈಭವ” ದೃಶ್ಯರೂಪಕದ ನಿರ್ದೇಶನವನ್ನು ಮಾಡಿ ಜನಮನ್ನಣೆ ಪಡೆದವರು.

* ಕರ್ನಾಟಕ ಮಾತ್ರವಲ್ಲದೆ ದೆಹಲಿ,ಮುಂಬಯಿ,ವಾರಣಾಸಿ,ಕೇರಳ,ತಮಿಳುನಾಡು,
ಆಂಧ್ರಪ್ರದೇಶ,ಮಧ್ಯಪ್ರದೇಶ,ಗುಜರಾತ್,ಚಂಡೀಗಡ,
ರಾಜಸ್ಥಾನ,ಮಣಿಪುರ ಹಾಗೂ ದುಬೈ,ಬೆಹರೈನ್,ಅಬುದಾಬಿ,ಮಸ್ಕತ್ ಮುಂತಾದೆಡೆಯೂ ಕಾರ್ಯಕ್ರಮ ನೀಡಿದ್ದಾರೆ.

* ದೂರದರ್ಶನ ಆಕಾಶವಾಣಿಗಳಲ್ಲೂ ಇವರ ಅನೇಕ ನಾಟಕಗಳು ಬಿತ್ತರಗೊಂಡಿವೆ.

* ಕಳೆದ 23 ವರ್ಷಗಳಿಂದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿನ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.
* ತನ್ನ ವಾಸದ ಮನೆಯನ್ನೇ ಕಲಾಕ್ಷೇತ್ರವನ್ನಾಗಿಸಿದ ಅಪರೂಪದ ರಂಗಕರ್ಮಿ. 20 ವರ್ಷಗಳು ತುಂಬಿದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಇದರ ಅಧ್ಯಕ್ಷರಾಗಿದ್ದಾರೆ.

 
 
 
 
 
 
 
 
 
 
 

Leave a Reply