ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಸಮೀಕ್ಷಾ ಯೋಜನಾ ಬೈಠಕ್: ಅಧ್ಯಕ್ಷ , ಕಾರ್ಯದರ್ಶಿ ಆಯ್ಕೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿಯ ಶ್ರೀರಾಮ ವಿದ್ಯಾ ಕೇಂದ್ರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿಯ 2023- 2024ನೇ ವರ್ಷದ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಸಮೀಕ್ಷಾ ಯೋಜನಾ ಬೈಠಕ್ ನಡೆದಿದೆ. ಅಧ್ಯಕ್ಷತೆಯನ್ನು ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ
ಶ್ರೀ ವಸಂತ ಮಾಧವ ಇವರ ಉಪಸ್ಥಿತಿಯಲ್ಲಿ ಜರುಗಿದೆ.

ಶ್ರೀ ಉಮೇಶ್ ಎಂ, ಸಂಘಟನಾ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ, ಶ್ರೀ ಪಾಂಡುರಂಗ ಪೈ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಶ್ರೀ ನಾಗೇಶ್ ಕಾಮತ್ ಕೋಡಿ ಅಧ್ಯಕ್ಷರು ಶ್ರೀ ರಾಮ ವಿದ್ಯಾ ಕೇಂದ್ರ ಕೋಡಿ, ಶ್ರೀ ಮಹೇಶ ಹೈಕಾಡಿ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳು, ವಿಷಯ ಪ್ರಮುಖರು, ಶಾಲಾ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿಯ ಅಧ್ಯಕ್ಷರು , ಕಾರ್ಯದರ್ಶಿ , ಸದಸ್ಯರು ಶಿಕ್ಷಕರು ಭಾಗವಹಿಸಿದ್ದರು.ಬೈಠಕ್ ನಲ್ಲಿ ಹಿಂದಿನ ಶೈಕ್ಷಣಿಕ ವರ್ಷ ಆಯೋಜಿಸಿದ ವಿದ್ಯಾಭಾರತಿ ಕರ್ನಾಟಕದ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಲಾಯಿತು. ಮುಂದಿನ 2023-24 ನೇ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳು , ವಿಜ್ಞಾನ ಮೇಳ , ಗಣಿತ , ಸಂಸ್ಕೃತಿ ಜ್ಞಾನ ಮಹೋತ್ಸವ , ಕ್ರೀಡಾಕೂಟ , ಕಾರ್ಯಾಗಾರದ ವಿಷಯಗಳು ,ತರಬೇತಿ ನಡೆಯುವ ಸಂಸ್ಥೆಗಳನ್ನು ಗುರುತಿಸಲಾಗಿದೆ.

ಜಿಲ್ಲಾ ಸಮಿತಿಯ ಅಧ್ಯಕ್ಷ , ಕಾರ್ಯದರ್ಶಿ ಆಯ್ಕೆ :
ಜಿಲ್ಲಾ ಸಮಿತಿಯ ಮೂರು ವರ್ಷದ ಅವಧಿ ಪೂರ್ಣ ಗೊಂಡಿರುವುದರಿಂದ ಹೊಸದಾಗಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ. ಬೈಠಕ್ ನಲ್ಲಿ ಉಪಸ್ಥಿರಿದ್ದ ಸರ್ವರ ಒಪ್ಪಿಗೆ ಮೇರೆಗೆ ಅಧ್ಯಕ್ಷ ,ಕಾರ್ಯದರ್ಶಿಯವರ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶ್ರೀ.ಪಾಂಡುರಂಗ ಪೈ ಸಿದ್ಧಾಪುರ ಮೂರನೆಯ ಆವೃತ್ತಿಗೆ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಶ್ರೀ ಮಹೇಶ್ ಹೈಕಾಡಿ ಇವರನ್ನು ಎರಡನೆಯ ಆವೃತ್ತಿಗೆ ಸರ್ವಾನುಮತದಿಂದ ಪುನರ್ ಆಯ್ಕೆ ಮಾಡಲಾಯಿತು.
ಶ್ರೀ ಉಮೇಶ್ ಎಮ್ , ಸಂಘಟನಾ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಇವರು ಹೆಸರನ್ನು ಪ್ರಸ್ತಾಪಿಸಿದರು , ಸಭೆಯಲ್ಲಿ ಭಾಗವಹಿಸಿದ ಸರ್ವರೂ ಅನುಮೋದಿಸಿದರು , ಶ್ರೀ .ವಸಂತ ಮಾಧವ , ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಇವರು ಅಧ್ಯಕ್ಷ , ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದವರ ಹೆಸರನ್ನು ಘೋಷಿಸಿದರು.

ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ,ಸೇವಾಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ,ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರ , ಶ್ರೀ ಜನಾರ್ದನ ಶಾಲೆ ಎಳ್ಳಾರೆ , ಸರಸ್ವತಿ ವಿದ್ಯಾಲಯ ಸಿದ್ಧಾಪುರ, ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು , ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಆಕಾಡೆಮಿ ಸ್ಕೂಲ್ ಕುತ್ಯಾರು , ಶ್ರೀ ರಾಮ ವಿದ್ಯಾಕೇಂದ್ರ ಕೋಡಿ , ನಚಿಕೇತ ವಿದ್ಯಾಲಯ ಬೈಲೂರು
9 ಸಂಸ್ಥೆಗಳು ಬೈಠಕ್ ನಲ್ಲಿ ಭಾಗವಹಿಸಿದ್ದರು. ಶಾಂತಿ ಮಂತ್ರದೊಂದಿಗೆ ಬೈಠಕ್ ಸಂಪನ್ನಗೊಂಡಿತು.

 
 
 
 
 
 
 
 
 
 
 

Leave a Reply