ಶಿರ್ವ ಮಹಿಳಾ ಮಂಡಲ: ವಿಶ್ವ ಮಹಿಳಾ ದಿನಾಚರಣೆ

ನೆಹರೂ ಯುವ ಕೇಂದ್ರ ಉಡುಪಿ, ಶಿರ್ವ ಮಹಿಳಾ ಮಂಡಲ (ರಿ) ಶಿರ್ವ , ಮತ್ತು ಶೃಂಗಾರ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ,ಶಿರ್ವ ಇವರು ಸಂಯುಕ್ತ ಆಶ್ರಯದಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಸ್ಥಳೀಯ ವೈದ್ಯೆ,,ಶ್ರೀನಿವಾಸ್ ಮೆಡಿಕಲ್ ಕಾಲೇಜು,ಮುಕ್ಕ ಇಲ್ಲಿನ ಪ್ರಾಧ್ಯಾಪಕಿ ಡಾ..ಶ್ವೀತಾ ನಾಯಕ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀನಿವಾಸ ಮಹಾ ವಿದ್ಯಾಲಯ, ಮಂಗಳೂರು ಇಲ್ಲಿನ ಮನೋವೈದ್ಯರಾಗಿರುವ ಡಾ.ಮಿಥುನ್.ಎಸ್.ಅವರು ಮಹಿಳೆಯರಲ್ಲಿ ಅತಿಯಾಗಿ ತಲೆದೋರುವ ಮಾನಸಿಕ ಒತ್ತಡದ ಬಗ್ಗೆ ಮಾತನಾಡುತ್ತಾ ಒಂದು ನಿರ್ದಿಷ್ಟ ವಯಸ್ಸಿನ ನಂತರ ಸ್ತ್ರೀಯರಲ್ಲಿ ವಿವಿಧ ಕಾರಣಗಳಿಗಾಗಿ ಮಾನಸಿಕ ಒತ್ತಡಗಳು ಉಂಟಾಗುತ್ತವೆ.ಇವುಗಳಿಂದ ಹೊರಬರಬೇಕಾದರೆ ನಾವು ಅವರಲ್ಲಿ ಜಾಗೃತಿಯನ್ನುಂಟು ಮಾಡಬೇಕು.ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮಾಡಬೇಕು “ಎಂದರು.ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಸದಸ್ಯರು ಮತ್ತು ಶಿರ್ವ ಸಂಜೀವಿನಿ ಒಕ್ಕೂಟದ ಸದಸ್ಯರಿಗಾಗಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಈ ಸ್ಪರ್ಧೆಗಳನ್ನು ಶ್ರೀಮತಿ ಜಯಶ್ರೀ ಜಯಪಾಲ್ ಶೆಟ್ಟಿ ಅವರು ನಡೆಸಿಕೊಟ್ಟರು.ಡಾ.ಶ್ವೀತಾ ನಾಯಕ್ ಮತ್ತು ಡಾ.ಮಿಥುನ್ .ಎಸ್.ಅವರು ಬಹುಮಾನಗಳನ್ನು ವಿತರಿಸಿದರು. ಶ್ರೀಮತಿ ದೀಪಾ ಶೆಟ್ಟಿ ಮತ್ತು ಶ್ರೀಮತಿ ಪುಷ್ಪಾ ಆಚಾರ್ಯ ಅವರಿಂದ ಪ್ರಾರ್ಥನೆಯ ಬಳಿಕ ಮಹಿಳಾ ಮಂಡಲದ ಉಪಾಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ರಕಾಶ್ ಸುವರ್ಣ ಅವರು ಸರ್ವರನ್ನೂ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಶಿರ್ವ ಗ್ರಾಮಪಂಚಾಯತ್ ವ್ಯಾಪ್ತಿಯ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕದ ಮಹಿಳಾ ಸಿಬ್ಬಂದಿ ಗಳನ್ನು ಸನ್ಮಾನಿಸಲಾಯಿತು.ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಬಬಿತಾ ಜಗದೀಶ್ ಅರಸ ,ಖಜಾಂಚಿ ಶ್ರೀಮತಿ ಜೆಸಿಂತಾ ಮರಿಯಾ ಪುರ್ಟಾಡೋ ಅವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.ಕಾರ್ಯದರ್ಶಿ ಡಾ.ಸ್ಪೂರ್ತಿ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು.ಸಂಜೀವಿನಿ ಒಕ್ಕೂಟದ ಎಂಬಿಕೆ ಶ್ರೀಮತಿ ಶ್ವೇತಾ ಅವರು ಸನ್ಮಾನಿತರ ಪರಿಚಯ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಶಿರ್ವ ಮಹಿಳಾ ಮಂಡಲ ಹಾಗೂ ಕಾಪು ತಾಲೂಕು ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಹಿಳೆ ತನ್ನನ್ನು ತಾನು ತನ್ನ ಕುಟುಂಬಕ್ಕೆ ಸಮರ್ಪಿಸಿಕೊಳ್ಳುತ್ತಾ ತನ್ನ ಆರೋಗ್ಯದ ಬಗ್ಗೆ ದಿವ್ಯ ನಿರ್ಲಕ್ಪ್ಯ ತಾಳುತ್ತಾಳೆ.ಇದರ ಪರಿಣಾಮವಾಗಿ ಆಕೆ ಮಾನಸಿಕ ಒತ್ತಡಕ್ಕೊಳಗಾಗಿ ಹಲವು ಸಮಸ್ಯೆಗಳನ್ನು ಎದುರಿಸುವಂತಹ ಪರಿಸ್ಥಿತಿ ಎದುರಾಗುತ್ತದೆ..ಆದ್ದರಿಂದ ಮಹಿಳೆಯರು ಈ ಸಮಸ್ಯೆಯಿಂದ ಹೊರಬರಲು ತಮ್ಮಲ್ಲಿ ಜಾಗೃತಿ ಹೊಂದಬೇಕು.ಮನಸ್ಸನ್ನು ಶಾಂತವಾಗಿರಿಸಲು ಪ್ರಯತ್ನಿಸಬೇಕು.ಎಂದು ಹೇಳಿದರು.ಶ್ರೀಮತಿ ಜಯಶ್ರೀ ಜಯಪಾಲ್ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿ ಮಹಿಳಾ ಮಂಡಲದ ಕೋಶಾಧಿಕಾರಿ ಶ್ರೀಮತಿ ಜೆಸಿಂತಾ ಮರಿಯಾ ಪುರ್ಟಾಡೋ ಅವರು ಧನ್ಯವಾದವಿತ್ತರು.

 
 
 
 
 
 
 
 
 

Leave a Reply