ಶಿವಳ್ಳಿ ಕುಟುಂಬ ಉತ್ತರ ಅಮೇರಿಕಾ – ಸಮ್ಮಿಲನ

“ಸಂಘೇ ಶಕ್ತಿಃ ಕಲೌ ಯುಗೇ”  ಎಂಬ ಸುಭಾಷಿತದಂತೆ, ಮುಖ್ಯವಾಗಿ ಕಲಿಯುಗದಲ್ಲಿ ಸಂಘಟನೆ, ಜನಬಲ-ಧ್ವನಿ ಇಲ್ಲದ ಯಾವ ಕಾರ್ಯವೂ ಗುರಿ ತಲುಪುವುದು ಕಷ್ಟ. ಪೂರ್ವ ನಿಯೋಜಿತ ಉದ್ದೇಶದತ್ತ ಕಾರ್ಯೋನ್ಮುಖರಾಗಲು ಹಾಗೂ ನಮ್ಮೂರಿನ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುಸುವ ಮುಖ್ಯ ಉದ್ದೇಶದಿಂದ ನಮ್ಮ ಶಿವಳ್ಳಿ ಕುಟುಂಬ ಎಂಬ ಸಂಸ್ಥೆಯು 2021 ಸೌರಮಾನ ಯುಗಾದಿಯಿಂದು ಹುಟ್ಟಿಕೊಂಡಿದ್ದು ನಿಮಗೆಲ್ಲರಿಗೂ ತಿಳಿದ ವಿಷಯ.
 ಕಳೆದ ೨ ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಯೌಟ್ಯೂಬ್ ನೇರ ಪ್ರಸಾರದ ಮೂಲಕ ನಡೆಸಿದ್ದು, ಈಗ ತನ್ನ ೨ನೇ ಸಂವತ್ಸರವನ್ನು ಪೂರೈಸುವ ಸಂದರ್ಭದಲ್ಲಿ ಉತ್ತರ ಅಮೇರಿಕಾದ ಹೂಸ್ಟನ್ ಟೆಕ್ಸಾಸ್ ನಲ್ಲಿ “ಸಮ್ಮಿಲನ 2023” ಸಮಾವೇಶವನ್ನು ಏಪ್ರಿಲ್ 7-9 ರಂದು ಹಮ್ಮಿಕೊಂಡಿದೆ.

ಕಾರ್ಯಕ್ರಮದ ಸಂಕ್ಷಿಪ್ತ ವಿವರ: ಏಪ್ರಿಲ್ 7 : ದುರ್ಗಾ ನಮಸ್ಕಾರ ಪೂಜೆ, ಭಜನೆ ಮತ್ತು ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಚನ

ಏಪ್ರಿಲ್ 8 : ಬೆಳಿಗ್ಗೆ – ಮೆರವಣಿಗೆ, ಸಭಾ ಕಾರ್ಯಕ್ರಮ, ನಮ್ಮ ಶಿವಳ್ಳಿ ಕುಟುಂಬದ ವೃತ್ತಿಪರ ಕಲಾವಿದರ ನೇತೃತ್ವದಲ್ಲಿ ಗಾನ, ನಾದ, ನೃತ್ಯ ಮತ್ತು ಯಕ್ಷಗಾನ. ಮದ್ಯಾಹ್ನ – ಫ್ಯಾಶನ್ ಶೋ, ನಾಟಕ, ವಿವಿಧ ಸಾಂಸ್ಕೃತಿಯ ಕಾರ್ಯಕ್ರಮಗಳು ರಾತ್ರಿ : ಶ್ರೀಮತಿ ಅಖಿಲ ಪಜಿಮಣ್ಣು ಅವರಿಂದ ಗಾಯನ, ಹೆಸರಾಂತ  ಪಕ್ಕವಾದ್ಯ  ಕಲಾವಿದರೊಂದಿಗೆ

ಏಪ್ರಿಲ್ 9 :  ಪಿಕ್ನಿಕ್ , ಟೀಮ್ ಬಿಲ್ಡಿಂಗ್ ಚಟುವಟಿಕೆಗಳು ಮತ್ತು ಇನ್ನಿತರ ಕಾರ್ಯಕ್ರಮಗಳು.

 
 
 
 
 
 
 
 
 
 
 

Leave a Reply