ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ 

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಡಾ. ಪಿ. ವೆಂಕಟರಾಯ ಭಂಡಾರಿ

 ಡಾ. ಸುಲತಾ ವಿ. ಭಂಡಾರಿ

ಡಾI ಪಿ. ವಿ. ಭಂಡಾರಿ ಯವರು ನಮ್ಮ ಸಮಾಜಕ್ಕೆ ನೀಡಿದ ಸೇವೆ ಅಪಾರ. ಪ್ರಾಯಷಃ ಅವರು ಮಾಡಿದ ಸೇವೆಗಳನ್ನು ತಿಳಿಸಲು ಪುಟಗಳೇ ಸಾಲದು.

ಅಪ್ರತಿಮ ಸಾಧಕ ವೈದ್ಯರಾದ ಶ್ರೀಯುತರು ಉಡುಪಿಯ ಪ್ರಸಿದ್ಧ ಡಾ . ಎ. ವಿ ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯ ಆಡಳಿತ ನಿರ್ದೇಶಕರು ಹಾಗೂ ಮನೋವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನೂರಾರು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಮನೋ ವಿಕಾಸಕ್ಕೆ ಬೇಕಾದ ಮಾಹಿತಿ ಹಲವು ವರ್ಷಗಳಿಂದ ನಿರಂತರವಾಗಿ ನೀಡುತ್ತಾ ಬರುತ್ತಿರುವುದು ಗಮನಾಹ೯ ವಿಷಯ.

 ಅವಿಶ್ರಾಂತ ಕೆಲಸದ ನಡುವೆ ಸಿಕ್ಕ ಬಿಡುವಲ್ಲಿ *ಮನೋ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಕೃತಿಗಳನ್ನು ಬರೆದಿದ್ದಾರೆ.

  ಖ್ಯಾತ ಮನೋವೈದ್ಯರಾದ ಇವರು ಮಾನಸಿಕ ಸಮಸ್ಯೆ ಇರುವ, ರೋಗಿಗಳಿಗೆ, ಮಧ್ಯಪಾನ, ಡ್ರಗ್ಸ್ ಮುಂತಾದ ಚಟಗಳಿಗೆ ಬಲಿಯಾಗಿರುವ ಜನರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ ಹಲವು ಕುಟುಂಬಗಳನ್ನು ರಕ್ಷಿಸಿದ್ದಾರೆ.

    ಉಡುಪಿಯಲ್ಲಿ ಸರಕಾರಿ ಆಸ್ಪತ್ರೆಯನ್ನು ಸ್ಥಾಪಿಸುವುದಕ್ಕಾಗಿ ಚಳುವಳಿಯನ್ನೇ ಮಾಡಿರುವ ಇವರು ಸಾಮಾಜಿಕ ಸುಧಾರಣೆಗಾಗಿ ಹೋರಾಡುತ್ತಿರುವ *ಕ್ರಾಂತಿ ಮನೋಭಾವದ ಅಪರೂಪದ ವೈದ್ಯರು. ಬಡ ರೋಗಿಗಳಗೆ ತಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನೂ ನೀಡಿರುತ್ತಾರೆ.

 ಯಾವುದೇ ಬಡರೋಗಿ ಅಥವಾ ಅನಾಥರಾಗಿರುವ ರೋಗಿಗಳಿಗೆ ವಿಶೇಷ ಆಸಕ್ತಿಯಿಂದ ನಿರಂತರ ಶುಶ್ರೂಷೆ ನೀಡುತ್ತಿರುವುದನ್ನು ನಾವು ಮರೆಯುವಂತೆಯೇ ಇಲ್ಲ.

ಇವರ ಸಾಧನೆಗೆ ಪೂರಕವೆಂಬಂತೆ ರಾಜ್ಯ ಮನೋವಿಜ್ಞಾನ ಸಂಸ್ಥೆಯು ಕೊಡಮಾಡುವ ಎಸ್.ಎಸ್ ಜಯರಾಮ ಪ್ರಶಸ್ತಿ ‘ ಕ .ಸಾ.ಪ ವತಿಯಿಂದ ಸಾಹಿತ್ಯ ಸಮ್ಮೇಳನ ಗೌರವ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸ್ಪಂದನ ಪ್ರಶಸ್ತಿ ಸಹಿತ ವಿವಿಧ ಪುರಸ್ಕಾರಗಳು ಲಭಿಸಿವೆ.

ಹೀಗೆ ಸಾಹಿತ್ಯ ,ವೈದ್ಯಕೀಯ , ಸಾಮಾಜಿಕ ಸೇವೆಗಳ ಮೂಲಕ ಮನೆ ಮಾತಾಗಿದ್ದಾರೆ. 

ಇವರ ಶ್ರೀಮತಿ ಡಾ| ಸುಲತಾ ಭಂಡಾರಿ ಯಾವರೂ ತಜ್ಞ ವೈದ್ಯರು ಮತ್ತು ಸಮಾಜಕ್ಕಾಗಿ ಅನೇಕ ಸೇವಾ ಕಾರ್ಯಗಳನ್ನು ಮಾಡಿದವರು.

 ಇವರಿಗೆ ಇದೇ ಬರುವ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ 2:30ಕ್ಕೆ ನಡೆಯುವ ಸಮಾರಂಭದಲ್ಲಿ ಗೌರವ ಪುರಸ್ಕಾರ 2022 ನ್ನು ನೀಡಿ ಗೌರವಿಸುತ್ತಿದ್ದೇವೆ.

✒️ ರಾಘವೇಂದ್ರ ಪ್ರಭು ಕರ್ವಾಲು

 
 
 
 
 
 
 
 
 
 
 

Leave a Reply