ಗರ್ಭಕೋಶದ ಕತ್ತಿನ/ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾಹಿತಿ~ಡಾ. ರಾಜಲಕ್ಷ್ಮೀ, ವಾತ್ಸಲ್ಯ ಕ್ಲಿನಿಕ್, ಸಂತೆಕಟ್ಟೆ.

೧ ಗರ್ಭಕಂಠದ ಕ್ಯಾನ್ಸರ್ ಎಂದರೇನು?   ಭಾರತೀಯ ಮಹಿಳೆಯರಲ್ಲಿ ಅತಿಯಾಗಿ ಕಂಡು ಬರುವ ಕ್ಯಾನ್ಸರ್ ಇದಾಗಿದೆ. ಸಾಮಾನ್ಯವಾಗಿ 35-60 ವರ್ಷ ಪ್ರಾಯದ ಮಹಿಳೆಯರಲ್ಲಿ ಕಂಡುಬರುತ್ತದೆ. ಗರ್ಭಕಂಠದ ಜೀವಕೋಶಗಳಲ್ಲಿ ಹಲವು ಬದಲಾವಣೆಗಳಾಗಿ ಕ್ರಮೇಣ ಅವು ಕ್ಯಾನ್ಸರ್ ಕೋಶಗಳಾಗಿ ಪರಿವರ್ತನೆಗೊಳ್ಳುತ್ತವೆ.

೨. ಗರ್ಭಕಂಠದ ಕ್ಯಾನ್ಸರಗೆ ಕಾರಣಗಳೇನು? : ಬಹುತೇಕ ಮಹಿಳೆಯರಲ್ಲಿ HPV (Human Papilloma Virus) ಈ ಕಾಯಿಲೆಗೆ ಕಾರಣವಾಗಿರುತ್ತದೆ. ಇದು ಲೈಂಗಿಕವಾಗಿ ಹರಡುವ ವೈ ರಾಣುವಾಗಿರುತ್ತದೆ

೩. ಈ ಕ್ಯಾನ್ಸರ್ ಗೆ ಕಾರಣವಾಗುವ ಅಪಾಯಕಾರಿ ಅಂಶಗಳಾವುವು? : ಧೂಮಪಾನ
ಕುಟುಂಬದಲ್ಲಿ ಇತರರಿಗೆ ಈ ಕ್ಯಾನ್ಸರ್ ಇದ್ದಲ್ಲಿ ಅತಿಯಾದ ವಾಸನೆಯಿಂದ ಕೂಡಿದ ಬಿಳಿಸ್ರಾವ / ಕಂದು ಮಿಶ್ರಿತ ಬಿಳಿಸ್ರಾವ ಬೊಜ್ಜುತನ, ತುಂಬಾ ಸಣ್ಣ ಪ್ರಾಯದಲ್ಲಿ ಗರ್ಭವತಿಯಾಗುವುದು
ಸಣ್ಣದಾದ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆ, ಹಲವು ಬಾರಿ ಗರ್ಭಧಾರಣೆ, ಹಲವು ಪುರುಷ ರೊಂದಿಗೆ ಲೈಂಗಿಕ ಸಂಪರ್ಕ, ಲೈಂಗಿಕವಾಗಿ ಹರಡುವ ರೋಗಗಳು

೪. ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳೇನು? ಸಂಭೋಗದ ಸಮಯದಲ್ಲಿ ನೋವು ಸಂಭೋಗದ ನಂತರ ರಕ್ತಸ್ರಾವ ಋತುಬಂಧದ (Menopause) ನಂತರ ರಕ್ತಸ್ರಾವ ವಾಸನೆಯುಳ್ಳ/ ಕಂದು ಮಿಶ್ರಿತ ಬಿಳಿಸ್ರಾವ ಈ ರೋಗದ ಲಕ್ಷಣಗಳು.

೫. ಈ ರೋಗವನ್ನು ಪತ್ತೆಹಚ್ಚಲು ಪರೀಕ್ಷೆಗಳಿವೆಯೇ? : ಗರ್ಭಕಂಠದ ಜೀವಕೋಶಗಳು ಕ್ಯಾನ್ಸರ್ ಕೋಶಗಳಾಗಿ ಪರಿವರ್ತನೆ ಹೊಂದುವ ಮುನ್ನವೇ ಅವುಗಳಲ್ಲಾಗುವ ಬದಲಾವಣೆ ಗಳನ್ನು Screening ವಿಧಾನಗಳಾದ Pap Smear Test, VIA, VILI, HPV DNA ಎಂಬ ಪರೀಕ್ಷೆಗಳಿಂದ ಕಂಡುಹಿಡಿಯಲು ಸಾಧ್ಯವಿದೆ. ಅಲ್ಲದೇ Cervical Biopsy, Colposcopy ಪರೀಕ್ಷೆಗಳು ಕ್ಯಾನ್ಸರನ್ನು ಪತ್ತೆಹಚ್ಚುವ ವಿಧಾನಗಳಾಗಿವೆ

೬. ಗರ್ಭಕಂಠದ ಕ್ಯಾನ್ಸರನ್ನು ತಡೆಗಟ್ಟಲು ಸಾಧ್ಯವಿದೆಯೇ? : ಹೌದು, ನಿಯಮಿತವಾಗಿ Pap Test ಮಾಡಿಸಿಕೊಳ್ಳುವುದು, 9-45 ವಯಸ್ಸಿನ ಮಹಿಳೆಯರು HPV ಲಸಿಕೆ ಹಾಕಿಸಿ ಕೊಳ್ಳುವುದು ಹಾಗು ಸುರಕ್ಷಿತ ಲೈಂಗಿಕತೆಯಿಂದ ಈ ರೋಗವನ್ನು ತಡೆಗಟ್ಟಲು ಸಾಧ್ಯ

೭. ಗರ್ಭಕಂಠದ ಕ್ಯಾನ್ಸರ್ ಗೆ ಚಿಕಿತ್ಸೆ ಲಭ್ಯವಿದೆಯೇ? : ಹೌದು. ಪ್ರಾರಂಭಿಕ ಹಂತಗಳಲ್ಲಿ ಪತ್ತೆಯಾದರೆ ಸಂಪೂರ್ಣ ಗುಣಪಡಿಸಲು ಸಾಧ್ಯ. ಶಸ್ತ್ರಚಿಕಿತ್ಸೆ, ಕೀ ಮೋಥೆರಪಿ, ವಿಕಿರಣ ಚಿಕಿತ್ಸೆಯನ್ನು ಆಯಾ ಮಹಿಳೆಯ ಕಾಯಿಲೆಯ ಹಂತಕ್ಕನುಗುಣವಾಗಿ ನೀಡಲಾಗುತ್ತದೆ

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರನ್ನು ಸಂಪರ್ಕಿಸಿ.

 
 
 
 
 
 
 
 
 
 
 

Leave a Reply