ಯು.ಪಿ.ಎಂ.ಸಿ- ಕೃಷಿ ಕಮ್ಮಟ

ಬದುಕಿನ ನಿರ್ವಹಣೆಗಾಗಿ ಕೃಷಿ ಕ್ಷೇತ್ರವನ್ನು ಆಯ್ದುಕೊಂಡು ಪ್ರಾಮಾಣಿಕ ಪರಿಶ್ರಮದಿಂದ ಅದನ್ನು ನಿರ್ವಹಿಸಿ ಸ್ವಯಂ ಕೃಷಿಯಿಂದ ಪಡೆದ ಇಳುವರಿಯನ್ನು ಅನುಭವಿಸುವಾಗ ಬ್ರಹ್ಮಾನಂದ ದೊರೆಯುವುದಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು.

ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ 2015ರ ಹಳೆ ವಿದ್ಯಾರ್ಥಿಗಳ ಸಹಯೋಗದಲ್ಲಿ ಜನವರಿ 19ರಂದು ಯು.ಪಿ.ಎಂ.ಸಿ ಸಭಾಂಗಣದಲ್ಲಿ ಕೃಷಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೃಷಿ ಕ್ಷೇತ್ರದಲ್ಲಿ ಇಳುವರಿಯು ಶ್ರಮ ಸಾಧ್ಯವಾಗಿದ್ದು ಪ್ರಕೃತಿಯ ಲಾಲನೆ ಪೋಷಣೆಗಳಲ್ಲಿ ಕ್ರಮಬದ್ಧವಾದ ರೀತಿ ನೀತಿಗಳನ್ನು ಕಾಯ್ದುಕೊಳ್ಳುವುದರಿಂದ ಮಾತ್ರ ಅದು ಸಾಧ್ಯವಾಗುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಯು.ಪಿ.ಎಂ.ಸಿ ಯ 2015 ರ ಬಿ.ಕಾಂ ಪದವೀಧರ, ಪ್ರಸ್ತುತ ಸಕಲೇಶಪುರದ ಬಾಗೇ ಗ್ರಾಮದ ಜೇನು ಕೃಷಿ ತಜ್ಞ ಬಿ.ಎಸ್. ರಂಜಿತ್ ಇವರು ಜೇನು ಹುಳುಗಳು ವೈವಿಧ್ಯ, ಅವುಗಳ ಸಾಕಣೆ ಕ್ರಮ, ಅವುಗಳಿಂದ ಜೇನು ಸಿದ್ಧವಾಗುವರೆಗಿನ ವಿವಿಧ ಪ್ರಕ್ರಿಯೆಗಳನ್ನು ಪ್ರಾತ್ಯಕ್ಷಿಕೆಯ ಮ‌ೂಲಕ ತೋರಿಸಿದರು. ಕಾಲೇಜಿನ ವಿದ್ಯಾರ್ಥಿ ಶ್ರೀ ನಾಗರಾಜ್ ಶೆಣೈ ಉಪಸ್ಥಿತರಿದ್ದರು. ಉಡುಪಿ, ಮಂಗಳೂರಿನ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಹಲವಾರು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದು ಅವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ಎನ್.ಎಸ್.ಎಸ್ ಸಹ ಯೋಜನಾಧಿಕಾರಿ ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು, ಎನ್.ಎಸ್.ಎಸ್ ಯೋಜನಾಧಿಕಾರಿ ವಾಣಿಜ್ಯ ಉಪನ್ಯಾಸಕ ಶ್ರೀ ರಾಜೇಶ್ ಕುಮಾರು ಧನ್ಯವಾದವಿತ್ತರು, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply