ಜ.19: ಸಹಕಾರ ಭಾರತಿ ‘ಬೃಹತ್ ಜನಾಂದೋಲನ’

ಹಾಲು ಖರೀದಿಗೆ ಪ್ರೋತ್ಸಾಹ ಧನ, ನಂದಿನಿ ಪಶು ಆಹಾರಕ್ಕೆಸಬ್ಸಿಡಿಗೆ ರಾಜ್ಯ ಬಜೆಟ್ ನಲ್ಲಿ ವಿಶೇಷ ಅನುದಾನ ಆಗ್ರಹಿಸಿ ಸಹಕಾರ ಭಾರತಿ ‘ ಬೃಹತ್ ಜನಾಂದೋಲನ ‘- ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ” ಹೈನುಗಾರರ ಬೃಹತ್ ಹಕ್ಕೋತ್ತಾಯ ಸಭೆ “

ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ರೈತರು ಸೊಸೈಟಿಗಳಿಗೆ ಪೂರೈಸುವ ಹಾಲಿನ ದರವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ಕಳೆದ ಅಕ್ಟೋಬರ್ 27ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ” ಬೃಹತ್ ರೈತ ಸಮಾವೇಶ” ವನ್ನು ಸಹಕಾರ ಭಾರತೀ ಆಯೋಜಿಸಿ, ಸರಕಾರವನ್ನು ಒತ್ತಾಯಿಸಿ ಅಂಚೆ ಕಾರ್ಡ್ ಚಳವಳಿಯನ್ನು ನಡೆಸಿತ್ತು.

ರಾಜ್ಯ ಸರಕಾರಕ್ಕೆ ಉಡುಪಿ ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಕೆ ಹಾಗೂ ನವೆಂಬರ್ 8 ರಂದು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ* *ಬೊಮ್ಮಾಯಿಯವರು ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಸಹಕಾರ ಭಾರತಿಯ ಜಿಲ್ಲಾ ನಿಯೋಗ ಮುಖ್ಯಮಂತ್ರಿಗಳಿಗೆ ಹಾಲಿನ ದರ ಏರಿಸುವಂತೆ ಮನವಿಯನ್ನು ಸಲ್ಲಿಸಿತ್ತು.

ಸರಕಾರ ಹೈನುಗಾರ ರೈತರ ಆಕ್ರೋಶಕ್ಕೆ ಮಣಿದು ಪ್ರತಿ ಲೀಟರ್ ಗೆ ಕೇವಲ 2/- ರೂಪಾಯಿ ಮಾರಾಟ ದರ ಏರಿಸಲು ಸಮ್ಮತಿಯನ್ನು ನೀಡಿತ್ತು.
ಹಾಲಿನ ಖರೀದಿದರ ಎರಡು ರೂಪಾಯಿ ಏರಿಕೆಯಾಗಿರುವುದು ಏನೇನು ಸಾಲದು. ವಿಪರೀತವಾಗಿ ಏರುತ್ತಿರುವ ಹೈನುಗಾರಿಕೆಯ ಖರ್ಚು ವೆಚ್ಚಗಳು, ನಿರಂತರ ಪಶು ಆಹಾರದ ದರ ಏರಿಕೆ, ಕೃಷಿ ಕೂಲಿ ಕಾರ್ಮಿಕರ ಸಂಬಳ ,ಬೈ ಹುಲ್ಲು, ಪಶು ಚಿಕಿತ್ಸೆ, ಔಷಧ ವೆಚ್ಚ, ಸಾಗಾಟ ವೆಚ್ಚ ಎಲ್ಲವೂ ಏರುಗತಿಯಲ್ಲಿ ಸಾಗುತ್ತಿದ್ದು ಹೈನುಗಾರಿಕೆಯಲ್ಲಿ ತೊಡಗಿರುವ ಕೃಷಿಕರನ್ನು ಹೈರಾಣವಾಗಿಸಿದೆ.

ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಾಲಿಗೆ ಖರೀದಿ ದರ ಸಿಗದೆ ರಾಜ್ಯಾದ್ಯಂತ ಹೈನು ಗಾರರರಲ್ಲಿ ಆತಂಕ ಮತ್ತು ನಿರಾಸಕ್ತಿ ಮೂಡಿದ್ದು, ಹಾಲು ಉತ್ಪಾದನೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ರಾಜ್ಯದ ಎಲ್ಲಾ ಒಕ್ಕೂಟಗಳು ಕೂಡ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ.

ಫೆಬ್ರವರಿ ತಿಂಗಳಿನಲ್ಲಿ ರಾಜ್ಯ ಸರಕಾರ ಬಜೆಟ್ ಮಂಡಿಸಲಿದ್ದು, ಹೈನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಲೀಟರಿಗೆ ಕನಿಷ್ಠ 5/-ರೂಪಾಯಿ ಪ್ರೋತ್ಸಾಹ ಧನ ಮತ್ತು ದುಬಾರಿಯಾಗಿರುವ ನಂದಿನಿ ಪಶು ಆಹಾರಕ್ಕೆ ಕೆಜಿಗೆ ಕನಿಷ್ಠ 5/- *ರೂಪಾಯಿ ಸಬ್ಸಿಡಿಒದಗಿಸಲು ಬಜೆಟ್ನಲ್ಲಿ* ವಿಶೇಷ ಅನುದಾನ ನೀಡುವುದರ ಮೂಲಕ ರಾಜ್ಯದ ಲಕ್ಷಾಂತರ ಕುಟುಂಬಗಳ ಜೀವನೋಪಾಯವಾಗಿರುವ ಹೈನುಗಾರಿಕೆಯನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಅಗ್ರಹಿಸಿ

ಜನವರಿ 19 ,ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸತ್ಯಾಗ್ರಹ ಕಟ್ಟೆಯಲ್ಲಿ ” ಉಡುಪಿ ಜಿಲ್ಲೆಯ ಹೈನುಗಾರ ರೈತರ ಬೃಹತ್ ಜನಂದೋಲನ ಸಭೆ” ನಡೆಸಲಾಗುವುದು ಎಂದು* ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷರಾದ ಬೋಳ ಸದಾಶಿವ *ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಎರಡು ಮೂರು ತಿಂಗಳಿನಿಂದ ರೈತರ ಸಮಾವೇಶ, ಅಂಚೆ ಕಾರ್ಡ್ ಚಳವಳಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ರಾಜ್ಯದ ಹೈನುಗಾರರಿಂದ ಖರೀದಿಸುವ ಹಾಲಿಗೆ ಕನಿಷ್ಠ 5/- ರೂಪಾಯಿ ಏರಿಸಬೇಕೆಂದು ಸಹಕಾರ ಭಾರತಿ ಹೈನುಗಾರರನ್ನು ಸಂಘಟಿಸಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇತ್ತೀಚೆಗೆ ದನಗಳಿಗೆ ಚರ್ಮಗಂಟು ರೋಗವು ವ್ಯಾಪಕವಾಗಿ ಹರಡುತ್ತಿದ್ದು, ದನಗಳಿಗೆ ಲಸಿಕೆ ನೀಡಲು ಸರಕಾರದ ಪಶುಸಂಗೋಪನ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಕಂಡು ಬರುತ್ತಿದ್ದು, ಸರಕಾರ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಪಶುಗಳ ಆರೋಗ್ಯ ರಕ್ಷಣೆ ಮತ್ತು ಚರ್ಮಗಂಟು ರೋಗಕ್ಕೆ ಕಡಿವಾಣ ಹಾಕಲು ಸಾಕಷ್ಟು ಪ್ರಮಾಣದಲ್ಲಿ ಔಷಧಿ,ಕೊರತೆ ಇರುವ ಪಶುವೈದ್ಯರು ಮತ್ತು ನುರಿತ ಸಿಬ್ಬಂದಿಗಳನ್ನು ಆದಷ್ಟು ಬೇಗ ತುರ್ತು ನೆಲೆಯಲ್ಲಿ ಒದಗಿಸಬೇಕೆಂದು ಸಹಕಾರ ಭಾರತಿ ರಾಜ್ಯ ಸರಕಾರಕ್ಕೆ ಆಗ್ರಹ ಪೂರ್ವಕವಾಗಿ ಒತ್ತಾಯಿಸುತ್ತದೆ.

ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಳ ಮತ್ತು ನಂದಿನಿ ಪಶು ಆಹಾರಕ್ಕೆ ಸಬ್ಸಿಡಿ ನೀಡುವುದರ ಮೂಲಕ ಹೈನುಗಾರಿಕೆಗೆ ಶಕ್ತಿ ತುಂಬುವುದರ ಜೊತೆಗೆ ಹಾಲಿನ ಗ್ರಾಹಕರಿಗೆ ಯಾವುದೇ ಹೊರೆಯಾಗದಂತೆ ಕರ್ನಾಟಕ ರಾಜ್ಯದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ರೈತ ಕುಟುಂಬಗಳ ಸಹಾಯಕ್ಕೆ ರಾಜ್ಯ ಸರಕಾರ ಮುಂದಾಗಬೇಕೆಂದು ಸಹಕಾರ ಭಾರತಿ ಒತ್ತಾಯ ಪೂರಕವಾಗಿ ಆಗ್ರಹಿಸುತ್ತದೆ ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ರಾಜ್ಯ ಸರಕಾರವನ್ನು ಒತ್ತಾಯಿಸಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಭಾರತಿ ಮೈಸೂರು ವಿಭಾಗ ಸಂಘಟನಾ ಪ್ರಮುಖರಾದ ಶ್ರೀ ಮೋಹನ್ ಕುಮಾರ್ ಕುಂಬಳೇಕರ್, ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಟದ ಸಹ ಸಂಚಾಲಕರಾದ ಶ್ರೀ ಮಂಜುನಾಥ ಎಸ್ಕೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಶಾಂತ್, ಸಂಘಟನಾ ಕಾರ್ಯದರ್ಶಿ ಶ್ರೀ ಸುಜಿತ್ ಮತ್ತು ಜಿಲ್ಲಾ ಹಾಲು ಪ್ರಕೋಷ್ಟದ ಸಂಚಾಲಕರಾದ ಶ್ರೀ ಕನ್ನಾರು ಕಮಲಾಕ್ಷ ಹೆಬ್ಬಾರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply