ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಪರಿಣಾಮಕಾರಿ ತರಗತಿ ನಿರ್ವಹಣೆ- ಕಾರ್ಯಾಗಾರ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ವತಿಯಿಂದ ಶಿಕ್ಷಕರಿಗಾಗಿ ಪರಿಣಾಮಕಾರಿ ತರಗತಿ ನಿರ್ವಹಣೆ ಎಂಬ ವಿಚಾರದಲ್ಲಿ ಒಂದು ದಿನದ ಕಾರ್ಯಾಗಾರವು ಜುಲೈ 30 ರಂದು ನಡೆಯಿತು.

ಎಂ.ಐ.ಟಿ ಮಣಿಪಾಲದ ಡಾಟಾ ಸೈನ್ಸ್‌ ಆ್ಯಂಡ್ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಮುಖ್ಯಸ್ಥರಾದ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ.ಕರುಣಾಕರ್ ಕೋಟೆಗಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹಿಂದಿನ ಗುರುಕುಲ ಮಾದರಿಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಅವಶ್ಯಕತೆ ಇದ್ದು ಇದರಿಂದ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗುವುದಾಗಿ ಹೇಳುತ್ತಾ, ಶಿಕ್ಷಕತ್ವ ಹಾಗು ಗುರುತ್ವಗಳನ್ನು ಶಿಕ್ಷಕರು ಮೈಗೂಡಿಸಿಕೊಂಡಾಗ ಅವರ ಉಪದೇಶಗಳು ಮೌಲ್ಯಯುತವಾಗಿ ವಿದ್ಯಾರ್ಥಿಗಳಿಂದ ಸ್ವೀಕಾರಾರ್ಹವಾಗುವುವು, ಪದವಿಗಳು ಹಾಗೂ ಶಿಕ್ಷಣವು ಬೇರೆ ಬೇರೆಯಾಗಿದ್ದು ಪದವಿಧರರು ಶಿಕ್ಷಿತರಾದಾಗ ಮಾತ್ರ ಶಿಕ್ಷಕತ್ವದ ಜೊತೆಗೆ ಗುರುತ್ವವೂ ಅಭಿವ್ಯಕ್ತವಾಗಿ ಪರಿಣಾಮಕಾರಿ ಶಿಕ್ಷಕನಾಗಿ ತರಗತಿಯಲ್ಲಿ ಪ್ರಭಾವವನ್ನು ಬೀರಲು ಸಾಧ್ಯವಾಗುವುದಾಗಿ ಹೇಳಿದರು.
ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರಾಬರ್ಟ್ ಕ್ಲೈವ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಯೋಜಕರಾದ ಶ್ರೀ ಜಾವೇದ್ ಸ್ವಾಗತಿಸಿದರು, ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಹರಿಕೇಶವ್ ವಂದಿಸಿದರು, ಆಂಗ್ಲ ಭಾಷೆಯ ಉಪನ್ಯಾಸಕರಾದ ಶ್ರೀ ರಾಧಾಕೃಷ್ಣ ರಾವ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply