ಕನ್ನಡ ಶಾಲೆಯ ಮಕ್ಕಳು ಭವಿಷ್ಯದಲ್ಲಿ ಸಮಾಜದ ಚಿಂತಕರು- ಡಾ ಕಟ್ಟೆ ರವಿರಾಜ್ ಆಚಾರ್ಯ

ಉಡುಪಿ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುವ ಮಕ್ಕಳು ಶಾಲೆಯಲ್ಲಿ ಶಿಕ್ಷಣದೊಂದಿಗೆ ಅತ್ಯಂತ ಬೇಗ ಜೀವನ ಪಾಠ ಕಲಿಯುತ್ತಾರೆ ಹಾಗಾಗಿ ಆ ಮಕ್ಕಳಲ್ಲಿ ಸದಾ ಸಮಾಜಮುಖಿ ಚಿಂತನೆ ಮತ್ತೊಬ್ಬರಿಗೆ ಕಷ್ಟವಾದಾಗ ಸಹಾಯ ಮಾಡುವ ಗುಣ ರಕ್ತಗತವಾಗಿರುತ್ತದೆ ಎಂದು ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷರಾದ ಡಾ. ಕಟ್ಟೆ ರವಿರಾಜ ಆಚಾರ್ಯ ತಿಳಿಸಿದರು. ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳು ಯಾವುದೇ ಕೀಳರಿಮೆಯನ್ನು ಹೊಂದದೆ ತಮ್ಮ ಶಿಕ್ಷಣವನ್ನು ಹೊಂದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.ತಾವು ಸೇರಿದಂತೆ ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತೇ ಈ ಸ್ಥಾನಕ್ಕೆ ಬಂದಿದ್ದೇವೆ ಎಂದು ನೆನಪಿಸಿಕೊಂಡರು
ಸಮಗ್ರ ಜೀರ್ಣೋದ್ಧಾರಗೊಂಡು ವೈಭವದಿಂದ ಬ್ರಹ್ಮಕಲಶೋತ್ಸವ ನಡೆದ ಕಡಿಯಾಳಿಯ ವಿಶೇಷ ಪರಿಕಲ್ಪನೆಯ ಬ್ರಹ್ಮಕಲಶೋತ್ಸವದ ಕೊಡೆಯನ್ನು ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲಾ 92 ಮಕ್ಕಳು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರಿಗೆ ನೀಡಲಾಯಿತು
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ ಪಿ ಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು.ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗೇಶ್ ಹೆಗ್ಡೆ, ಮಾತನಾಡಿ ಬ್ರಹ್ಮ ಕಲಶೋತ್ಸವದ ಈ ಕೊಡೆಯನ್ನು ಮಕ್ಕಳು ಪ್ರಸಾದದ ರೂಪದಲ್ಲಿ ಸ್ವೀಕರಿಸಿ ಸದಾಕಾಲ ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಆಶಿಸಿದರು. ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಶ್ರೀ ಮಂಜುನಾಥ ಹೆಬ್ಬಾರ್, ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು ಶಾಲಾ ಹಳೆ ವಿದ್ಯಾರ್ಥಿ ಗುಂಡಿಬೈಲು ಮುರಳಿಧರ್ ರಾವ್ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 

Leave a Reply