ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ಜಾಥಾ

ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಬನ್ನಂಜೆ ಮತ್ತು ಉಡುಪಿ ಟೌನ್ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರಿಂದ ಭಾನುವಾರ ಬೆಳಿಗ್ಗೆ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ನಿಲಯದ ವಿದ್ಯಾರ್ಥಿಗಳಿಂದ ನಿಲಯದಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕ ಭವನದವರೆಗೆ 200 ವಿದ್ಯಾರ್ಥಿಗಳನ್ನು ಒಳಗೊಂಡ ಬೃಹತ್ ಜಾಥಾ ಹಮ್ಮಿಕೊಳ್ಳಲಾಯಿತು.

ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಚಾಲನೆ‌ ನೀಡಿದರು. ಪೌರಾಯುಕ್ತ ಡಾ. ಉದಯ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಅನಿತಾ ಮಡ್ಲೂರು , ಸಹಾಯಕ ನಿರ್ದೇಶಕರಾದ ರಮೇಶ್ ಎಸ್ ಭಾಗವಹಿಸಿದ್ದರು.
ನಿಲಯ ಮೇಲ್ವಿಚಾರಕಿ ಸುಚಿತ್ರಾಎಸ್ . ಎಸ್, ಐಟಿಡಿಪಿ ಸಿಬ್ಬಂದಿ ಶ್ರೀದೇವಿ, ನಿಲಯ ಸಿಬ್ಬಂದಿಗಳಾದ ಸುಜಾತಾ, ಸುಜಾತಾ ಎಚ್ ಪಿ, ಪದ್ದು, ಸುಲೋಚನಾ, ರಪಿತಾ, ಇಂದಿರಾ, ಶ್ರೀ ರಕ್ಷಾ, ಶಶಿಕಲಾ ಉಪಸ್ಥಿತರಿದ್ದರು.
ಜಾಥಾದಲ್ಲಿ ತ್ರಿವರ್ಣ ಸೀರೆಯುಟ್ಟ ಭಾರತ ಮಾತೆಯರು..ಡಾ ಬಿ ಆರ್ ಅಂಬೇಡ್ಕರ್ ಛತ್ರಪತಿ ಶಿವಾಜಿ ಕಿತ್ತೂರ ಚೆನ್ನಮ್ಮ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಮನ ಸೂರೆಗೊಂಡರು. ಮೆರವಣಿಗೆಯುದ್ಧಕ್ಕೂ ತ್ರಿವರ್ಣ ಧ್ವಜ ಹಿಡಿದು ವಿದ್ಯಾರ್ಥಿನಿಯರು ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಘೋಷಣೆ ಕೂಗಿದರು.

 
 
 
 
 
 
 
 
 
 
 

Leave a Reply