ಉಡುಪಿ ಜಿಲ್ಲೆಯಲ್ಲಿ ಮೆಡಿಕಲ್ ಮಾಫಿಯಾಗೆ ಕಡಿವಾಣ ಹಾಕುವಂತೆ ಆಗ್ರಹದೊಂದಿಗೆ ಮನವಿ.

ಉಡುಪಿ : ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಲ್ಲೂ ಆಯುರ್ವೇದಿಕ್ ಡಾಕ್ಟರ್ ಗಳು ರಾಜಾರೋಷವಾಗಿ ಅಲೋಪಥಿ ಮೆಡಿಸಿನ್ ಕೊಟ್ಟು ಬಡಜನರಿಂದ ಸಾವಿರಾರು ರೂಪಾಯಿ ಲೂಟಿ ಮಾಡುತ್ತಿರುವ ಬಗ್ಗೆ ಸಂಭಂದಪಟ್ಟ ಆರೋಗ್ಯ ಇಲಾಖೆ ಹಾಗೂ ಸರಕಾರ ಕ್ಕೆ ಶಾಸಕ ಸಂಸದರಿಗೆ ಗೊತ್ತಿದ್ದೇ ನಡೆಯುವಂತಹದ್ದು.
ಉಡುಪಿ ಜಿಲ್ಲೆಯಲ್ಲೂ ಕೂಡ ಗ್ರಾಮೀಣ ಭಾಗದಲ್ಲಿ ಹಾಗೂ ಪಟ್ಟಣ ,ನಗರ ಪ್ರದೇಶ ದಲ್ಲಿ ಕಾರ್ಯಾಚರಿಸುತ್ತಿರುವ ಅದೆಷ್ಟೋ ಖಾಸಗಿ ಕ್ಲಿನಿಕ್ ಗಳು ನೊಂದಣಿಯಾಗದೆ ತಮ್ಮ ತಮ್ಮ ಭರ್ಜರಿ ವ್ಯಾಪಾರ ನಡೆಸುತ್ತಲೇ ಇದೇ .

ಈ ಬಗ್ಗೆ ಸರಕಾರವಾಗಲಿ ಸಂಬಂಧಪಟ್ಟ ಇಲಾಖೆಗಳಾಗಲೀ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಕಣ್ಣಿದ್ದು ಕುರುಡರಾಗಿದ್ದಾರೆ.

ಈ ಬಗ್ಗೆ ಕೆಲವು ತಿಂಗಳ ಹಿಂದೆ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಅನೇಕ ಪತ್ರಕರ್ತರು ಸಾರ್ವಜನಿಕ ದೂರಿನ ಮೇರೆಗೆ ಕೆಲವು ಕ್ಲಿನಿಕ್ ಗೆ ಗೌಪ್ಯವಾಗಿ ತೆರಳಿ ಸ್ಟಿಂಗ್ ಆಪರೇಷನ್ ನಡೆಸಿ ಅಲ್ಲಿ ನಡೆಯುವ ಅಕ್ರಮ ಮೆಡಿಸಿನ್ ಮಾಫಿಯಾದ ಬಗ್ಗೆ ದಾಖಲೆ ಸಮೇತ ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೆ ಯಾವುದೇ ರೀತಿಯ ಕಾನೂನು ಕ್ರಮವನ್ನು ಕೈಗೊಂಡಿರುವುದಿಲ್ಲ ನಮ್ಮನ್ನಾಳುವ ಜನಪ್ರತಿನಿಧಿಗಳು ಸರಕಾರ ಹಾಗೂ ಅಧಿಕಾರಿಗಳು ತಮ್ಮ ತಮ್ಮ ಆಸ್ತಿ ಹಣ ಗಳಿಸುವ ಭರದಲ್ಲಿ ಬಡವರ ನಿರ್ಗತಿಕರ ಪ್ರಾಣಬಲಿ ಕೊಡುತ್ತಿರುವುದಂತು ಸತ್ಯ ಇದಕ್ಕೆ ರಾಜ್ಯ ಸರಕಾರ ಅಧಿಕಾರಿಗಳು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು ರಾಜ್ಯಾದ್ಯಂತ ಮೆಡಿಕಲ್ ಮಾಫಿಯಾಗೆ ಸಂಪೂರ್ಣ ಕಡಿವಾಣ ಹಾಕಬೇಕೆಂದು ಪ್ರಜ್ಞಾವಂತ ಸಾರ್ವಜನಿಕರು ನಮ್ಮ ಸಂಘಟನೆಗೆ ಮನವಿ ನೀಡಿದ್ದಾರೆ.

ಇದಕ್ಕೆ ಪೂರಕವಾಗಿ ಕುಂದಾಪುರದ ಪತ್ರಕರ್ತ ಕಿರಣ್ ಪೂಜಾರಿ ಎಂಬವರು ಅನೇಕ ಕ್ಲೀನಿಕ್ ಗಳಲ್ಲಿ ಗೌಪ್ಯವಾಗಿ ಸ್ಟಿಂಗ್ ಆಪರೇಷನ್ ಮಾಡಿ ದಾಖಲೆ ಸಮೇತ ಸಂಬಂಧ ಪಟ್ಟ ಇಲಾಖೆಗಳ ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಹಳ್ಳಿ ಹಳ್ಳಿಗಳಲ್ಲೂ ಆಯುರ್ವೇದಿಕ್ ಡಾಕ್ಟರ್ ಗಳು ರಾಜಾರೋಷವಾಗಿ ಅಲೋಪಥಿ ಮೆಡಿಸಿನ್ ಕೊಟ್ಟು ಬಡಜನರಿಂದ ಸಾವಿರಾರು ರೂಪಾಯಿ ವಸೂಲಿ ಮಾಡುವುದು ಹಾಗೂ ಜಿಲ್ಲಾದ್ಯಂತ ಅಕ್ರಮವಾಗಿ ಪರವಾನಗಿ ರಹಿತವಾಗಿ ಕಾರ್ಯಾಚರಿಸುತ್ತಿರುವ ಡಾಕ್ಟರ್ ಶಾಪ್, ಕ್ಲಿನಿಕ್, ನರ್ಸಿಂಗ್ ಹೋಂ,ಇನ್ನಿತ್ಯಾದಿ ವೈದ್ಯಕೀಯ ಸೇವೆಯ ಹೆಸರಿನಲ್ಲಿ ಇರುವ,
ಮೊಸ ಮಾಡುವ ಎಲ್ಲಾ ಕ್ಲೀನಿಕ್, ನರ್ಸಿಂಗ್ ಹೋಂ ಗಳು ವಿರುದ್ಧ ತನಿಖೆ ನಡೆಸಿ.

ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಶಿಕ್ಷೆ ವಿಧಿಸುವಂತೆ. ಆಗ್ರಹಿಸಿ ಉಡುಪಿ ಜಿಲ್ಲಾ RTI ಮತ್ತು ಸಾಮಾಜಿಕ ಹೋರಾಟ ಸಮಿತಿಯು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಗಳಾದ ವೀಣಾ ಬಿ ಎನ್.ರವರಿಗೆ ದೂರು ನೀಡಿದೆ

 
 
 
 
 
 
 
 
 
 
 

Leave a Reply