ಅಷ್ಟಮಠಗಳಿಗೆ ಲಿಖಿತ ಸಂವಿಧಾನ: ವಕೀಲರ ಬದಲಾವಣೆಯಿಂದ ಮರುಜೀವ

ಉಡುಪಿ: ಅಷ್ಟಮಠಗಳಿಗೆ ಲಿಖಿತ ಸಂವಿಧಾನ ಬೇಕು ಎಂದು ಪೇಜಾವರ ಮಠದ ಪೀಠ ಪರಿತ್ಯಕ್ತ ವಿಶ್ವವಿಜಯರು ಹೂಡಿದ ದಾವೆಯಲ್ಲಿ ಐದುವರೆ ವರ್ಷಗಳ ಬಳಿಕ ತಮ್ಮ ಪರವಾಗಿ ವಾದ ಮಾಡುತ್ತಿದ್ದ ವಕೀಲರನ್ನು ಬದಲಿಸಿದ್ದು, ಬುಧವಾರ ಪ್ರಧಾನ ಸತ್ರ ನ್ಯಾಯಾಲದಲ್ಲಿ ವಾದ-ಪ್ರತಿವಾದ ನಡೆದಿದೆ.

3 ದಶಕಗಳ ಹಿಂದೆ ಪೇಜಾವರ ಮಠದ ಪೀಠ ತ್ಯಾಗ ಮಾಡಿದ್ದ ವಿಶ್ವವಿಜಯ ತೀರ್ಥರು 2017ರಲ್ಲಿ ಅಷ್ಟ ಮಠಗಳ 10ಯತಿಗಳ ವಿರುದ್ಧ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನ್ಯಾಯದಾನ ವಿಳಂಬವಾಗುತ್ತಿರುವುದರಿಂದ ವಕೀಲರನ್ನು ಬದಲಾಯಿಸಿದ್ದು, ಇಂದಿನ ವಾದ ಪ್ರಕ್ರಿಯೆಯಿಂದ ಶೀಗ್ರ ನ್ಯಾಯ ಸಿಗಬಹುದು ಎಂಬ ವಿಶ್ವಾಸ ಮೂಡಿದೆ ಎಂದು ವಿಶ್ವವಿಜಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply