ಅಂದು 1400 ಕಿ.ಮೀ ಸಂಚರಿಸಿ ಮಗನನ್ನು ಕರೆ ತಂದ ತಾಯಿ : ಈಗ ಅದೇ ಮಗ ಉಕ್ರೇನ್‌ನಲ್ಲಿ ಬಾಕಿ..!!

ತೆಲಂಗಾಣ: ಕಳೆದ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಬರೋಬ್ಬರಿ 1400 ಕಿಲೋ ಮೀಟರ್ ದೂರ ಸ್ಕೂಟರ್ ನಲ್ಲೇ ಸಂಚರಿಸಿ ತನ್ನ ಮಗನನ್ನು ಕರೆದುಕೊಂಡು ಬರುವ ಮೂಲಕ ತೆಲಂಗಾಣದ ನಿಜಾಮ್ ಬಾದ್ ಜಿಲ್ಲೆಯ ಶಾಲಾ ಶಿಕ್ಷಕಿ ರಝಿಯಾ ಬೇಗಂ ಭಾರೀ ಸುದ್ದಿಯಾಗಿದ್ದರು.
ಇಂದು ಅವರ ಅದೇ ಮಗ ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾನೆ. ಇತ್ತ ತಾಯಿ ಏನೂ ಮಾಡಲಾಗದೆ ಚಿಂತಾ ಕ್ರಾಂತರಾಗಿದ್ದಾರೆ.
ರಝಿಯಾ ಬೇಗಂ ಅವರ ಮಗ ನಿಝಾಮುದ್ದೀನ್‌ ಅಮಾನ್ ಉಕ್ರೇನಿನ ಸುಮಿ ಪ್ರಾಂತ್ಯದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಎಂಬಿಬಿಎಸ್‌ ನ ಮೊದಲನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ದಾಳಿ ಪ್ರಾರಂಭಿಸಿದ ದಿನದಿಂದ ನಿಝಾಮುದ್ದೀನ್‌ ಮತ್ತು ಇತರ ಹಲವು ವಿದ್ಯಾರ್ಥಿಗಳು ಬಂಕರ್ ನಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿ ತೀವ್ರ ಸಂಕಷ್ಟ ಪಡುತ್ತಿದ್ದಾರೆ. ತನ್ನ ಮಗ ಸೇರಿದಂತೆ ಸಂಕಷ್ಟದಲ್ಲಿ ಸಿಲುಕಿರುವ ಎಲ್ಲಾ ವಿದ್ಯಾರ್ಥಿಗಳನ್ನು ಕರೆ ತರಲು ವ್ಯವಸ್ಥೆ ಮಾಡುವಂತೆ ತಾಯಿ ರಝಿಯಾ ಬೇಗಂ ಪ್ರಧಾನ ಮಂತ್ರಿ ಮೋದಿ, ತೆಲಂಗಾಣ ಸಿಎಂ ಕೆಸಿಆರ್, ತೆಲಂಗಾಣ ಗೃಹ ಸಚಿವ ಮಹಮ್ಮದ್‌ ಮಹ್ಮೂದ್‌ ಅಲಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ರಝಿಯಾ ಬೇಗಂ ಕಳೆದ ಲಾಕ್ ಡೌನ್ ಸಂದರ್ಭ ಊರಿಗೆ ಮರಳಲು ವಾಹನ ವ್ಯವಸ್ಥೆ ಇಲ್ಲದೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಬಾಕಿಯಾಗಿದ್ದ ತನ್ನ ಮಗನನ್ನು ಮರಳಿ ಕರೆತರಲು ಸ್ಕೂಟರ್ ನಲ್ಲೇ 1400 ಕಿಮೀ ಸಂಚರಿಸಿ ಸುದ್ದಿಯಾಗಿದ್ದರು.

 
 
 
 
 
 
 
 
 
 
 

Leave a Reply