ಸಾಸ್ತಾನ ನಿವಾಸಿ ಕುವೈಟ್ ನಲ್ಲಿ ನಿಧನ

ಕಳೆದ ಹಲವು ವರ್ಷಗಳಿಂದ ಕುವೈಟ್ ನಲ್ಲಿ ಮೆಕ್ಯಾನಿಕ್ ಉದ್ಯೋಗದಲ್ಲಿದ್ದ ಸಾಸ್ತಾನ ನಿವಾಸಿ ಜಾಕ್ಸನ್ ಒಲಿವೇರ (50) ಅವರು ಇಂದು ಬೆಳಿಗ್ಗೆ ಕುವೈಟ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜಾಕ್ಸನ್ ಇಂದು ಮಧ್ಯಾಹ್ನ ಕರ್ತವ್ಯ ಮುಗಿಸಿ ಅವರು ವಾಸವಿದ್ದ ಕೊಠಡಿಗೆ ಬಂದು ಕುಳಿತಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದರು ಎಂದು ತಿಳಿದು ಬಂದಿದೆ.

ಸಾಸ್ತಾನ ಪಾಂಡೇಶ್ವರ ನಿವಾಸಿಯಾದ ಜಾಕ್ಸನ್ ಅವರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಜಾಕ್ಸನ್ ಅವರ ಸಹೋದರಿ ಉದ್ಯಾವರದ ಸಾಂಸ್ಕೃತಿಕ ಸಂಸ್ಥೆ ನಿರಂತರ ಸಂಘಟನೆಯ ಸಕ್ರಿಯ ಸದಸ್ಯೆ, ಇವರಲ್ಲದೆ ಜಾನೆಟ್, ಜೇಸನ್, ಜೆಸಿಂತಾ ಎಂಬ ಸಹೋದರ ಸಹೋದರಿಯನ್ನು ಅಗಲಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

 
 
 
 
 
 
 
 
 
 
 

Leave a Reply