100 ಮೀ ಒಳಗೆ 5 ಕ್ಕಿಂತ ಹೆಚ್ಚು ಸಕ್ರೀಯ ಕೋವಿಡ್ ಪ್ರಕರಣಗಳಿದ್ದಲ್ಲಿ ಕಂಟೈನ್‌ ಮೆಂಟ್‌ ಜೋನ್‌, ಮನೆ ಸೀಲ್‌ ಡೌನ್‌ – ಸಚಿವ ಸುನೀಲ್‌ ಕುಮಾರ್‌

ಉಡುಪಿ: 100 ಮೀಟರ್ ಒಳಗೆ 5 ಕ್ಕಿಂತ ಹೆಚ್ಚು ಸಕ್ರೀಯ ಪ್ರಕರಣಗಳಿದ್ದರೆ ಆ ಭಾಗವನ್ನು ಕಂಟೈನ್ ಮೆಂಟ್ ಜೋನ್ ಮಾಡುವುದರೊಂದೆ ಮನೆಯನ್ನು ಸೀಲ್‌ ಡೌನ್‌ ಮಾಡಿ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರಿಗೆ ಸ್ಥಳಾಂತರ ಮಾಡಲಾಗುವುದು ಎಂದು ನೂತನ ಸಚಿವ ವಿ. ಸುನೀಲ್‌ ಕುಮಾರ್‌ ಹೇಳಿದರು.

ಅವರು ಶನಿವಾರ ಕೋವಿಡ್‌ ನಿರ್ವಹಣೆ ಮತ್ತು ನೆರೆ ಹಾನಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈಗಾಗಲೇ ಜಿಲ್ಲಾಡಳಿತ ಕೋವಿಡ್‌ ನಿಯಂತ್ರಣಕ್ಕೆ ಉತ್ತಮ ಪ್ರಯತ್ನ ಮಾಡಿದ್ದು ಇತ್ತೀಚೆಗೆ ನಿರಂತರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸದ್ಯ 1368 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವ್‌ ಬಂದವರನ್ನು ಕೋವಿಡ್‌ ಕೇರ್‌ ಸೆಂಟರ್‌ ಗಳಿಗೆ ಸ್ಥಳಾಂತರ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದ್ದು ಮನೆಯವರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು.

ಈಗಾಗಲೇ ಜಿಲ್ಲೆಯಲ್ಲಿ 2000 ಬೆಡ್‌ ಗಳನ್ನು ಕೋವಿಡ್‌ ಕೇರ್‌ ಸೆಂಟರ್‌ ಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಆಕ್ಸಿಜನ್‌ ಸಮಸ್ಯೆ ಆಗದಂತೆ ಉತ್ಪಾದನಾ ಘಟಕಗಳನ್ನು ನಿರ್ಮಿಸಲಾಗುತ್ತಿದ್ದು ಹೆಬ್ರಿಯ ಘಟಕ ಈಗಾಗಲೇ ಆರಂಭವಾಗಿದ್ದು, ಕಾರ್ಕಳ, ಕುಂದಾಪುರ ಮತ್ತು ಉಡುಪಿಯ ಘಟಕಗಳು ವಾರದಲ್ಲಿ ಆರಂಭ ಮಾಡಲು ನಿರ್ಧರಿಸಲಾಗುವುದು ಎಂದರು.

ಅಗಸ್ಟ್‌ ತಿಂಗಳ 30 ರ ಒಳಗೆ ಜಿಲ್ಲೆಯಲ್ಲಿ ಐಸಿಯು ಘಟಕಗಳನ್ನು ಹೆಚ್ಚಿಸಲು ನಿರ್ಧಾರ ಮಾಡ ಲಾಗಿದ್ದು, ಕುಂದಾಪುರದಲ್ಲಿ 15, ಉಡುಪಿ 20 ಮತ್ತು ಕಾರ್ಕಳದಲ್ಲಿ 15 ಬೆಡ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ನಷ್ಠವಾಗಿಲ್ಲ ಆದರೂ ಮುಂಜಾಗೃತಾ ಕ್ರಮವಾಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಗಿದೆ. ತಾಲೂಕು ಹಂತದಲ್ಲಿ ಯಾವುದೇ ವಿಕೋಪಗಳು ಸಂಭವಿಸಿದ್ದಲ್ಲಿ 48 ಗಂಟೆಗಳ ಒಳಗೆ ಪರಿಹಾರವನ್ನು ಆಯಾ ತಾಲೂಕು ತಹಶೀಲ್ದಾರ ಗಳು ವಿತರಿಸಲು ಕ್ರಮ ವಹಿಸಲು ಸೂಚಿಸಲಾಗಿದೆ. ಈಗಾಗಲೇ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಖಾತೆಯಲ್ಲಿ ರೂ 11 ಕೋಟಿ ಹಣ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಘುಪತಿ ಭಟ್‌, ಲಾಲಾಜಿ ಆರ್‌ ಮೆಂಡನ್‌, ಸುಕುಮಾರ್‌ ಶೆಟ್ಟಿ, ಜಿಲ್ಲಾಧಿಕಾರಿ ಜಿ ಜಗದೀಶ್‌, ಪೋಲಿಸ್‌ ಅಧೀಕ್ಷಕರಾದ ಎನ್‌ ವಿಷ್ಣುವರ್ಧನ್‌, ಜಿಪಂ ಸಿಇಒ ಡಾ|ನವೀನ್‌ ಭಟ್‌ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply