ಉಡುಪಿ ಶಿರಿಬೀಡು ಸರಸ್ವತಿ ಅನುದಾನಿತ ಹಿ. ಪ್ರಾ. ಶಾಲೆ ಅಭಿವೃದ್ಧಿಗೆ ಕಂಕಣ ಬದ್ಧ – ಶಾಸಕ ರಘುಪತಿ ಭಟ್

ಉಡುಪಿ : ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶಿರಿಬೀಡು, ಉಡುಪಿ ಶಾಲೆ ದುಸ್ಥಿತಿಯಲ್ಲಿದ್ದು, ಮಳೆಗೆ ಮಾಡು ಸೋರುತ್ತಿದೆ. ಈ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದು ಶಾಸಕ ಕೆ ರಘುಪತಿ ಭಟ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲೆಯಲ್ಲಿ ಹಳೆಯ ಕಾಲದ ತಿರುವಾಂಕೂರಿನ ರಾಜಮನೆತನದ ರಾಜ ರವಿವರ್ಮ ಬಿಡಿಸಿರುವ ಸರಸ್ವತಿ ದೇವಿಯ ಥೈಲ ಚಿತ್ರ ಕಣ್ಮನ ಸೆಳೆಯುತ್ತದೆ. ಚಿತ್ರಗಳನ್ನು ವೀಕ್ಷಿಸಿ ಬಳಿಕ ಶಾಲಾಭಿವೃದ್ಧಿ ಸಮಿತಿ ಸದಸ್ಯರಲ್ಲಿ ಶಾಲೆ ಅಭಿವೃದ್ಧಿ ಕುರಿತು ಚರ್ಚಿಸಿದರು. ಶಾಲೆಯಲ್ಲಿ 50 ಮಂದಿ ವಿದ್ಯಾರ್ಥಿಗಳ ದಾಖಲಾತಿ ಇದ್ದು, ಪುರಾತನ ಹಿನ್ನೆಲೆಯ ಈ ಶಾಲೆಯನ್ನು ಕನ್ನಡ ಶಾಲೆಯಾಗಿ ಉಳಿಸಿ ಅಭಿವೃದ್ಧಿ ಪಡಿಸಲು ಶಾಸಕರ ಅನುದಾನದಿಂದ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ರಘುಪತಿ ಭಟ್ ಶಾಲಾಭಿವೃದ್ಧಿ ಸಮಿತಿಗೆ ಭರವಸೆ ನೀಡಿದರು.

 ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿಯ ಉಪ ನಿರ್ದೇಶಕ ಎನ್. ಎಚ್ ನಾಗೂರ್, ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸದಸ್ಯ ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply