ನವ್ಯ ಹಿತ ಹಿರಿಯ ನಾಗರೀಕರ ಆರೈಕೆ ಸಂಸ್ಥೆಯ ಲೋಗೋ ಆನಾವರಣ ಮತ್ತು ಹೂ ತೋಟ ನಿಮಾ೯ಣ ಕಾಯ೯ಕ್ರಮ

ಉಡುಪಿ :- ಸುನಾಗ್ ಆಸ್ಪತ್ರೆ ಉಡುಪಿ ಇದರ ನವ್ಯ ಹಿತ ಹಿರಿಯ ನಾಗರಿಕರ ಆರೈಕೆ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಇದರ ಆಶ್ರಯದಲ್ಲಿ ಪೆಡೂ೯ರು ಬುಕ್ಕಿಗುಡ್ಡೆ ಯಲ್ಲಿ ಆಗಸ್ಟ್ 10 ರಂದು ನವ್ಯ ಹಿತ ಹಿರಿಯ ನಾಗರೀಕರ ಆರೈಕೆ ಸಂಸ್ಥೆಯ ಲೋಗೋ ಆನಾವರಣ ಮತ್ತು ಹೂ ತೋಟ ನಿಮಾ೯ಣ ಕಾಯ೯ಕ್ರಮ ನಡೆಯಿತು.

ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉರಗ ತಜ್ಞ ಮತ್ತು ಸಾಹಿತಿ ಗುರುರಾಜ್ ಸನೀಲ್ , ಈ ರೀತಿಯ ವಿನೂತನ ಯೋಜನೆ ಅತ್ಯಂತ ವಿಶಿಷ್ಟವಾಗಿದೆ. ಹಿರಿಯ ನಾಗರೀಕರಿಗೆ ಉತ್ತಮ ಆಶ್ರಯ ಒದಗಿಸು ದಲ್ಲದೆ ಅವರ ಆರೈಕೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಅಲ್ಲದೆ ಪ್ರಕೃತಿ ಬೆಳೆಸುವ ಉದಾತ್ತ ಉದ್ದೇಶ ಹೊಂದಿರುವ ಈ ನವ್ಯ ಹಿತ ಕೇರ್ ಹೋo ಮಾದರಿ ಸಂಸ್ಥೆಯಾಗಲಿ ಎಂದು ಶುಭ ಹಾರೈಸಿದರು.

ಅತಿಥಿಗಳಾದ ಕ.ಸಾ.ಪ ಉಡುಪಿ ತಾಲೂಕು ಘಟಕಾಧ್ಯಕ್ಷ ರವಿರಾಜ್ ಹೆಚ್.ಪಿ, ಕನಾ೯ಟಕ ಬ್ಯಾಂಕಿನ ಚೀಫ್ ಮೆನೇಜರ್ ನಂದಕುಮಾರ್ ಹೆಚ್.ಎಸ್, ಇಂಜಿನಿಯರ್ ವಿಜಯ ಕುಮಾರ್, ಪ್ರಥ್ವೀಶ್ ಭಟ್ ಮುಂತಾದವರಿದ್ದರು.

ಸಂಸ್ಥೆಯ ಮುಖ್ಯಸ್ಥರು ಸುನಾಗ್ ಆಸ್ಪತ್ರೆಯ ವೈದ್ಯಕೀಯ ನಿದೇ೯ಶಕ ಡಾ|ನರೇಂದ್ರ ಕುಮಾರ್ ಹೆಚ್.ಎಸ್ ಸ್ವಾಗತಿಸಿ ಸಂಸ್ಥೆಯ ಉದ್ದೇಶಗಳನ್ನು ತಿಳಿಸಿದರು.ಡಾ| ವೀಣಾ ನರೇಂದ್ರ ಕುಮಾರ್, ಪುತ್ರಿಯರಾದ ಸುನವ್ಯ, ಸಂಹಿತ ಉಪಸ್ಥಿತರಿದ್ದರು. ಈ ಸಂದಭ೯ದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು.
 
 
 
 
 
 
 
 
 
 
 

Leave a Reply