ಸಿಎಂ ಆಗುತ್ತೇನೆಂದು ಒಬ್ಬರು ಕಾದು ಕುಳಿತಿದ್ದಾರೆ~ ಸುಮಲತಾ ಅಂಬರೀಶ್

ಮಂಡ್ಯ: ಸ್ವಾಭಿಮಾನಿ ಮಂಡ್ಯ ಜಿಲ್ಲೆಗೆ ಆಗಮಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸ್ವಾಗತ. ಒಂದು ಕಾಲದಲ್ಲಿ ಉತ್ತರ ಪ್ರದೇಶ ಗೂಂಡಾ ರಾಜ್ಯವಾಗಿತ್ತು. ಜನಸಾಮಾನ್ಯರು ಓಡಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರು ರೌಡಿಗಳಿಗೆ ಮಾಮೂಲಿ ಹಣ ಕೊಟ್ಟು ಬೇಸತ್ತಿದ್ದರು. ಸದ್ಯ ಯೋಗಿ ಅಧಿಕಾರಕ್ಕೆ ಬರುತ್ತಿದ್ದಂತೆ ರೌಡಿಗಳು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದರು.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರದ ನಿಮಿತ್ತು ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸಿದ್ದಾರೆ. ಈ ವೇಳೆ ನಿಗದಿಯಾಗಿರುವ ಸಮಾವೇಶದಲ್ಲಿ ಸಂಸದೆ ಸುಮಲತಾ ಮಾತನಾಡುತ್ತಾ, ಯೋಗಿ ಆದಿತ್ಯನಾಥ್ ಅವರು ಅಧಿಕಾರ ಉತ್ತರ ಪ್ರದೇಶ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಜನರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಅಕ್ರಮಗಳನ್ನು ಬುಲ್ಡೋಜರ್​ನಿಂದ ತಡೆದ ನಾಯಕ ಯೋಗಿ ಆದಿತ್ಯನಾಥ್ ಅವರು. ಇದು ನಮ್ಮಲ್ಲೂ ಅನ್ವಯ ಆಗಬೇಕಾದರೆ ಡಬಲ್ ಎಂಜಿನ್ ಸರ್ಕಾರವನ್ನು ಬೆಂಬಲಿಸಿ. ವಿಶ್ವ ಮೆಚ್ಚಿದ ಧೀಮಂತ ನಾಯಕ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಪ್ರಗತಿ ಸಾಧಿಸಿದೆ. ಅದು ಮುಂದುವರಿಯಬೇಕು, ಆ ಜವಬ್ದಾರಿ ನಮ್ಮ ಮೇಲಿದೆ. ಮಂಡ್ಯದಲ್ಲಿ ಬದಲಾವಣೆ ಸಂಧರ್ಭ ಬಂದಿದೆ. ಪಕ್ಷೇತರ ಸಂಸದೆ ಆಗಿ ಮಾಡಿದ ಸಾಧನೆಗೆ ಸಹಕಾರ ನೀಡಿದ್ದು ನರೇಂದ್ರ ಮೋದಿ ಸರ್ಕಾರ ಎಂದು ಸುಮಲತಾ ಹೇಳಿದರು.

ಮಂಡ್ಯದಲ್ಲಿ ಕಳೆದ ಬಾರಿ 7ಕ್ಕೆ 7 ಸ್ಥಾನ ಜೆಡಿಎಸ್‌ ಗೆದ್ದರು ಯಾವುದೇ ಅಭಿವೃದ್ಧಿ ಆಗಿಲ್ಲ. ಮೈಶುಗರ್ ಕಾರ್ಖಾನೆ ಓಪನ್ ಮಾಡಲು ಸಂಸದೆ ಬರಬೇಕಾಯ್ತು. ಪಾಂಡವಪುರ ಕಾರ್ಖಾನೆ ಆರಂಭಿಸಲು ಯಾವ ಶಾಸಕರು ಮನಸ್ಸು ಮಾಡಲಿಲ್ಲ. ಅದು ಮಾಡಿದ್ದು ಸುಮಲತಾ ಅಂಬರೀಶ್. ಇದಕ್ಕೆಲ್ಲಾ ಸಹಕಾರ ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದು ಜೆಡಿಎಸ್ ಶಾಸಕರ ವಿರುದ್ಧ ಸುಮಲತಾ ವಾಗ್ಧಾಳಿ ನಡೆಸಿದರು.

ಈ ಬಾರಿ ಚುನಾವಣೆಯಲ್ಲಿ ಅತಂತ್ರ ಆದರೆ ಸಾಕು, ಸಿಎಂ ಆಗುತ್ತೇನೆ ಎಂದು ಒಬ್ಬರು ಕಾದು ಕುಳಿತಿದ್ದಾರೆ. ಒಂದು ಕುಟುಂಬ ವರನ್ನು ಬೆಂಬಲಿಸಿದ್ದೀರಾ. ಒಂದೇ ಕುಟುಂಬ ಅಭಿವೃದ್ಧಿ ಆದರೆ ಸಾಕಾ ಎಂದು ಯೋಚಿಸಿ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸುಮಲತಾ ಟಾಂಗ್ ಕೊಟ್ಟಿದ್ದಾರೆ.

 
 
 
 
 
 
 
 
 
 
 

Leave a Reply