ಎಚ್ ಸುಜಯೀಂದ್ರ ಹಂದೆ ವಿರಚಿತ “ರುರು ಪ್ರಮದ್ವರಾ” ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮ

ಕೋಟ: ಕಳೆದ 15 ವರ್ಷಗಳಿಂದ ಡಾ. ಪಿ. ಸದಾನಂದ ಮಯ್ಯರ ಸಾರಥ್ಯದಲ್ಲಿ ಹಾಗೂ ಕಲಾ ಪೋಷಕ ಹಾಗೂ ಕಲಾವಿದರಾದ ಜನಾರ್ಧನ ಹಂದೆಯವರ ನಿರ್ದೇಶನ, ಸಂಯೋಜನೆಯಲ್ಲಿ ನಡೆಯುತ್ತಿರುವ ಸುದರ್ಶನ ಮಯ್ಯಾಸ್ ಯಕ್ಷಗಾನವು ಮೇ.೨೯ ಡಾ. ಎಚ್.ಎನ್. ಕಲಾಕ್ಷೇತ್ರ ಜಯನಗರ ಬೆಂಗಳೂರಿನಲ್ಲಿ ಈ ವರ್ಷ ಎಚ್ ಸುಜಯೀಂದ್ರ ಹಂದೆ ವಿರಚಿತ “ರುರು ಪ್ರಮದ್ವರಾ” ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಹಲವಾರು ಮೇಳಗಳಲ್ಲಿ ಸರ್ವ ಪಾತ್ರಗಳನ್ನು ನಿರ್ವಹಿಸಿ ಜನಮೆಚ್ಚುಗೆ ಪಡೆದಿರುವ ಯಕ್ಷಗಾನ ಕಲಾವಿದ ತುಂಬ್ರಿ ಭಾಸ್ಕರ ಬಿಲ್ಲವರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕರ್ನಾಟಕ ಬ್ಯಾಂಕ್‌ನ ಡಿ.ಜಿ. ಎಮ್. ನಾಗರಾಜ್ ಐತಾಳ್ ಪ್ರಚಂಡ ಯಶಸ್ಸನ್ನು ಕಂಡಿರುವ ಪ್ರಭಾವಿ ಆಹಾರ ತಜ್ಞ ಮಯ್ಯಾಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಪಿ. ಸದಾನಂದ ಮಯ್ಯ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಕಲಾಪೋಷಕರಾದ ಜನಾರ್ದನ ಹಂದೆ, ಬೆಂಗಳೂರಿನ ಯಕ್ಷದೇಗುಲದ ಕೋಟ ಸುದರ್ಶನ ಉರಾಳರು, ಮಾಧುರಿ ಶ್ರೀರಾಮ್, ರಘುಪ್ರಸಾದ ಕೆದಿಲಾಯ, ಶ್ರೀರಾಮ ನೀಲಾವರ ಮತ್ತು ರಶ್ಮಿ ಪ್ರಸಾದ್ ಉಪಸ್ಥಿತರಿದ್ದರು.
ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಎಚ್. ಸುಜಯೀಂದ್ರ ಹಂದೆ ವಿರಚಿತ “ರುರು-ಪ್ರಮದ್ವರಾ” ಯಕ್ಷಗಾನ ಪ್ರದರ್ಶನ ನಡೆಯಿತು.

 
 
 
 
 
 
 
 
 
 
 

Leave a Reply