ರೋಟರಿ ಕ್ಲಬ್ ಉಡುಪಿ ರಾಯಲ್ ಗೆ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ

ಇಂದ್ರಾಳಿಯ ಶ್ರೀಕೃಷ್ಣ ಪೆಟ್ರೋಲಿಯಂ ನಲ್ಲಿ ಜಿಲ್ಲಾ ಗವರ್ನರ್ ರೊ. ಎಂ.ಜಿ ರಾಮಚಂದ್ರಮೂರ್ತಿ ದಂಪತಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.  ಸದಸ್ಯರಾದ ರೊ. ಲಕ್ಷ್ಮಿಕಾಂತ್ ಬೆಸ್ಕೂರ್ ಇವರ ಸಂಪೂರ್ಣ ಸಹಕಾರದಿಂದ ಹಮ್ಮಿಕೊಂಡ ಯೋಜನೆ ಇ-ವೇಸ್ಟ್ ಕಲೆಕ್ಷನ್ ಸೆಂಟರ್ ಅನ್ನು ಜಿಲ್ಲಾ ಗವರ್ನರ್ ಅವರು ಉದ್ಘಾಟಿಸಿ, ತಮ್ಮ ಮನೆಗಳಲ್ಲಿ ಅಥವಾ ಉದ್ಯಮ ಗಳಲ್ಲಿ ಶೇಖರಣೆಯಾಗುವ ಇ ವೇಸ್ಟ್ ಗಳನ್ನು ಈ ಕಲೆಕ್ಷನ್ ಸೆಂಟರಿಗೆ ತಂದು ಹಾಕುವಂತೆ ತಮ್ಮ ಆತ್ಮೀಯರಲ್ಲಿ ವಿನಂತಿಸಿ, ಹೆಚ್ಚಿನ ಪ್ರಚಾರವನ್ನು ನೀಡಿ ಇದರ ಉಪಯೋಗವನ್ನು ಜನಸಾಮಾನ್ಯರು ಪಡೆದುಕೊಳ್ಳುವಂತಾಗಲಿ ಎಂದು ಹಾರೈಸಿದರು.

ಬಳಿಕ  ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಜಿಲ್ಲಾ ಗವರ್ನರ್ ದಂಪತಿಗಳಿಂದ ತ್ರಿಕಾಲ ಪೂಜೆಯನ್ನು ಮಾಡಿಸಲಾಯಿತು.  ಮತ್ತು ಅವರಿಗೆ ಕಾಮಾಕ್ಷಿ ದೇವರ ಸಮ್ಮುಖದಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಅವರು ರೋಟರಿ ಕ್ಲಬ್ ಉಡುಪಿ ರಾಯಲ್ ಸಮಾಜಕ್ಕಾಗಿ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಶ್ಲಾಘಿಸಿದರು ಮತ್ತು ಇನ್ನೂ ಹೆಚ್ಚು ಸದಸ್ಯರನ್ನು ಸೇರಿಸಿಕೊಂಡು ಈ ಕ್ಲಬ್ ಇನ್ನೂ ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಸಿಸ್ಟೆಂಟ್ ಗವರ್ನರ್ ರೊ.ಡಾ| ಸುರೇಶ್ ಶೆಣೈ ಮತ್ತು ಜೋನಲ್ ಲೆಫ್ಟಿನೆಂಟ್ ರೊ. ಉಮೇಶ್ ರಾವ್ ಅವರು ಶುಭಾಶಂಸನೆಗೈದರು. ನಿಯೋಜಿತ ಅಸಿಸ್ಟೆಂಟ್ ಗವರ್ನರ್ ರೊ. ರಾಮಚಂದ್ರ ಉಪಾಧ್ಯಾಯ, ಮಾಜಿ ಅಸಿಸ್ಟೆಂಟ್ ಗವರ್ನರ್ ಗಳಾದ ರೊ. ದಿನೇಶ್ ಹೆಗ್ಡೆ ಆತ್ರಾಡಿ, ರೊ. ಸುಬ್ರಹ್ಮಣ್ಯ ಬಾಸ್ರಿ, ರೊ. ಸೇಸಪ್ಪ ರೈ, ಜಿಲ್ಲಾ ಪದಾಧಿಕಾರಿಗಳು ಮತ್ತು ವಲಯದ ಇತರ ಕ್ಲಬ್ ಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೇವರ ಸ್ವಾದಿಷ್ಟ ಭೋಜನ ಪ್ರಸಾದ ಆಸ್ವಾದಿಸುವುದರೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು. ರೋಟರಿ ಕ್ಲಬ್ ಉಡುಪಿ ರಾಯಲ್ ನ ಅಧ್ಯಕ್ಷರಾದ ರೊ. ತೇಜೇಶ್ವರ್ ರಾವ್ ಸ್ವಾಗತಿಸಿದರು.  ಕಾರ್ಯದರ್ಶಿ ರೊ. ಮಂಗಳ ಚಂದ್ರಕಾಂತ್ ಪ್ರಾರ್ಥಿಸಿದರು. ರೊ. ಸುಧಾಕರ್ ಪೆರಂಪಳ್ಳಿ ವಂದಿಸಿದರು. ರತ್ನಾಕರ್ ಇಂದ್ರಾಳಿ ನಿರೂಪಿಸಿದರು.  ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ರೊ. ಮಂಜುನಾಥ್ ಮಣಿಪಾಲ್, ರೊ. ಲಕ್ಷ್ಮಿಕಾಂತ್ ಬೆಸ್ಕೂರ್, ರೊ. ಲಕ್ಷ್ಮೀ ಕಿನ್ನಿಮುಲ್ಕಿ, ರೊ. ಮೊಹಮ್ಮದ್ ಮೌಲ, ರೊ. ಕೀರ್ತಿರಾಜ್, ರೊ. ಸುರೇಖ ಶೆಟ್ಟಿ, ರೊ. ಸುಬ್ಬಣ್ಣ ಮುಂತಾದವರು ಉಪಸ್ಥಿತರಿದ್ದರು.ರೋಟರಿ ಕ್ಲಬ್ ಉಡುಪಿ ರಾಯಲ್ ಗೆ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ

 
 
 
 
 
 
 
 
 
 
 

Leave a Reply