ಕುತ್ಪಾಡಿ: ಕಳೆ ಕೀಳುವ ಅಭಿಯಾನದಲ್ಲಿ ವಿದ್ಯಾರ್ಥಿಗಳ ಕಲರವ

ಶನಿವಾರದಂದು ಮೊನ್ನೆಯಷ್ಟೆ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿದ ನಿಟ್ಟೂರು ಪ್ರೌಢ ಶಾಲೆಯ10ನೇ ತರಗತಿಯ 36 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ ಕುತ್ಪಾಡಿ ಭಾಗದ 3 ಗದ್ದೆಗಳಲ್ಲಿ (1 ಎಕ್ರೆ) ಕಳೆ ಕೀಳುವ ಅಭಿಯಾನದಲ್ಲಿ ಪಾಲುಗೊಂಡು ಸಂಭ್ರಮಿಸಿದರು. ಇವರೊಂದಿಗೆ ಕುತ್ಪಾಡಿ ಭಾಗದ ಕೃಷಿ ಪ್ರಮುಖರಾದ ಪ್ರದೀಪಚಂದ್ರ ಕುತ್ಪಾಡಿ, ಉಮೇಶ್, ಸದಾನಂದ ಪೂಜಾರಿ, ಹರೀಶ್ ಸಕ್ರಿಯವಾಗಿ ತೊಡಗಿಸಿಕೊಂಡು ಮಾರ್ಗದರ್ಶನ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಅನಸೂಯ ಅಧ್ಯಾಪಕರುಗಳಾದ ಎಚ್.ಎನ್ ಶೃಂಗೇಶ್ವರ, ಸೀಮಾ, ರಾಮದಾಸ್ ನಾಯ್ಕ, ಅಶೋಕ್ ಎಂ. ಹಾಗೂ ರಕ್ಷಕರಾದ ಮಲ್ಲಿಕಾ ಉಡುಪ ಮಕ್ಕಳೊಂದಿಗೆ ನಿರಂತರ ಮೂರು ತಾಸು ಕಳೆ ಕಿತ್ತು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಟ್ರಸ್ಟ್ ನ ಸದಸ್ಯರಾದ ದಿನಕರ ಬಾಬು ಉಪಸ್ಥಿತರಿದ್ದರು. ಇವರೆಲ್ಲರಿಗೂ ಕೇದಾರೋತ್ಥಾನ ಟ್ರಸ್ಟ್ ಹಾಗೂ ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರೂ, ಶಾಸಕರೂ ಆದ ಕೆ. ರಘುಪತಿ ಭಟ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನೆ ಸಲ್ಲಿಸಿದರು.

ಮುಂದಿನ ದಿನ ಪುನಃ ಇವರು ಕಳೆ ಕೀಳುವ ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು. ತೋಟದಮನೆ ದಿವಾಕರ ಶೆಟ್ಟಿಯವರು ಕೊಡವೂರು ಶ್ರೀ ಸಾಯಿಬಾಬಾ ಮಂದಿರದ ವತಿಯಿಂದ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಿದರು. 

 
 
 
 
 
 
 
 
 
 
 

Leave a Reply