ಆರ್ಥಿಕವಾಗಿ ಹಿಂದುಳಿದ ವಿಪ್ರ ವಿದ್ಯಾರ್ಥಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ) ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದಮೂರ್ತಿ ಅಧ್ಯಕ್ಷತೆಯಲ್ಲಿ ಸೋಮವಾರ ಸಾಂದೀಪನಿ ಶಿಷ್ಯ ವೇತನ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿಪ್ರ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ (DBT) ಮುಖಾಂತರ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯಲಿದೆ.

ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ,ಮಾನ್ಯ ಕಂದಾಯ ಸಚಿವ ಆರ್.ಅಶೋಕ್‌, ಮುಜರಾಯಿ,ಹಜ್‌ ಮತ್ತು ವಕ್ಫ್ ಸಚಿವೆ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾ ಅಧ್ಯಕ್ಷ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ , ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಭಾ.ಆ.ಸೇ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಭಾ.ಆ.ಸೇ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ) ನಿರ್ದೇಶಕ ವೇ.ಬ್ರ ಡಾ. ಭಾನುಪ್ರಕಾಶ್ ಶರ್ಮಾ,ಸುಬ್ರಾಯ ಹೆಗಡೆ ಗೌರಿಬಣ್ಣಗಿ, ವತ್ಸಲ ನಾಗೇಶ್, ಜಗನ್ನಾಥ್ ಕುಲಕರ್ಣಿ, ಕೆ.ಎನ್.ಛಾಯಾಪತಿ, ಜಗದೀಶ್ ಹುನಗುಂದ, ಪವನ್ ಕುಮಾರ್, ಬಾಲಕೃಷ್ಣ, ಶ್ರೀನಿವಾಸ್, ರಾಘವೇಂದ್ರ ಭಟ್, ರಾಜೇಂದ್ರ ಪ್ರಸಾದ್, ಪುರುಷೋತ್ತಮ್, ರಂಗ ವಿಠ್ಠಲ ಹಾಗೂ ಸಿಬ್ಬಂದಿ ವರ್ಗದವರು ಚಾಲನೆ ನೀಡಿದರು.

ಇದೊಂದು ಐತಿಹಾಸಿಕ ದಿನವಾಗಿದ್ದು, ಸ್ವಾತಂತ್ರದ ನಂತರ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಆರ್ಥಿಕವಾಗಿ ಹಿಂದುಳಿದ ವಿಪ್ರ ವಿದ್ಯಾರ್ಥಿಗಳಿಗೆ ದೊರಕುತ್ತಿರುವ ಸರ್ಕಾರಿ ಸೌಲಭ್ಯ.

ಈ ಯೋಜನೆಯು 19 ಜನವರಿ 2021 ರಿಂದ ಪ್ರಾರಂಭವಾಗಿ 30 ಏಪ್ರಿಲ್‌ 2021 ರ ವರೆಗೆ ವಿಧ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು. ಇದರ ಫಲಿತಾಂಶವಾಗಿ ಸುಮಾರು 9200 ವಿದ್ಯಾರ್ಥಿಗಳಿಗೆ ನಿರ್ವಹಣ ಶುಲ್ಕ 15000/- ರೂ ಗಳನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ನೀಡಲಾಗಿದೆ. ಇದರ ಒಟ್ಟು ಅಂದಾಜು ವೆಚ್ಚ ಸುಮಾರು 14.00 ಕೋಟಿ ರೂಪಾಯಿಗಳಾಗಿರುತ್ತದೆ.

 
 
 
 
 
 
 
 
 
 
 

Leave a Reply