SSLC, ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ದ್ವಿತೀಯ ಪಿಯುಸಿ ಮತ್ತು SSLC ಪರೀಕ್ಷೆ 1ರ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ. ಕರ್ನಾಟಕ ಶಾಲಾ‌ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಅಂತಿಮ ವೇಳಾಪಟ್ಟಿ ಪ್ರಕಟ ಮಾಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ ಮಾರ್ಚ್ 22 ವರೆಗೆ ಪರೀಕ್ಷೆ ನಡೆಯಲಿದೆ. SSLC ಪರೀಕ್ಷೆ ಮಾರ್ಚ್ 25 ರಿಂದ ಏಪ್ರಿಲ್ 6ವರೆಗೆ ಪರೀಕ್ಷೆ ನಡೆಯಲಿದೆ.

SSLC ಪರೀಕ್ಷೆಯ ಪರೀಕ್ಷಾ ವೇಳಾಪಟ್ಟಿ

ಮಾರ್ಚ್ 25- ಪ್ರಥಮ ಭಾಷೆ

ಮಾರ್ಚ್ 27- ಸಮಾಜ ವಿಜ್ಞಾನ

ಮಾರ್ಚ್ 30 – ವಿಜ್ಞಾನ

ಏಪ್ರಿಲ್ 2 – ಗಣಿತ

ಏಪ್ರಿಲ್ 4- ತೃತೀಯ ಭಾಷೆ

ಏಪ್ರಿಲ್ 6- ದ್ವೀತಿಯ ಭಾಷೆ

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

ಮಾ. 1- ಕನ್ನಡ, ಅರೇಬಿಕ್

ಮಾ. 4- ಗಣಿತ, ಶಿಕ್ಷಣ ಶಾಸ್ತ್ರ

ಮಾ. 5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಮಾ. 6- ಮಾಹಿತಿ ತಂತ್ರಜ್ಞಾನ, ರೀಟೈಲ್, ಹೆಲ್ತ್ ಕೇರ್, ಆಟೋ ಮೊಬೈಲ್

ಮಾ.7- ಇತಿಹಾಸ, ಭೌತಶಾಸ್ತ್ರ

ಮಾ.9- ಐಚ್ಛಿಕ ಕನ್ನಡ, ಲೆಕ್ಕಾಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

ಮಾ. 11- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಮಾ.13- ಇಂಗ್ಲಿಷ್

ಮಾ.15- ಹಿಂದೂಸ್ತಾನಿ ಸಂಗೀತ,ಮನಃಶಾಸ್ತ್ರ,ರಸಾಯನಶಾಸ್ತ್ರ, ಮೂಲ ಗಣಿತ

ಮಾ. 16- ಅರ್ಥಶಾಸ್ತ್ರ

ಮಾ. 18- ಭೂಗೋಳಶಾಸ್ತ್ರ, ಜೀವಶಾಸ್ತ್ರ

ಮಾ. 20- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

ಮಾ.21- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ಮಾ.22- ಹಿಂದಿ

 
 
 
 
 
 
 
 
 
 
 

Leave a Reply