ಅಣ್ಣಾಮಲೈ ದಾರಿ ಹಿಡಿಯುವರೇ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್’.?

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ವೃತ್ತಿ ನಿಷ್ಠೆ, ಪ್ರಾಮಾಣಿಕತೆ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿರುವಂತ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಹೊಸ ನಡೆ, ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 

ಅಲ್ಲದೇ ಅಣ್ಣಾಮಲೈ ಹಾದಿಯನ್ನೇ ಹಿಡಿಯುತ್ತಾರ ರವಿ ಡಿ ಚೆನ್ನಣ್ಣನವರ್ ಎಂಬ ಚರ್ಚೆ ಆರಂಭವಾಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ರವಿ ಡಿ ಚೆನ್ನಣ್ಣನವರ್ ಅವರನ್ನು ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಿ ಆದೇಶಿಸಿತ್ತು.

ಪ್ರಸ್ತುತ ಸಿಐಡಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವಂತ ರವಿ ಡಿ ಚೆನ್ನಣ್ಣನವರ್ ಅವರು, ಇದೀಗ ಮಠಗಳಿಗೆ ಭೇಟಿ ನೀಡಿ, ಮಠಾಧೀಶರಿಂದ ಆಶೀರ್ವಾದ ಪಡೆಯುತ್ತಿರೋದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮಠಕ್ಕೆ ಭೇಟಿ ನೀಡುತ್ತಿರುವ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್, ಚಿತ್ರದುರ್ಗದ ಬಸವ ಮಾಚಿದೇವ ಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರೇ, ಕಾಗಿನೆಲೆ ಪೀಠಕ್ಕೆ ತೆರಳಿ, ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ಇದಲ್ಲದೇ ಹರಿಹರ ಪೀಠದ ವಚನಾನಂದ ಶ್ರೀಗಳು, ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರನ್ನು ಭೇಟಿಯಾಗಿ, ಆಶೀರ್ವಾದ ಪಡೆದಿದ್ದಾರೆ.

ಇದನ್ನು ಗಮನಿಸಿದ ಅನೇಕರು, ಈಗಾಗಲೇ ಐಪಿಎಸ್ ಹುದ್ದೆ ತೊರೆದು, ತಮಿಳುನಾಡು ರಾಜಕೀಯಕ್ಕೆ ಎಂಟ್ರಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋತು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವಂತ ಅಣ್ಣಾಮಲೈ ಹಾದಿಯನ್ನೇ ಹಿಡಿಯಲಿದ್ದಾರೆ ಎನ್ನುತ್ತಿದ್ದಾರೆ.

ಐಪಿಎಸ್ ಹುದ್ದೆ ತೊರೆದು, ರವಿ ಚೆನ್ನಣ್ಣನವರ್ ಕೂಡ ಅಣ್ಣಾಮಲೈ ಅಂತೆ ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೇ ಎಸ್ ಟಿ ಮೀಸಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವಂತ ಅವರು, ಇಲ್ಲಿಂದ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಓದರೆ ಈ ಕುರಿತು ರವಿ ಚೆನ್ನಣ್ಣನವರ್ ಸ್ಪಷ್ಟನೆ ನೀಡಬೇಕಾಗಿದೆ.

 
 
 
 
 
 
 
 
 
 
 

Leave a Reply