ಭೂಗತ ಪಾತಕಿ, ಡಿ ಕಂಪನಿಯ ಶಾರ್ಪ್ ಶೂಟರ್ ರಶೀದ್ ಮಲಬಾರಿ ಸಹಚರನ ಬರ್ಬರ ಕೊಲೆ

ಬೆಂಗಳೂರು: ಮಂಗಳೂರಿನ ಕುಖ್ಯಾತ ಭೂಗತ ಪಾತಕಿ, ಡಿ ಕಂಪನಿಯ ಶಾರ್ಪ್ ಶೂಟರ್ ರಶೀದ್ ಮಲಬಾರಿ ಗ್ಯಾಂಗ್​ನ ಸಹಚರ ಸೈಯದ್ ಕರೀಂ ಅಲಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಬೆಂಗಳೂರಿನ ಗೋವಿಂದಪುರದ ಆಂಜನೇಯ ‌ದೇವಸ್ಥಾನದ ಬಳಿ ನಡೆದಿದೆ.

ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರೌಡಿ ಸೈಯದ್ ಕರೀಂ ಅಲಿಯನ್ನು ಚಾಕುವಿನಿಂದ ಚುಚ್ಚಿ, ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಕುಖ್ಯಾತ ರೌಡಿ ಅನೀಸ್ ಎಂಬಾತನ ಪತ್ನಿಯ ಜೊತೆ ಅಕ್ರಮ ಸಂಬಂಧದ ಶಂಕೆಯಿಂದ ಈ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಇದೀಗ ಜೈಲಿನಲ್ಲಿರುವ ಅನೀಸ್ ಸಹಚರರಿಂದ ಈ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಪೊಲೀಸರು ಹಿಂದೊಮ್ಮೆ ಅನೀಸ್ ಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದರು. ತನ್ನ ಮೇಲೆ ನಡೆದ ಶೂಟೌಟ್ ಜಾಗದಲ್ಲೇ ಅಲಿಗೆ ಸ್ಥಳ ನಿಗದಿ ಪಡಿಸಿ ಅದೇ ಜಾಗದಲ್ಲೆ ಅಲಿ ಕೊಲೆಯಾಗುವಂತೆ ನೋಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.ಹತ್ಯೆಗೀಡಾದ ಸೈಯದ್ ಕರೀಂ ಅಲಿಯು ಕುಖ್ಯಾತ ಡಿ ಕಂಪನಿಯ ಶಾರ್ಪ್ ​ಶೂಟರ್​. ಮಂಗಳೂರು ಮೂಲದ ರಶೀದ್ ಮಲಬಾರಿ ಗ್ಯಾಂಗ್​ನಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ.

Leave a Reply