ಕಾಸರಗೋಡಿನಿಂದ ಕರ್ನಾಟಕಕ್ಕೆ ಹೋಗಿ ಬರಲು ನಾಲ್ಕು ಕಡೆ  ಪಾಸ್ ಅಗತ್ಯವಿಲ್ಲ 

ಕಾಸರಗೋಡು: ಕಾಸರಗೋಡಿನಿಂದ ದೈನಂದಿನ ಚಟುವಟಿಕೆಗೆಗಳಿಗೆ ಕರ್ನಾಟಕಕ್ಕೆ ಹೋಗಿ ಬರಲು ​ನಾಲ್ಕು ಕಡೆಗಳಲ್ಲಿ ​ಇನ್ನು ಮುಂದೆ ನಿಯಮಿತ ಪಾಸ್ ಅಗತ್ಯವಿಲ್ಲ ಎಂಬ ಮಹತ್ವಪೂರ್ಣ ನಿರ್ಧಾರ ಕೈಗೊಳ್ಳಲಾಗಿದೆ  . ಅದರಂತೆ ಕಾಸರಗೋಡು ಜಿಲ್ಲೆಯಿಂದ ಪ್ರತಿನಿತ್ಯ ಕರ್ನಾಟ ಕಕ್ಕೆ ಹೋಗಿ ಬರುವವರಿಗೆ ನಿಯಮಿತ ಪಾಸ್ ನೀಡುವ ವಿಧಾನವನ್ನು ಹಿಂಪಡೆಯಲಾಗಿದೆ ಎಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಬುಧವಾರ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತೀರ್ಮಾನ ಪ್ರಕಟಿಸಿದ್ದಾರೆ.

ಇನ್ನು ಮುಂದೆ ಆಂಟಿಜೆನ್ ತಪಾಸಣೆ ನಡೆಸಿದ ಬಳಿಕ ಲಭಿಸುವ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಸಹಿತ ಇತರ ದಾಖಲೆಗಳನ್ನು ಕೋವಿಡ್-19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಾಯಿಸಿದರೆ ಸಾಕು. ರಾಷ್ಟ್ರೀಯ ಹೆದ್ದಾರಿ 66 ತಲಪ್ಪಾಡಿ ಚೆಕ್ ಪೋಸ್ಟ್ ನಲ್ಲಿ ಇದಕ್ಕೆ ಅಗತ್ಯವಿರುವ ತರಬೇತಿ ಮತ್ತು ಇತರ ತಾಂತ್ರಿಕ ಸೌಲಭ್ಯಗಳನ್ನು ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದಲ್ಲಿ ಒದಗಿಸಲಾಗು ವುದು. ಎಲ್ಲ ಪ್ರಯಾಣಿಕರ ಮಾಹಿತಿಗಳನ್ನು ಕರ್ನಾಟಕಕ್ಕೆ ಹೋಗುವ ಮತ್ತು ಹಿಂತಿರುಗುವ ಸಂದರ್ಭದಲ್ಲಿ ಗೂಗಲ್ ಸ್ಪ್ರೆಡ್ ಶೀಟ್ ನಲ್ಲಿ ದಾಖಲಿಸಲಾಗುವುದು.

ಇದೇ ವೇಳೆ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲು ಪಾಣತ್ತೂರು, ಮಾಣಿಮೂಲೆ, ಪೆರ್ಲ ಮತ್ತು ಜಾಲ್ಸೂರು ರಸ್ತೆಗಳ ಮೂಲಕ ಅನುಮತಿ ನೀಡಲಾಗಿದೆ. ಈ ಹಿಂದೆ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲು ರಾಷ್ಟ್ರೀಯ ಹೆದ್ದಾರಿ 66 ತಲಪ್ಪಾಡಿ ಚೆಕ್ ಪೋಸ್ಟ್ ನಲ್ಲಿ ಪಾಸ್ ಮೂಲಕ ಮಾತ್ರ ಅನುಮತಿ ನೀಡಲಾಗಿತ್ತು. ಕರ್ನಾಟಕದೊಂದಿಗೆ ಗಡಿ ಹಂಚಿ ಕೊಂಡಿರುವ ಗ್ರಾಮ ಪಂಚಾಯತ್ ಗಳು ಗಡಿಯಲ್ಲಿ ತಪಾಸಣೆಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply