ವಾಹನ ಸವಾರರಿಗೆ ಗುಡ್ ನ್ಯೂಸ್

ವಾಹನಗಳನ್ನು ಅಡ್ಡ ಗಟ್ಟಿ ಸ್ಪಾಟ್ ಫೈನ್ ಕಲೆಕ್ಟ್ ಮಾಡದಂತೆ ಪೋಲಿಸರಿಗೆ ಖಡಕ್ ಸೂಚನೆ ನೀಡಿದ ಹೋಂ ಮಿನಿಸ್ಟರ್  ಅರಗ ಜ್ಞಾನೇಂದ್ರ. ಇನ್ನು ಮುಂದೆ ವಾಹನ ಸವಾರನ್ನು ತಡೆದು ಫೈನ್ ಕಲೆಕ್ಟ್ ಮಾಡವಂತಿಲ್ಲ. ರಾಜ್ಯಾದ್ಯಂತ ಪೋಲಿಸರಿಗೆ ಖಡಕ್ ಸೂಚನೆ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ. 

ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂಡ ಬಳಿಕ  ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು,  ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡಲಾಗಿತ್ತು.  ಪೊಲೀಸ್ ಇಲಾಖೆಗೆ ಅರಗಿಸಿಕೊಳ್ಳಲಾರದ ಅರಗರ ಖಡಕ್ ಸೂಚನೆ ಸೂಚನೆ. 

************************************************************

ಟ್ರಾಫಿಕ್ ಸ್ಪಾಟ್ ಫೈನ್ ಕ್ಯಾನ್ಸಲ್ ಎಂಬುದು ಸುಳ್ಳು ಸುದ್ದಿ~ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸ್ಪಷ್ಟನೆ: 

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಹನಗಳನ್ನು ಅಡ್ಡಗಟ್ಟಿ ಸ್ಪಾಟ್ ಫೈನ್ ಕಲೆಕ್ಷನ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವರು ಸೂಚಿಸಿದ್ದಾರೆ ಎಂಬುದು ಸುಳ್ಳು ಸುದ್ದಿ. ಟ್ರಾಫಿಕ್ ಪೊಲೀಸರು ಬಳಸುತ್ತಿದ್ದ ಪಿಡಿಎ ಮಷಿನ್ ಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಸರಂಡರ್ ಮಾಡಲು ಸೂಚನೆ ನೀಡಲಾಗಿದೆ ಎಂಬ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಹರಿದಾಟುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದೆ.
 
ಯಾವುದೇ ಪಿಡಿಎ ಮಷಿನ್‌ಗಳನ್ನು ವಾಪಾಸ್ ಪಡೆದಿರುವುದಿಲ್ಲ. ಜಂಟಿ ಆಯುಕ್ತರು ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪ್ರಕಟಣೆ ಹೊರಡಿಸಿದ್ದಾರೆ.

 
 
 
 
 
 
 
 
 
 
 

Leave a Reply