ಸಂಸ್ಕಾರವೇ ಸಂಪತ್ತು- ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು

ಮಂದಾರ್ತಿ: ಒoದು ಗ್ರಾಮ ಬೆಳೆಯಬೇಕಾದರೆ ಕೃಷಿಗೆ ಮೊದಲ ಪ್ರಧಾನ್ಯತೆ ನೀಡಬೇಕು. ಒಂದು ಕುಟುಂಬಕ್ಕೆ ಒಂದು ಗೋವು ಹೇಗೆ ಮುಖ್ಯವೋ ಅದೇ ರೀತಿ ಕೃಷಿಕನಿಗೆ ಗೋವು ಅತೀ ಶ್ರೇಷ್ಠ. ಜೀವನದಲ್ಲಿ ಗೋಪೂಜೆ ಮಾಡುವುದರಿಂದ ಅನೇಕ ಪುಣ್ಯಗಳು ಪ್ರಾಪ್ತಿಯಾಗುತ್ತದೆ. ಗೋವಿನ ಹಾಲು ನಮ್ಮ ದೇಹಕ್ಕೆ ಮುಖ್ಯ. ಗೋಮೂತ್ರದಿಂದ ಆರೋಗ್ಯ ವೃದ್ಧಿಸುತ್ತದೆ. ಗೋವು ಸರ್ವ ಉಪಯೋಗಿ.

ಮುಕ್ಕೋಟಿ ದೇವರು ಗೋವುಗಳಲ್ಲಿ ನೆಲೆಸಿದ್ದಾರೆ. ಮಕ್ಕಳಿಗೆ ಸಂಸ್ಕಾರವನ್ನು ಎಳವೆಯಿಂದಲೇ ಕಲಿಸಬೇಕು ಎಂದು ಶ್ರೀ ಪಲಿಮಾರು ಮಠ ಉಡುಪಿ ಇಲ್ಲಿನ ಕಿರಿಯ ಸ್ವಾಮೀಜಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಹೆಗ್ಗುಂಜೆ ಗ್ರಾಮ ವಿಕಾಸ ಸಮಿತಿ ಆಯೋಜಿಸಿರುವ ನನ್ನ ಗ್ರಾಮ-ನನ್ನ ಕನಸು ಕಾರ್ಯಕ್ರಮದಲ್ಲಿ ಹೆಗ್ಗುಂಜೆ ಗ್ರಾಮ ವ್ಯಾಪ್ತಿಯ ವೈಶಿಷ್ಟ್ಯದಂತೆ, ಮುಂದಿರುವ ಸವಾಲುಗಳು,ಊರಿನ ಶೃದ್ಧಾ ಕೇಂದ್ರಗಳ ಮಾಹಿತಿ,ಸಾಧಕರುಗಳ ಪರಿಚಯ ಮುಂತಾದ ವಿಷಯಗಳ ಮಾಹಿತಿ ಕುರಿತ ಕಾರ್ಯಕ್ರಮವು ರವಿವಾರ ಶ್ರೀ ದುರ್ಗಾ ಕಲ್ಯಾಣ ಮಂಟಪ ಮಂದಾರ್ತಿ ಇಲ್ಲಿ ಜರುಗಿತು.

ಹೆಗ್ಗುಂಜೆ ಗ್ರಾಮದ ವ್ಯಾಪ್ತಿಯಲ್ಲಿ ಮೂರು ಗಣಪತಿ ಮತ್ತು ಒಂದು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಇತಿಹಾಸ ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನವಿದ್ದು ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವ ಬೆಳಕಿನ ಸೇವೆ ನೀಡುವ ತವರೂರು.ಕಲೆಗೆ ಆಸರೆ ನೀಡಿದ ಊರು ಮುಂದಿನ ದಿನಗಳಲ್ಲಿ ವಿಶ್ವವಿಖ್ಯಾತ ಹೆಸರು ವಿಶ್ವದ ಭೂಪಟದಲ್ಲಿ ಗುರುತಿಸಲಿದೆ ಎಂದು ಶ್ರೀ ಪಲಿಮಾರು ಮಠ ಉಡುಪಿ ಇದರ ಪೀಠಾಧಿಪತಿ ಶ್ರೀ ಡಾ.ವಿದ್ಯಾಧೀಶ ತೀರ್ಥ ಶ್ರೀಪಾದರು ವಿಡಿಯೋ ಸಂದೇಶದಲ್ಲಿ ಅನುಗ್ರಹಿಸಿದರು.

ವಿಶ್ವದ ಯಾವುದೇ ಕಡೆಗೆ ತೆರಳಿದರೂ ಕೂಡ ನನ್ನೂರು ಎಂಬ ಹೆಮ್ಮೆ ನಮಗಿರಬೇಕು.ಇದರ ಮೂಲಕ ನನ್ನ ಊರು ಸ್ವಾವಲಂಬಿ ಚಿಂತನೆ ಆಗಬೇಕು. ಊರಿಗೊಸ್ಕರ ಬದುಕಬೇಕು. ಗ್ರಾಮವೆಂದರೆ ಒಂದು ಭಾವನಾತ್ಮಕ ಸಂಬಂಧವಿರಬೇಕು. ಹೀಗಾದರೆ ಸಮಾಜವೇ ಊರಿನ ಸಂಪತ್ತು. ಸ೦ಪತ್ತಿನ ರಕ್ಷಣೆಯೊಂದಿಗೆ ಧರ್ಮ, ಸಂಸ್ಕೃತಿ ಸಮಾಜವನ್ನು ಕಟ್ಟುವ ಕಾಯಕ ನಮ್ಮದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ಡಾ.ವಾದಿರಾಜ್ ಗೋಪಾಡಿ ಮಾತನಾಡಿದರು.

ಗ್ರಾಮಸಂಯೋಜಕರಾಗಿ ಸುದರ್ಶನ ಶೆಟ್ಟಿ, ಸಹಸಂಯೋಜಕರಾಗಿ ಶೇಖರ ದೇವಾಡಿಗ, ಸ್ವಾಸ್ಥ ವಿಭಾಗದಲ್ಲಿ ರಮೇಶ್ ಎಂ.,ಶಿಕ್ಷಣ ವಿಭಾಗದಲ್ಲಿ ಉದಯ್ ಭಾಸ್ಕರ್ ಶೆಟ್ಟಿ,ಮಹಿಳಾ ವಿಭಾಗದಲ್ಲಿ ರಶ್ಮಿ ಹಾಗೂ ಮಮತಾ,ಸಂಸ್ಕಾರ ವಿಭಾಗದಲ್ಲಿ ಶಂಕರ್ ಶೆಟ್ಟಿಗಾರ್, ಸ್ವಾವಲಂಬನೆ ವಿಭಾಗದಲ್ಲಿ ಶಂಭುಶಂಕರ್ ರಾವ್, ಸುಕುಮಾರ್ ಶೆಟ್ಟಿ, ಸುರಕ್ಷೆ ವಿಭಾಗದಲ್ಲಿ ಸರ್ವೋತ್ತಮ ಗಾಣಿಗ ನಿಯುಕ್ತಿಗೊಂಡರು.

ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ಡಾ.ವಾದಿರಾಜ್ ಗೋಪಾಡಿ, ಜಿಲ್ಲಾ ಗ್ರಾಮವಿಕಾಸ ಸಂಯೋಜಕ ಪ್ರಮೋದ್ ಮಂದಾರ್ತಿ,ಶಶಾಂಕ್ ಶಿವತ್ತಾಯ,ಹೆಗ್ಗು೦ಜೆ ಗ್ರಾಮವಿಕಾಸ ಸಮಿತಿಯ ಹೆಚ್.ಸುದರ್ಶನ ಶೆಟ್ಟಿ, ಹೆಗ್ಗುಂಜೆ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಹೆಗ್ಡೆ, ಶ್ರೀಕ್ಷೇತ್ರ ಮಂದಾರ್ತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹೆಚ್.ಧನಂಜಯ್ ಶೆಟ್ಟಿ, ಗಂಗಾಧರ ಶೆಟ್ಟಿ, ಗ್ರಾಮವಿಕಾಸ ಸಮಿತಿಯ ಪದಾಧಿಕಾರಿಗಳು, ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹೆಗ್ಗುಂಜೆ ಗ್ರಾಮವಿಕಾಸ ಸಮಿತಿಯ ಹೆಚ್.ಸುದರ್ಶನ್ ಶೆಟ್ಟಿ ಸ್ವಾಗತಿಸಿ,ಗ್ರಾಮವಿಕಾಸ ಶಿಕ್ಷಣ ವಿಭಾಗದ ಉದಯ್ ಭಾಸ್ಕರ್ ಶೆಟ್ಟಿ ನಿರೂಪಿಸಿ, ಗ್ರಾಮವಿಕಾಸ ಆರೋಗ್ಯ ಪ್ರಮುಖ ರಮೇಶ್ ಎಂ.ಧನ್ಯವಾದಗೈದರು.

 
 
 
 
 
 
 
 
 
 
 

Leave a Reply