Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಕೋಟ ಶ್ರೀನಿವಾಸ ಪೂಜಾರಿಯವರ ಪುತ್ರಿ ಸ್ವಾತಿ ಪೂಜಾರಿ ತೃತೀಯ ರಾಂಕ್

ಕೋಟ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ಸ್ನಾತಕೋತ್ತರ ಪರೀಕ್ಷೆಯಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಎಂ ಕಾಂ ನಲ್ಲಿ ತೃತೀಯ ರಾಂಕ್ ಪಡೆದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವಗ೯ಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಪುತ್ರಿ ಕಾಲೇಜಿಗೆ ಕೀತಿ೯ ತಂದ ಸ್ವಾತಿ ಪೂಜಾರಿ ಅವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ವಿದ್ಯಾಥಿ೯ಯ ಮನೆಗೆ ತೆರಳಿ ಸನ್ಮಾನಿಸಲಾಯಿತು.
ಸನ್ಮಾನಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸಂಟ್ ಆಳ್ವ ಮಾತನಾಡಿ, ತಂದೆ ತಾಯಿಯ ಸರಳ ಸಜ್ಜನಿಕೆ ಆಚಾರ-ವಿಚಾರಗಳಿಂದ ಪ್ರಭಾವಿತರಾಗಿ, ಯಾವತ್ತು ಸಚಿವರ ಪುತ್ರಿ ಎಂದು ಹೇಳಿಕೊಳ್ಳದೆ ಕಾಲೇಜಿಗೆ ದೊಡ್ಡ ಕೀತಿ೯ ತಂದು ಕೊಟ್ಟು ನಮ್ಮ ಎಲ್ಲಾ ವಿಧ್ಯಾರ್ಥಿಗಳಿಗೆ ಮಾದರಿ ಯಾಗಿದ್ದಲ್ಲದೆ, ಇನ್ನೂ ಉನ್ನತ ಮಟ್ಟದ ಸಾಧನೆ ನಿಮ್ಮಿಂದಾಗಲಿ ಎಂದು ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿ, ಮಾತನಾಡಿದ ಸ್ವಾತಿ ನನ್ನ ಯಶಸ್ವಿಗೆ ಕಾರಣೀಕತ೯ರಾದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ನನ್ನ ಎಲ್ಲಾ ಮಿತ್ರರಿಗೂ ವಂದನೆಗಳನ್ನು ಸಲ್ಲಿಸಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಸಿ. ಜಯರಾಮ್ ಶೆಟ್ಟಿಗಾರ ಕಾಯ೯ಕೃಮವನ್ನು ಸಂಯೋಜಿಸಿದ್ದರು. ಊಔಆ ಪ್ರೊ. ಸೋಫಿಯಾ ಡಯಾಸ್. ಮಹಿಳಾ ಪ್ರಕೋಷ್ಠದ ಸಂಚಾಲಕಿ ಪ್ರೊ. ರೇಶ್ಮಾ, ಸಾವ೯ಜನಿಕ ಸಂಪಕಾ೯ಧಿಕಾರಿ ಪ್ರೊ. ರವಿನಂದನ್, ಶಾಂತಾ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!