ಅನುಷ್ಕಾಳ ಪರಿಸರ ಸ್ನೇಹಿ ಗಣಪತಿ 

ವಿದ್ಯೋದಯ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅನುಷ್ಕಾ ಉಪಾಧ್ಯಾಯಳಿಂದ ಮೂಡಿಬಂದ ಪರಿಸರ ಸ್ನೇಹಿ ಗಣಪತಿ. ಅನುಷ್ಕಾ ಬಾಲ್ಯದಿಂದಲೂ ಭರತನಾಟ್ಯ , ಡ್ರಾಯಿಂಗ್, ಸಂಗೀತ ಹೀಗೆ ಬೇರೆ ಬೇರೆ ಕಲಾಪ್ರಕಾರದಲ್ಲಿ ನಿಪುಣೆ. ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ತನ್ನನ್ನು ವಿಶೇಷವಾಗಿ ತೊಡಗಿಸಿಕೊಂಡವಳು. ಕೋವಿಡ್-19 ಸೋಂಕಿನ ಸಂದರ್ಭ ಮನೆಯಲ್ಲಿಯೇ ಮಾಸ್ಕ್ ತಯಾರಿ ಮಾಡಿ ಕರ್ತವ್ಯವನ್ನು ನಿರ್ವಹಿಸಿದ್ದು, ಸ್ಕೌಟ್ ನಿಂದಾಗಿ ನನಗೆ ಸಮಾಜ ಸೇವೆ ಮಾಡುವ ಅವಕಾಶ ದೊರೆಯಿತು ಎಂದು ಹೆಮ್ಮೆಯಿಂದ ಹೇಳುತ್ತಾಳೆ.
ಪ್ರತೀ ವರುಷ ಚೌತಿ ಸಂಧರ್ಭ ಪರಿಸರಸ್ನೇಹಿ ಗಣಪತಿ ರಚಿಸುವುದು ಅನುಷ್ಕಾಳ ಹವ್ಯಾಸ. ತಾಯಿ ಮೊದಲು ಗುರು ಅಂದಂತೆ ತನ್ನ ತಾಯಿಯ ನಿರಂತರ ಸಲಹೆ, ಪ್ರೋತ್ಸಾಹ ಹಾಗು ಶಾಲೆಯ ಗುರುಗಳಿಂದ ಕಲಿತ ಈ ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೊಂಡು ಈ ಬಾರಿ ಸುಮಾರು 10 ಇಂಚು ಗಾತ್ರದ ವಿಘ್ನವಿನಾಶಕನ ಕಲಾಕೃತಿ ರಚಿಸಿದ್ದಾಳೆ.

ಮೂರು ಕಪ್ ಮೈದಾ ಹಿಟ್ಟು ಹಾಗೂ ದಾಸವಾಳ ಹೂವಿನ ಎಲೆಯನ್ನು ಅರೆದು ಮಿಶ್ರಣ ಮಾಡಿ ಇಟ್ಟುಕೊಂಡು, ಬಳಿಕ ಗಣಪತಿಯ ಒಂದೊಂದೇ ಅಂಗ ರಚನೆಗೆ ಪ್ರಾರಂಭಿಸಿದಳು. ಗಣಪತಿಯ ಹೊಕ್ಕಳು, ಕಣ್ಣುಗಳು, ತಲೆ ಹಾಗು ಸೊಂಡಿ ಲಿನ ಅಂದಕ್ಕೆ ತಕ್ಕಂತೆ ಕಾಳು ಮೆಣಸು ಅಂಟಿಸಿ ನೋಡಲು ಚಂದ ಕಾಣುವಂತೆ ತಯಾರಿಯ ಅಂತಿಮ ಹಂತಕ್ಕೆ ಬಂದಳು. ದಾಸವಾಳ ಹೂವಿನ ಎಲೆಯ ಹಸಿರು ಬಣ್ಣ ಪ್ರಕೃತಿಗೆ ಪೂರಕವಾಗಿರುವುದರಿಂದ ಅದಕ್ಕೆ ಸರಿಯಾಗಿ ಗಣೇಶನ ಆಕಾರ, ಬಣ್ಣ ಎಲ್ಲವನ್ನು ಅತ್ಯಂತ ನಾಜೂಕಾಗಿ ಮಾಡಿ ಮುಗಿಸಿದಳು
ಉಡುಪಿಯ ಅಂಜನಾ ಹಾಗು ಸುಧಾಕರ ಉಪಾಧ್ಯ ದಂಪತಿಗಳ ಪುತ್ರಿಯಾಗಿರುವ ಅನುಷ್ಕಾ ಶೈಕ್ಷಣಿಕ ಹಾಗು ಪಠ್ಯೇತರ ಚಟುವಟಿಕೆಯಲ್ಲೂ ಕ್ರಿಯಾಶೀಲವಾಗಿದ್ದಾಳೆ
 
 
 
 
 
 
 
 
 
 
 

Leave a Reply