ರಂಗಭೂಮಿ (ರಿ.) ಉಡುಪಿ ಸಂಸ್ಥೆಯ ಹಿರಿಯ ರಂಗ ಕಲಾವಿದ ಶ್ರೀ ಶ್ರೀನಿವಾಸ ಶೆಟ್ಟಿಗಾರ್ (80) ದೈವಾಧೀನ.

ರಂಗಭೂಮಿ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಓರ್ವರಾಗಿದ್ದು, ಸಂಸ್ಥೆಯ ಆರಂಭದ ದಶಕಗಳ ಕಾಲ ಸಂಸ್ಥೆಯ ನಾಟಕಗಳಲ್ಲಿ “ಸ್ತ್ರೀ” ಪಾತ್ರದಲ್ಲಿ ಎಲ್ಲರನ್ನೂ ಮಂತ್ರಮುಗ್ದವಾಗಿಸುವಂತೆ ಅಭಿನಯಿಸಿ, ಸಂಸ್ಥೆಗೆ ಅಪಾರ ಕೀರ್ತಿಯನ್ನು ತಂದಿತ್ತಿದ್ದರು. ತನ್ನ ಸ್ತ್ರೀ ಪಾತ್ರಕ್ಕೆ ನಾಟಕ ಸ್ಪರ್ಧೆಗಳಲ್ಲಿ ನಿರಂತರವಾಗಿ ಪ್ರಥಮ ಬಹುಮಾನ ಪಡೆದು, ತದನಂತರ ಬಂಗಾರದ ಪದಕದೊಂದಿಗೆ ಸನ್ಮಾನ ಸ್ವೀಕರಿಸಿದ ಮೇರು ನಟ. ಅತ್ಯುತ್ತಮ ಛಾಯಾಗ್ರಹಕರೂ ಆಗಿದ್ದ ಇವರು ಉದಯವಾಣಿ ಪತ್ರಿಕೆಯ ಓರ್ವ ಮುಖ್ಯ ಛಾಯಾಗ್ರಾಹಕರಾಗಿ ಹಲವಾರು ವರ್ಷಗಳ ಕಾಲ ದುಡಿದು, ತದನಂತರ ಉದ್ಯೋಗ ನಿಮಿತ್ತ ಬೆಹರಿನ್ ದೇಶದಲ್ಲಿ 25ವರ್ಷಗಳ ಕಾಲ ದುಡಿದಿದ್ದರು. ಅದೇ ಸಂದರ್ಭದಲ್ಲಿ ತನ್ನ ರಂಗಭೂಮಿ ತಂಡದಿಂದ ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಪ್ರದರ್ಶನ ನೀಡುವಂತೆ ಮಾಡಿದ್ದರು. , ಕೊಡುಗೈ ದಾನಿಯಾಗಿ ” ರಂಗಭೂಮಿ” ಸಂಸ್ಥೆಯನ್ನು ತನ್ನ ಕೊನೆಯ ತನಕವೂ ಕಟ್ಟಿ ಬೆಳೆಸಲು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಶೆಟ್ಟಿಗಾರ್ ಸಮಾಜದ ಮುಖಂಡರಾಗಿ ಸಮಾಜದ ಏಳಿಗೆಗೆ ನಿರಂತರವಾಗಿ ಕೊಡುಗೈ ದಾನಿಯಾಗಿದ್ದರು.

ಮೃತರ ಅಂತಿಮ ಕ್ರಿಯಾವಿಧಿಯು ನಾಳೆ ಬೆಳಿಗ್ಗೆ 9ಕ್ಕೆ ಮಣಿಪಾಲ ರಜತಾದ್ರಿಗೆ ಹೋಗುವ ರಸ್ತೆಯಲ್ಲಿ ಬಳಿ ಇರುವ ಅವರ ಮನೆ “ಪಂಚಶ್ರೀ”ಯಲ್ಲಿ ನಡೆಯಲಿದೆ. ಅಂತಿಮ ಸಂಸ್ಕಾರವು ಬೆಳಿಗ್ಗೆ 10ಗಂಟೆಗೆ ಬೀಡಿನ ಗುಡ್ಡೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಹಿರಿಯ ಚೇತನಕ್ಕೆ ಚಿರ ಶಾಂತಿ ಲಭಿಸಲಿ ಹಾಗೂ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಶ್ರೀ ದೇವರು ಕರುಣಿಸಲಿ ಎಂದು ರಂಗಭೂಮಿ (ರಿ.) ಉಡುಪಿ ಯ ಪ್ರಾರ್ಥನೆ.

 
 
 
 
 
 
 
 
 
 
 

Leave a Reply