ಕರಂಬಳ್ಳಿ: ಭಾಗವತ ಪುರಾಣ ಪ್ರವಚನ ಸಂಪನ್ನ.

ಕರಂಬಳ್ಳಿ ಬ್ರಾಹ್ಮಣ ವಲಯವು ಕಳೆದ 15 ವರ್ಷಗಳಿಂದ ಪ್ರಸಿದ್ಧ ವಿದ್ವಾಂಸರನ್ನು ಕರೆಸಿ ಕಾರ್ತಿಕ ಮಾಸದಲ್ಲಿ ಪ್ರವಚನವನ್ನು ನಡೆಸುತ್ತಾ ಬರುತ್ತಿದ್ದು , ಇದು ವಿಪ್ರ ಸಮಾಜದ ಒಂದು ಅಭೂತಪೂರ್ವ ಕಾರ್ಯಕ್ರಮ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಅವರು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ನಡೆಸಿದ ಭಾಗವತ ಪುರಾಣ ಪ್ರವಚನದ ಸಮಾರೋಪ ಸಮಾರಂಭದಲ್ಲಿ ವಿದ್ವಾನ್ ಶ್ರೀ ಆದ್ಯಪಾಡಿ ಹರಿದಾಸ್ ಭಟ್ ಮತ್ತು ಅವರ ಧರ್ಮಪತ್ನಿಯನ್ನು ಸನ್ಮಾನಿಸಿ ಮಾತನಾಡಿದರು. ದಿವಾಕರ ಐತಾಳ ಉಪಸ್ಥಿತರಿದ್ದರು.

ಕೆ ವಿ ಬಿ ಸಮಿತಿಯ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ ಭಟ್ ಸ್ವಾಗತಿಸಿ ಕಾರ್ಯದರ್ಶಿ ನಾಗರಾಜ ಭಟ್ ವಂದಿಸಿದರು. ಶ್ರೀನಿವಾಸ್ ಬಲ್ಲಾಳ್ ನಿರೂಪಿಸಿ ಲಕ್ಷ್ಮೀನಾರಾಯಣ ಆಚಾರ್ಯ ಸಹಕರಿಸಿದರು.

Leave a Reply