ಸ್ಕೂಟರ್ ನಲ್ಲಿ ಪಟಾಕಿ ಸ್ಫೋಟ- ಅಪ್ಪ ಮಗ ಸ್ಪಾಟ್

ವಿಲ್ಲುಪುರಂ: ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಸಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವೇಳೆ ಪಟಾಕಿ ಸ್ಫೋಟಿಸಿ ಅಪ್ಪ-ಮಗ ಇಬ್ಬರೂ ಅಸುನೀಗಿದ್ದಾರೆ. ಪುದುಚೆರಿಯಿಂದ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಪೂರ್ವ ಕರಾವಳಿ ರಸ್ತೆಯಲ್ಲಿರುವ ಕೂನಿಮೇಡು ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಗುರುವಾರ ಈ ದುರಂತ ಸಂಭವಿಸಿದೆ‌. 

ತಂದೆ ಕಲೈನೇಸನ್ ಮತ್ತು ಅವರ 7 ವರ್ಷದ ಮಗ ಪ್ರದೀಪ್ ಮೃತಪಟ್ಟವರು. ಇಬ್ಬರ ದೇಹವೂ ಛಿದ್ರಛಿದ್ರವಾಗಿದೆ. ಕಲೈನೇಸನ್ ಅವರ ಮನೆಯಲ್ಲಿ ಹಬ್ಬದ ದಿನವೇ ಸೂತಕದ ಛಾಯೆ ಆಚರಿಸಿದೆ. ಪಟಾಕಿಗಳ ಬಾಕ್ಸ್ ಜತೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲೈನೇಸನ್ ಸ್ಕೂಟರ್ ಓಡಿಸುತ್ತಿದ್ದಾಗ ಅವರ ಮಗ ಪ್ರದೀಪ್ ಮುಂಭಾಗದಲ್ಲಿ ಕುಳಿತುಕೊಂಡಿದ್ದ. ತಿರುವಿನಲ್ಲಿ ವೇಗವಾಗಿ ಬಂದ ಸ್ಕೂಟರ್ ಸ್ಫೋಟಗೊಂಡಿದೆ.

 

 

 
 
 
 
 
 
 
 
 
 
 

Leave a Reply