ಉಡುಪಿ ಜಿಲ್ಲೆಯಲ್ಲಿ 105 ಮಂದಿ ಗುಣಮುಖ

ಉಡುಪಿ ಜಿಲ್ಲೆಯಲ್ಲಿ 105 ಮಂದಿಗೆ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕು-47, ಕುಂದಾಪುರ-31, ಕಾರ್ಕಳ-26, ಹೊರ ಜಿಲ್ಲೆಯ ಓರ್ವ ವ್ಯಕ್ತಿ ಸೋಂಕಿಗೆ ಒಳಗಾಗಿದ್ದಾರೆ. 105 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 67034 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 864 ಸಕ್ರಿಯ ಪ್ರಕರಣಗಳಿವೆ.

ಕಾರ್ಕಳ ತಾಲೂಕಿನ 63 ವರ್ಷದ ಮಹಿಳೆ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 405 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಜುಲಾಯಿ 17 ರಂದು 3797 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 736267 ಮಂದಿಯನ್ನು ಪರೀಕ್ಷಿಸಲಾಗಿದೆ.

 
 
 
 
 
 
 
 
 
 
 

Leave a Reply