ಭಾರತ-ಪಾಕ್ ಗಡಿಯಲ್ಲಿ 61 ಡ್ರೋನ್ ,ಸುರಂಗ, ಮಾದಕ ವಸ್ತು ಪತ್ತೆ

ನವದೆಹಲಿ: ಭಾರತೀಯ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಭಾರತ-ಪಾಕಿಸ್ತಾನ ಗಡಿಯಲ್ಲಿ 61 ಡ್ರೋನ್‌ ಮತ್ತು ನಾಲ್ಕು ಸುರಂಗಗಳನ್ನು ಪತ್ತೆ ಮಾಡಿದೆ.

ಬಿಎಸ್‌ಎಫ್ ಮುಖ್ಯಸ್ಥ ರಾಕೇಶ್ ಅಸ್ತಾನಾ ಈ‌ ಮಾಹಿತಿ ನೀಡಿದ್ದು, ಕಳೆದ ಒಂದು ವರ್ಷದಲ್ಲಿ 22 ಒಳ ನುಸುಳು ಕೋರರನ್ನು ಹತ್ಯೆ ಮಾಡ ಲಾಗಿದ್ದು, 165 ಜನರನ್ನು ಗಡಿಯಲ್ಲಿ ಬಂಧಿಸ ಲಾಗಿದೆ ಎಂದರು.

ಬಿಎಸ್‌ಎಫ್ ಆಯೋಜಿಸಿದ್ದ ‘ರುಸ್ತಮ್ಜಿ ಸ್ಮಾರಕ ಉಪನ್ಯಾಸ’ದಲ್ಲಿ ಮಾತನಾಡಿದ ಅವರು, 2,786 ಕೋಟಿ ರೂ. ಮೌಲ್ಯದ 633 ಕೆಜಿ ಮಾದಕ ವಸ್ತು, 55 ಶಸ್ತ್ರಾಸ್ತ್ರಗಳು ಮತ್ತು 4,233 ಸುತ್ತು ಮದ್ದು ಗುಂಡುಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಇಂಡೋ-ಬಾಂಗ್ಲಾದೇಶ ಗಡಿಯಲ್ಲೂ 12,821 ಕೆಜಿ ಮಾದಕ ವಸ್ತು, 61 ಶಸ್ತ್ರಾಸ್ತ್ರಗಳು ಮತ್ತು 7,976 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಆಸ್ತಾನಾ ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply