“ಶ್ರೀಬದರೀ ನಗರ” ನಾಮಫಲಕ ಉಧ್ಘಾಟನೆ

ಅಲೆವೂರು ಗ್ರಾಮ ಪಂಚಾಯತಿ, ಅಲೆವೂರು ಇದರ ಸಹಯೋಗದೊಂದಿಗೆ ದಿ.ಅಲೆವೂರು ಬದರೀ ನಾರಾಯಣ ಆಚಾರ್ಯ ಮೆಮೋರಿಯಲ್ ಟ್ರಸ್ಟ್ (ರಿ) ಇದರ ವತಿಯಿಂದ “ಶ್ರೀಬದರೀ ನಗರ” ನಾಮಫಲಕ ಉಧ್ಘಾಟನೆ ಮತ್ತು ವನಮಹೋತ್ಸವ, ಸಸಿ ವಿತರಣಾ ಕಾರ್ಯಕ್ರಮ

ಯಾವುದೇ ಸಂಸ್ಥೆ, ವ್ಯಕ್ತಿಯಾಗಲೀ ಒಳ್ಳೆಯ ಕೆಲಸ ಮಾಡುವಾಗ ಅದಕ್ಕೆ ಸಹಕಾರ ನೀಡಬೇಕೆ ಹೊರತು ರಾಜಕೀಯ ಮಾಡಬಾರದು ಎಂದು ಅಲೆವೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಆಂಚನ್ ಅಭಿಪ್ರಾಯಪಟ್ಟಿದ್ದಾರೆ. 

ಅವರು ಅಲೆವೂರು ಗ್ರಾಮ ಪಂಚಾಯತಿ, ಅಲೆವೂರು ಇದರ ಸಹಯೋಗದೊಂದಿಗೆ ದಿ.ಅಲೆವೂರು ಬದರೀ ನಾರಾಯಣ ಆಚಾರ್ಯ ಮೆಮೋರಿಯಲ್ ಟ್ರಸ್ಟ್ (ರಿ) ಇದರ ವತಿಯಿಂದ ಭಾನುವಾರ ಪೂರ್ವಾಹ್ನ ನಡುಅಲೆವೂರಿನ ಮುಖ್ಯರಸ್ತೆಯಲ್ಲಿ “ಶ್ರೀಬದರೀನಗರ” ನಾಮಫಲಕದ ಉದ್ಘಾಟನೆ ತದನಂತರ ವನಮಹೋತ್ಸವ, ಸಸಿ ವಿತರಣಾ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 
ವೇದಮೂರ್ತಿ ಶ್ರೀ ಕಲ್ಮಂಜೆ ವೇದವ್ಯಾಸ ಉಪಾಧ್ಯ ಮುಖ್ಯ ಅರ್ಚಕರು, ಕಲ್ಮಂಜೆ ಮಹಾ ಲಿಂಗೇಶ್ವರ ದೇವಸ್ಥಾನ ಇವರು ಟ್ರಸ್ಟಿನ ಹಿನ್ನಲೆ, ಮುಂದಿನ ಯೋಜನೆಗಳ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಅತಿಥಿಯಾಗಿ ಆಗಮಿಸಿದ ಅಲೆವೂರು ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ಶ್ರೀ ದಯಾನಂದ ಬೆಣ್ಣೂರು ಇವರು ಇಂತಹ ವನಮಹೋತ್ಸವ ಕಾರ್ಯಕ್ರಮಗಳಿಗೆ ಪಂಚಾಯತ್ ವತಿಯಿಂದ ಯಾವತ್ತೂ ಸಂಪೂರ್ಣ ಸಹಕಾರ ಇದ್ದು, ಮುಂದಿನ ವರ್ಷಗಳಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವುದಾದಲ್ಲಿ ಮಾರ್ಚ ತಿಂಗ ಳಲ್ಲಿ ಗಿಡಗಳ ಒಟ್ಟು ಬೇಡಿಕೆ ತಿಳಿಸಿದಲ್ಲಿ ಪೂರೈಸಲು ಕ್ರಮವಿಡಲಾಗುವುದು ಎಂದು ತಿಳಿಸಿದರು. 
ಇನ್ನೋರ್ವ ಅತಿಥಿ ಅಲೆವೂರು  ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀ ಸುಧಾಕರ ಪೂಜಾರಿ ಇವರು ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಬೆಳೆಸಿದಲ್ಲಿ ಮಾತ್ರ ವನಮಹೋತ್ಸವಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು. ಅತಿಥಿಗಳಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ  ಕಾರ್ಯದರ್ಶಿಯಾದ ಶ್ರೀ ಹರೀಶ್ ಕಿಣಿ ಹಾಗೂ ಅಲೆವೂರು ಗ್ರಾಮ ಪಂಚಾ ಯತಿಯ ಮಾಜಿ ಅಧ್ಯಕ್ಷರಾದ ಶ್ರೀ ಹರೀಶ್ ಸೇರಿಗಾರ್ ಸಂದರ್ಬೋಚಿತವಾಗಿ ಮಾತನಾಡುತ್ತಾ ಟ್ರಸ್ಟಿನ ಮುಂದಿನ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಅಲೆವೂರು ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀ ರೂಪೇಶ್ ದೇವಾಡಿಗ ಮತ್ತು ಶ್ರೀ ಶಬರೀಶ ಸುವರ್ಣ ಉಪಸ್ಥಿತರಿದ್ದರು. 
ಆಗಮಿಸಿದ ಎಲ್ಲರಿಗೂ ಸಸಿ ವಿತರಣೆ ಮಾಡಲಾಯಿತು. ಶ್ರೀ ಬಿ.ವೆಂಕಟಕೃಷ್ಣ ರಾವ್, ಮಾರ್ಪಳ್ಳಿ, ನಿವೃತ್ತ ಮುಖ್ಯೋಪಧ್ಯಾಯರು ಮತ್ತು ಶ್ರೀ ಕೆ.ಶ್ರೀಶ ಉಪಾಧ್ಯ, ಮಾಜಿ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯರು ಟ್ರಸ್ಟಿನ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಡoರು. ಟ್ರಸ್ಟಿನ ಅಧ್ಯಕ್ಷರಾದ ಶ್ರೀ ನಾಗರಾಜ್ ಕೆ.ಆರ್. ಇವರು ಉಪಸ್ಥಿತರಿದ್ದರು. ಒಟ್ಟು 25 ಜನರಿಗೆ ಆಹಾರ ಸಾಮಗ್ರಿ ಕಿಟ್ ನ್ನು ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ವಿತರಿಸಲಾಯಿತು. ಶ್ರೀಮತಿ ವೀಣಾ ಭಟ್,  ಕು. ಪ್ರಣೀತಾ, ಶ್ರೀಮತಿ ಸುವರ್ಣ, ಶ್ರೀಮತಿ ವಾಣಿಯವರು ಪ್ರಾರ್ಥಿಸಿದರು.  ಶ್ರೀ ಪ್ರಸನ್ನ ಹೆಬ್ಬಾರ್, ಪೆರ್ಡೂರು ಇವರು ಸ್ವಾಗತಿಸಿದರು. ಕು.ಅಪರ್ಣ ವಂದನಾರ್ಪಣೆಗೈದರು. ಶ್ರೀ ಗುರುಪ್ರಸಾದ್ ಸಾಮಗ, ಅಲೆವೂರು ಗ್ರಾಮ ಪಂಚಾಯತ್  ಸದಸ್ಯರು ಕಾರ್ಯಕ್ರಮ ನಿರೂಪಣೆ ಮಾಡಿದರು. 
 
 
 
 
 
 
 
 
 
 
 

Leave a Reply