ಯುವತಿಯ ಕಿವಿಯೊಳಗೆ ನುಗ್ಗಿದ ಸಣ್ಣ ಹಾವು!

ಕಿವಿಯೊಳಗೆ ಇರುವೆ ಸೇರಿದಂತೆ ಸಣ್ಣ ಕೀಟಗಳು ಸೇರುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿಯ ಕಿವಿಯೊಳಗೆ ಸಣ್ಣ ಹಾವೊಂದು ಸೇರಿತ್ತು.

ಶಿಲ್ಪಾ ರಾಯ್ ಎಂಬುವರು ಇನ್ಸ್ಟಾಗಾಂನಲ್ಲಿ ಕಿವಿಯೊಳಗೆ ಹಾವು ನುಗ್ಗಿರುವ 3 ನಿಮಿಷ 49 ಸೆಕೆಂಡ್ ಗಳ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಿವಿಯೊಳಗಿನಿಂದ ಹಾವು ಹೊರಬಂದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.  

ಕಿವಿಯೊಳಗೆ ಹಾವು ನುಗ್ಗಿರುವುದು ಯುವತಿಗೂ ತಿಳಿದಿಲ್ಲ. ಕಿವಿಯೊಳಗೆ ಏನೊ ನುಗ್ಗಿದೆ ಅಂತ ಡಾಕ್ಟರ್ ಬಳಿ ಹೋಗಿದ್ದಾಳೆ. ಸೂಕ್ಷ್ಮ ದರ್ಶಕದ ಮೂಲಕ ಡಾಕ್ಟರ್ ಕಿವಿಯೊಳಗೆ ನೋಡಿದಾಗ ಹಾವು ಇರುವುದು ಕಂಡಿದೆ. ಇದನ್ನು ನೋಡಿ ಡಾಕ್ಟರ್ ಗೆ ಕೂಡ ಗಾಬರಿಯಾಗಿದೆ.

ಭಯ ಪಟ್ಟು ಹಾಗೆ ಕಿವಿಯೊಳಗೆ ಹಾವು ಬಿಟ್ಟರೆ ಆ ಯುವತಿ ಪ್ರಾಣಕ್ಕೆ ಕುತ್ತಾಗುತ್ತಿತ್ತು. ಇದರಿಂದ ರಿಸ್ಕ್ ತೆಗೆದುಕೊಂಡ ಡಾಕ್ಟರ್ ಕೈಗವಸುಗಳನ್ನು ಹಾಕಿಕೊಂಡು ಮೆಡಿಕಲ್ ಟಾಂಗ್ಸ್ ಗಳ ನೆರವಿನಿಂದ ಹಾವನ್ನು ಹೊರ ತೆಗೆದಿದ್ದಾರೆ.

ದೇಹದ ಮೇಲೆ ಮಚ್ಚೆಗಳಿರುವ ಹಳದಿ ಬಣ್ಣದ ಸಣ್ಣ ಹಾವನ್ನು ನಿಧಾನವಾಗಿ ಕಿವಿಯಿಂದ ಹೊರ ತೆಗದಾಗ ಅದು ತನ್ನ ಬಾಯಿ ಬಿಡುತ್ತಿತ್ತು.

ಸದ್ಯ ಕಿವಿಯಿಂದ ಹಾವನ್ನು ಹೊರ ತೆಗೆದಿರುವ ಕಾರಣ ಯುವತಿ ಅಷ್ಟೆ ಅಲ್ಲದೆ ಡಾಕ್ಟರ್ ಕೂಡ ನಿಟ್ಟುಸಿರುವ ಬಿಟ್ಟಿದ್ದಾರೆ.

ಹಾವು ಆ ಯುವತಿ ಕಿವಿಯೊಳಗೆ ಹೇಗಿ ಸೇರಿತು, ಅದು ಆಕೆಯ ಪರಿವೆಗೆ ಬರಲಿಲ್ಲವೆ ಎಂಬ ಪ್ರಶ್ನೆಗಳು ಕಾಡಿದೆ.

 
 
 
 
 
 
 
 
 
 
 

Leave a Reply