ವಿಭಿನ್ನವಾಗಿ, ಅತೀ ರೋಚಕ ಎನಿಸುವ ರೀತಿಯಲ್ಲಿ ರಾಷ್ಟ್ರ ಪ್ರೇಮವನ್ನು ಮೆರೆದ ಯುವಕರ ತಂಡ

DCIM100MEDIADJI_0043.JPG

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಶುಭ ಗಳಿಗೆಯಲ್ಲಿ ರಾಷ್ಟ್ರ ಪ್ರೇಮವನ್ನು ಬಿತ್ತುವ ಸಲುವಾಗಿ ಹರ್ ಘರ್ ತಿರಂಗ ಅಭಿಯಾನವನ್ನು ಹಮ್ಮಿಕೊಂಡು ಸರ್ಕಾರ ಪ್ರತೀ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಪಣ ತೊಟ್ಟು ದುಡಿದರೆ ಇಲ್ಲೊಂದು ಯುವಕರ ತಂಡ ವಿಭಿನ್ನವಾಗಿ ಅತೀ ರೋಚಕ ಎನಿಸುವ ರೀತಿಯಲ್ಲಿ ರಾಷ್ಟ್ರ ಪ್ರೇಮವನ್ನು ಮೆರೆದಿದ್ದಾರೆ. ಸೀತಾ ನದಿಯ ಉಪನದಿಯಲ್ಲಿ ಕಾಯಕಿಂಗ್ ಮೂಲಕ ಪ್ರಕೃತಿ ವಿಸ್ಮಯಗಳನ್ನು ತೋರಿಸಿ ಜನರಲ್ಲಿ ಪ್ರಕೃತಿ ಪ್ರೇಮವನ್ನು ಬಿತ್ತುವ ಕೆಲಸ ಮಾಡುತ್ತಿರುವ ಮಿಥುನ್ ಮೆಂಡನ್ ಮತ್ತು ಲೋಕೇಶ್ ಮೆಂಡನ್ ಅವರ ತಂಡ ಇದೀಗ ಈ ವಿಭಿನ್ನ ಪ್ರಯತ್ನದಲ್ಲಿ ಮತ್ತೊಮ್ಮೆ ಸೈ ಎನಿಸಿದ್ದಾರೆ.
ಸೀತಾ ನದಿಯ ಮದ್ಯದಲ್ಲಿ ಕಾಯಾಕಿಂಗ್ ಮೂಲಕ ತೆರಳಿ ಅಲ್ಲಿ ಧ್ವಜ ಸ್ತಂಭ ನೆಟ್ಟು ಊರ ಹಿರಿಯ ಗುರಿಕಾರರು ಆದಂತಹ ಕೂಸ ಮರಕಾಲ ಇವರ ಕಯ್ಯಲ್ಲಿ ಧ್ವಜಾರೋಹಣ ಮಾಡಿಸಿ, ಅನ್ನವಿತ್ತ ಪ್ರಕೃತಿ ಮದ್ಯದಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸುತಿರುವ ಈ ತಂಡವನ್ನು ಊರಿನವರು ಅಭಿನಂದಿಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply