Janardhan Kodavoor/ Team KaravaliXpress
24.6 C
Udupi
Thursday, September 29, 2022
Sathyanatha Stores Brahmavara

ಶ್ರೀ ಕೃಷ್ಣ ಬಾಲನಿಕೇತನದಲ್ಲಿ ರೋಟರಿ ಉಡುಪಿಯಿಂದ ಸ್ವಾತಂತ್ರ್ಯ ಅಮೃ ಮಹೋತ್ಸವ ಆಚರಣೆ

ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ರೋಟರಿ ಉಡುಪಿ, ಚೈಲ್ಡ್ ಲೈನ್ ಉಡುಪಿ ಮತ್ತು ಫೆವಿಕಾಲ್ ಕ್ಲಬ್ ನ ಸದಸ್ಯರು ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಆಚರಿಸಿದರು. ರೋಟರಿ ಉಡುಪಿ ಯ ಅಧ್ಯಕ್ಷ ರೋ.ಸುಬ್ರಹ್ಮಣ್ಯ ಕಾರಂತರು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಸಂದೇಶ ವನ್ನು ನೀಡಿದರು. ಪ್ರಾರಂಭದಲ್ಲಿ ಬಾಲನಿಕೇತನದ ಕಾರ್ಯದರ್ಶಿ ಮತ್ತು ರೋಟರಿ ಸಹಾಯಕ ಗವರ್ನರ್ ರೋ. ರಾಮಚಂದ್ರ ಉಪಾಧ್ಯಾಯ ರು ಸ್ವಾಗತಿಸಿ ಸ್ವಾತಂತ್ರ್ಯ ಸಮರದಲ್ಲಿ ಬಲಿದಾನ ಗೈದವರ ಸ್ಮರಣೆ ಮಾಡಿ ಎಲ್ಲರಿಗೂ 75ನೇ ಸ್ವಾತಂತ್ರ್ಯೋವದ ಶುಭಕಾಮನೆಗಳನ್ನು ತಿಳಿಸಿದರು. ಸಮಾರಂಭದಲ್ಲಿ ರೋಟರಿ ನಿರ್ದೇಶಕ ರಾದ ದಿನೇಶ್ ಭಂಡಾರಿ, ದೀಪಾ ಭಂಡಾರಿ, ಕೋಶಾಧಿಕಾರಿ ಗೋಪಾಲಕೃಷ್ಣ ಪ್ರಭು, ರೋ.ಅಮಲ, ರೋ.ಸಾಧನಾ ಮುಂಡ್ಕೂರು, ಫೆವಿಕಾಲ್ ಬಾಲನಿಕೇತನದ ಶಕುಂತಲಾ ಮತ್ತು ಶಿವಲೀಲ ಮುಂತಾದ ವರಿದ್ದರು. ರೋಟರಿ ಕಾರ್ಯದರ್ಶಿ ರೋ.ಗುರುರಾಜ್ ಭಟ್ ದನ್ಯವಾದ ಸಮರ್ಪಿಸಿದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!