ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡಬೇಕು: ತಲ್ಲೂರು ಶಿವರಾಮ ಶೆಟ್ಟಿ

ಭೂಮಿಯಲ್ಲಿ ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡಬೇಕು. ಸಮಾಜದ ದೊಡ್ಡ ಋಣ ನಮ್ಮ ಮೇಲಿದೆ. ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟನ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ನಾವು ಮಾಡುವ ಸಮಾಜ ಸೇವೆ ನಮಗೆ ಸಿಗುವ ದೊಡ್ಡ ಪ್ರಶಸ್ತಿ ಅಂತಹ ಪ್ರಶಸ್ತಿಯನ್ನು ನಾವು ಪಡೆಯಬೇಕು. ಧನಾತ್ಮಕ ಚಿಂತನೆ ನಮ್ಮ ಬದುಕಿನಲ್ಲಿ ಅತ್ಯಂತ ಅಗತ್ಯ ಇಂದು ಪ್ರಶಸ್ತಿ ಪಡೆಯುವಂತಹ ಮಕ್ಕಳೆಲ್ಲರಿಗೊಂದು ಕಿವಿಮಾತು ತಂದೆ ತಾಯಿಯ ಕಣ್ಣೀರು ಒರೆಸುವ ಕೆಲಸವನ್ನು ನೀವು ಮಾಡಬೇಕು ಎಂದು ಅವರು ಹೇಳಿದರು.
ಅವರು ಎಣ್ಣೆಹೊಳೆ ರಾಧಾ ನಾಯಕ್ ಪ್ರೌಢಶಾಲೆಯಲ್ಲಿ ನ.27 ರಂದು ನಡೆದ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2022ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿದ್ದ ಉಪಸ್ಥಿತರಿದ್ದ ಉದ್ಯಮಿ ಹಾಗು ಕನ್ನಡ ಸೇವಾ ಸಂಘ ಮುಂಬಯಿಯ ಮಾಜಿ ಅಧ್ಯಕ್ಷರಾದ ಡಿ.ಕೆ ಶೆಟ್ಟಿ ಅವರು ಮಾತನಾಡಿ ಮಕ್ಕಳಿಗೆ ಸಿಗುವ ಪ್ರೋತ್ಸಾಹ, ಪ್ರಶಸ್ತಿ ಪಡೆದ ಮಕ್ಕಳು ಸಮಾಜದ ಅಭಿವೃದ್ಧಿಯಲ್ಲಿ ಮುಂದುವರಿಯಬೇಕು. ಮಕ್ಕಳ ಚಟುವಟಿಕೆಗಳಿಗೆ ಪೋಷಕರು ಸಹಕಾರವನ್ನು ನೀಡಬೇಕು ಎಂದರು.
ವಿಶೇಷ ಅತಿಥಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಆರ್ ಕೆ ಶೆಟ್ಟಿ ಮುಂಬಯಿ ಅವರು ಮಾತನಾಡಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪೋಷಕರಿಂದ ಆಗಬೇಕು ಮುಂಬಯಿಗೆ ಹೋದ ಎಲ್ಲ ತುಳುವರು ಕನ್ನಡವನ್ನು ಕರ್ನಾಟಕವನ್ನು ತುಳು ಸಂಸ್ಕೃತಿಯನ್ನು ಮರೆಯಲಿಲ್ಲ ತಮ್ಮ ತಾಯಿನಾಡಿಗೆ ತಮ್ಮ ಊರಿಗೆ ಏನಾದರು ಕೊಡುಗೆಯನ್ನು ನೀಡಿಯೇ ನೀಡಿದ್ದಾರೆ. ಮುಂಬೈಗೆ ಹೋಗಿ ಅಲ್ಲಿಯೇ ಜೀವನವನ್ನು ಕಟ್ಟಿಕೊಂಡು ಉದ್ಯೋಗಿಯಾದಂತಹ ದಯಾನಾಯಕ್ ಅವರು ತಮ್ಮ ಊರನ್ನು ಮರೆಯದೆ ಈ ಹಳ್ಳಿಯಲ್ಲಿ ರಾಧಾ ನಾಯಕ್ ಪ್ರೌಢಶಾಲೆ ಅಂತಹ ಒಂದು ಶಾಲೆಯನ್ನು ಸ್ಥಾಪಿಸಿ ತನ್ನ ಊರಿಗೆ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2022 ನೀಡಿ ಸನ್ಮಾನಿಸಲಾಯಿತು. ಮಾನ್ಸಿ ಬಿ ಹೆಗ್ಡೆ, ಕಡ್ತಲ ಕೃಪಾ ನಾಯಕ್,ಭಾಗ್ಯಶ್ರೀ ಕುಂಚಿನಡ್ಕ, ಅರ್ಜುನ್ ಇಟಗಿ, ಶ್ರೇಯಾ ಎ ಪೆರಾಬೆ, ಮಧುರ ಎ ಹಾಸನ, ಸೃಜನ್ ಮೂಲ್ಯ, ಅವನಿ ಗಂಗಾವತಿ, ಲಿಖಿತ ಕೆ, ವಿಶ್ರುತಾ ಸಾಮಗ, ರುದ್ರಮನ್ಯು ಕಟೀಲು, ಧನ್ವಿ ರೈ ಕೋಟೆ, ಮಹಾಲಸ ಶ್ಯಾನುಬೋಗ್, ಸಮೃದ್ಧಿ ಎಂ ಕೆ, ಪ್ರಿನ್ಸ್ ಮಹಾಂತ ಗೌಡ, ಮೇಧ್ಯ ಕೊಟ್ಟಾರಿ, ರತನ್ ಸಂಜೀವ್ ಪ್ರಭು, ಭಾವಿಕ ಭಾಸ್ಕರ್, ಕ್ಷಿತಿ ರೈ ಧರ್ಮಸ್ಥಳ, ವೇದಿಕ್ ಕೌಶಲ್, ತುಳಸಿ ಹೆಗಡೆ ಸ್ನೇಹ ಬಿ.ನೆಟ್ಟಣಿಗೆ, ಹರಿಶ್ರೀ ಎಸ್, ಶಮಾ ಭಗವತ್ ಚಿತ್ರದುರ್ಗ, ಮಹಮ್ಮದ್ ಫೌಝಾನ್, ನತಾಶಾ ಎನ್, ಲಾವಣ್ಯ ಯು ರಾವ್, ಪ್ರವೀಣ್ ಪಿ, ಶ್ರೀ ಮಾನ್ಯ ಭಟ್ಟ್ ಕಡಂದಲೆ, ವೈಷ್ಣವಿ ಸಂತೆಕಟ್ಟೆ ಕಾರುಣ್ಯ ಎಮ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಹಾಗು ಸಾಮಾಜಿಕ ಜಾಲತಾಣಗಳ ಮೂಲಕ ಗಮನಸೆಳೆದ ವಂದನಾ ರೈ ಅವರನ್ನು ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಸಗಾಯಾ ಸೆಲ್ವಿ, ಆದಿ ಗ್ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸಾಣೂರು ಅರುಣ್ ಶೆಟ್ಟಿಗಾರ್, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ, ರಾಧಾ ನಾಯಕ್ ಪ್ರೌಢಶಾಲೆಯ ಎಸ್‌ಡಿಎಂಸಿಯ ಆರಂಭಿಕ ಅಧ್ಯಕ್ಷರಾದ ಪಿ.ಹಾಜಿ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮಿತಿಯ ಮಕ್ಕಳ ವಿಭಾಗದ ಸಂಚಾಲಕರಾದ ಸುನಿಧಿ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷರು ಹಾಗೂ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಸಂಘಟಕರಾದ ಡಾ. ಶೇಖರ ಅಜೆಕಾರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಭರತ್ ಮತ್ತು ತೀರ್ಥ ಪೊಳಲಿ ನಿರೂಪಿಸಿದರು. ಕನ್ನಡ ಸೇವಾ ಸಂಘ ಪೊವಾಯಿ ಅಧ್ಯಕ್ಷ ಡಿ.ಕೆ ಶೆಟ್ಟಿ , ಸದಾನಂದ ಸಾಲ್ಯಾನ್ ರೇಷ್ಮಾ ಶೆಟ್ಟಿ ಗೊರೂರು, ಸೌಮ್ಯಶ್ರೀ ಅಜೆಕಾರು, ಸುನೀತಾ ಅಂಡಾರು, ಸೇವಾಲಯ ಸದಾನಂದ ಉಪಸ್ಥಿತರಿದ್ದರು. ದೀಪಕ್ ಎನ್ ದುರ್ಗ ವಂದಿಸಿದರು. ಸಭೆಯ ಬಳಿಕ ಪುರಸ್ಕೃತ ಮಕ್ಕಳ ಬಹುವಿಧ ಪ್ರತಿಭಾ ಪ್ರದರ್ಶನ, ಯಕ್ಷಗಾನ ಸುಧೆ, ಕರಾಟೆ ಸಹಿತ ಕಾರ್ಯಕ್ರಮಗಳಿದ್ದವು. ನಾಲ್ಕು ಮಂದಿ ಅದೃಷ್ಟಶಾಲಿಗಳನ್ನು ಗಣ್ಯರು ಶಾಲು ಸಹಿತ ಸನ್ಮಾನಿಸಿದರು.

 
 
 
 
 
 
 
 
 
 
 

Leave a Reply