ಮಹಿಳಾ ಚಂಡೆಬಳಗದ ಸಾಮಾಜಿಕ ಕಳಕಳಿ ಅನುಕರಣೀಯ -ಶಿಲ್ಪಾ ವಿ. ನಾಯಕ್

ಶಿರ್ವ:-ಕಲಾವಾದಕ ಸಂಸ್ಥೆಯಾಗಿ 11 ವರ್ಷಗಳ ಹಿಂದೆ ಪ್ರಾರಂಭಗೊoಡ ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚಂಡೆಬಳಗದ ಸಮಾಜಮುಖಿ ಸೇವೆ, ಧಾರ್ಮಿಕ ಕಾರ್ಯಗಳು,ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಜೊತೆಗೆ ವಿವಿಧ ಕ್ಷೇತ್ರಗಳ ಪ್ರತಿಭಾ ಸಂಪನ್ನ ಸಾಧಕರನ್ನು ಗೌರವಿಸುವುದು, ಬಡ ರೋಗಿಗಳ ಚಿಕಿತ್ಸೆಗೆ ನೆರವಾಗುವುದು ಅತ್ಯಂತ ಸ್ತುತ್ಯ ಕಾರ್ಯವಾಗಿದ್ದು, ಮಹಿಳಾ ಚಂಡೆಬಳಗದ ಸಾಮಾಜಿಕ ಕಳಕಳಿ ಅನುಕರಣೀಯ ಎಂದು ಇನ್ನಂಜೆ (ಶಂಕರಪುರ) ಬ್ಯಾಂಕ್ ಆಫ್ ಬರೋಡಾ ಶಾಖಾ ಪ್ರಬಂಧಕರಾದ ಶಿಲ್ಪಾ ವಿ. ನಾಯಕ್ ನುಡಿದರು.

ಅವರು ರವಿವಾರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದಲ್ಲಿ ಜರುಗಿದ ಶ್ರೀದುರ್ಗಾ ಮಹಿಳಾ ಚಂಡೆಬಳಗದ “ಶ್ರಾವಣ ಸಂಭ್ರಮ”ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲನದ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಿರಿಯ ಚಿಂತಕಿ ಸುಮತಿ ಪ್ರಭು ಕುಕ್ಕಿಕಟ್ಟೆ ಮಾತನಾಡಿ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಶ್ರಾವಣಮಾಸದ ವಿಶೇಷತೆ, ಧಾರ್ಮಿಕ ಹಿನ್ನೆಲೆ, ಚೂಡಿಪೂಜೆ, ಲೌಕಿಕ ಮತ್ತು ಪಾರಮಾರ್ತಿಕ ಜೀವನದ ಮಹತ್ವ, ಹಬ್ಬಗಳ ಸರಮಾಲೆಯ ಪಾವಿತ್ರö್ಯತೆ, ಜೀವನಪದ್ಧತಿಯ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕಾರ್ಕಳ ರಾಜಾಪುರ ಸಾರಸ್ವತ ಕ್ರಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್, ಶ್ರೀಕ್ಷೇತ್ರ ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು ಶುಭಾಶಂಸನೆಗೈದರು.

ಈ ಸಂದರ್ಭದಲ್ಲಿ ತುಳುನಾಡಿನ ಕಂಬಳಕೋಣಗಳನ್ನು ಓಡಿಸುವ ಪ್ರತಿಭಾನ್ವಿತ ಸಾಧಕ ಹಾಗೂ ಜಿಲ್ಲಾಮಟ್ಟದ ಹಲವಾರು ಕಂಬಳ ಸ್ಫರ್ಧೆಗಳಿಗೆ ನಿರ್ಣಾಯಕರಾಗಿ ಸೇವೆ ಸಲ್ಲಿಸಿದ್ದ ಶಿರ್ವ ಕೋಡಿ ಮದ್ದಣಕೆರೆ ವಿಶ್ವನಾಥ್ ಪ್ರಭು, ಮತ್ತು ರಾಷ್ಟçಮಟ್ಟದ ಪ್ರಬಂಧ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶ್ರೇಯಾ ನಾಯಕ್‌ರವರನ್ನು ಸನ್ಮಾನಿಸಲಾಯಿತು. ಸಂಜನಾ ಪಾಟ್ಕರ್, ಸುನೀತಾ ಹರೀಶ್ ನಾಯಕ್ ಪರಿಚಯಿಸಿದರು. ಸಮಾಜದ ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಮುತ್ತೆöÊದೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳು ಸಂಪನ್ನಗೊoಡವು. ಪ್ರತಿಭಾನ್ವಿತ ಕಲಾವಿದ ಹರೀಶ್ ಅಜೇರು, ಬಹುಭಾಷಾ ಕವಯತ್ರಿ ಹಾಡುಗಾರ್ತಿ ಕುಸುಮಾ ಕಾಮತ್ ಕರ್ವಾಲು ಇವರಿಂದ ಕನ್ನಡ,ಕೊಂಕಣಿ ಗೀತಾಗಾಯನ ಕಾರ್ಯಕ್ರಮ ಜರುಗಿತು, ಸಂಗೀತಾ ಪಾಟ್ಕರ್, ವಿದ್ಯಾ, ಶೋಭಾ ಭಟ್, ಕಲಾವತಿ ನಾಯಕ್ ಸಹಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಚಂಡೆಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನೀಲವೇಣಿ ಪ್ರಭು ವರದಿ ಓದಿದರು. ಭವಾನಿ ನಾಯಕ್ ನಿರೂಪಿಸಿದರು. ಆಶಾ ನಾಯಕ್ ಧನ್ಯವಾದವಿತ್ತರು. ನಂತರ ಶ್ರಾವಣ ಮಾಸದ ತಿಂಡಿತಿನಿಸುಗಳನ್ನೊಳಗೊoಡ ವಿಶೇಷ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

 
 
 
 
 
 
 
 
 
 
 

Leave a Reply