ಶಿರ್ವ ಮಹಿಳಾ ಮಂಡಲ—-ವೃದ್ಧಾಶ್ರಮಕ್ಕೆ ಪಾತ್ರೆಪರಿಕರಗಳ ಕೊಡುಗೆ

ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ ,ಜಿಲ್ಲೆಯ ಅತ್ಯಂತ ಹಿರಿಯ ಮಹಿಳಾ ಮಂಡಲಗಳಲ್ಲೊಂದಾಗಿರುವ ಶಿರ್ವ ಮಹಿಳಾ ಮಂಡಲ (ರಿ) ಶಿರ್ವ ಇದರ “ತಿಂಗಳ ಕಾರ್ಯಕ್ರಮ”ಯೋಜನೆಯಡಿ ಮೇ ತಿಂಗಳ ಕಾರ್ಯಕ್ರಮ ವಾಗಿ “ಹಿರಿಯರೊಂದಿಗೆ ಒಂದು ಸಂಜೆ”ಕಾರ್ಯಕ್ರಮವು ಕಟಪಾಡಿಯ ಕಾರುಣ್ಯ ವೃದ್ಧಾಶ್ರಮದಲ್ಲಿ ಜರುಗಿತು.

ದುರ್ಗಾಶ್ರೀ ಬಂಟರ ಮಹಿಳಾ ಸಂಘ ಶಿರ್ವ ಇದರ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ, ಕಾರ್ಯದರ್ಶಿ ಡಾ.ಸ್ಪೂರ್ತಿ.ಪಿ. ಶೆಟ್ಟಿ,ಬಂಟರ ಮಹಿಳಾ ಸಂಘ ದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಶೆಟ್ಟಿ,ಮಟ್ಟಾರು,ಗೌರವಾಧ್ಯಕ್ಷೆ ಶ್ರೀಮತಿ ಶಶಿಕಲಾ ಶೆಟ್ಟಿ ಯವರು ಮಹಿಳಾ ಮಂಡಲದ ಪರವಾಗಿ ಆಶ್ರಮಕ್ಕೆ ಅಗತ್ಯವಿರುವ ಪಾತ್ರೆಗಳು ಹಾಗೂ ದಿನಬಳಕೆಯ ವಸ್ತುಗಳನ್ನು ಆಶ್ರಮದ ಮೇಲ್ವಿಚಾರಕರಾದ ಶ್ರೀ ಕುಮಾರಸ್ವಾಮಿ ದಂಪತಿಗಳಿಗೆ ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು “ನಮ್ಮ ಆಶ್ರಮದ ನಿವಾಸಿಗಳಿಗೆ ಇಂದು ಬಹಳ ಸಂತೋಷ ಉಂಟುಮಾಡಿದ್ದೀರಿ.ಎಲ್ಲಾ ಬೇಧ ಭಾವ ಮರೆತು ನಮ್ಮ ನಿವಾಸಿಗಳೊಂದಿಗೆ ಆತ್ಮೀಯ ವಾಗಿ ಬೆರೆತಿದ್ದೀರಿ..ನಮಗೆ ಬೇಕಾದ ವಸ್ತುಗಳನ್ನು ನೀಡಿದ್ದೀರಿ.ಇದಕ್ಕಾಗಿ ನಾನು ಮಹಿಳಾ ಮಂಡಲದ ಎಲ್ಲಾ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ “ಎಂದು ನುಡಿದರು.ಆಶ್ರಮದ ನಿವಾಸಿಗಳೂ ಮಾತನಾಡಿ ಶುಭಹಾರೈಸಿದ್ದು ವಿಶೇಷವಾಗಿತ್ತು.ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ಮಾತನಾಡಿ, ನಮ್ಮ ಮಹಿಳಾ ಮಂಡಲದ ವಜ್ರ ಮಹೋತ್ಸವದ ಅಂಗವಾಗಿ ಪ್ರತೀ ತಿಂಗಳೂ ಒಂದೊಂದು ಕಾರ್ಯಕ್ರಮದಂತೆ ಒಂದು ವರ್ಷದಲ್ಲಿ 12ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯಂತೆ ಈ ತಿಂಗಳ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ.ಇನ್ನು ಮುಂದಿನ ದಿನಗಳಲ್ಲೂ ಎಲ್ಲಾ ಕಾರ್ಯಕ್ರಮಗಳೂ ಇದೇ ರೀತಿ ಯಶಸ್ಸು ಕಾಣುವಂತಾಗಲಿ ಎಂದು ನುಡಿದರು.ಇದೇ ಸಂದರ್ಭದಲ್ಲಿ ನಿಷ್ಕಲ್ಮಶವಾಗಿ ಹಿರಿಯರ ಸೇವೆಯನ್ನು ಮಾಡುತ್ತಾ ಬಂದಿರುವ ಶ್ರೀ ಕುಮಾರಸ್ವಾಮಿ ಮತ್ತು ವಿಶಾಲಾಕ್ಷಿ ದಂಪತಿಗಳನ್ನು ಸನ್ಮಾನಿಸಲಾಯಿತು.ಆರಂಭದಲ್ಲಿ ಶ್ರೀಮತಿ ಪುಷ್ಪಾ ಆಚಾರ್ಯ ಅವರು ಪ್ರಾರ್ಥಿಸಿದರು.ಶ್ರೀಮತಿ ಶಶಿಕಲಾ ಶೆಟ್ಟಿ ಅವರು ಸ್ವಾಗತಿಸಿದರು.ಕೊನೆಯಲ್ಲಿ ಡಾ.ಸ್ಪೂರ್ತಿ .ಟಿ.ಶೆಟ್ಟಿ ಅವರು ವಂದಿಸಿದರು.ಶ್ರೀಮತಿ ಸುಪ್ರೀತಾ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಪದಾಧಿಕಾರಿಗಳು, ಸದಸ್ಯರೂ, ದುರ್ಗಾ ಶ್ರೀ ಬಂಟರ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply