ಶೃಂಗಾರ ಸಂಜೀವಿನಿ ಒಕ್ಕೂಟದ ವತಿಯಿಂದ ಪರಿಸರ ದಿನಾಚರಣೆ ಹಾಗೂ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ

ಶಿರ್ವ ಗ್ರಾಮದ ಶೃಂಗಾರ ಸಂಜೀವಿನಿ ಒಕ್ಕೂಟದ ವತಿಯಿಂದ ಇಂದು ಪರಿಸರ ದಿನಾಚರಣೆ ಹಾಗೂ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನುಕೋಡು ಶ್ರೀ ದುರ್ಗಾಂಬಿಕಾ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಶ್ರೀ ಕೆ.ಆರ್.ಪಾಟ್ಕರ್ ಅವರು ಹಣ್ಣಿನ ಗಿಡವನ್ನು ನೆಡುವುದರೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ತದನಂತರ ಮಾತನನಾಡಿದ ಅವರು ಪರಸರ ದಿನಾಚರಣೆಯನ್ನು ಕೇವಲ ಗಿಡನೆಡುವುದಕ್ಕೆ ಸೀಮಿತಗೊಳಿಸದೇ ಪರಿಸರದ ಸ್ವಚ್ಛತೆಯ ಕಡೆಗೂ ಗಮನಹರಿಸಬೇಕು.ಈ ಕೆಲಸ ಸಂಜೀವಿನಿ ಒಕ್ಕೂಟದಿಂದ ಆಗಬೇಕು ಎಂದರು.ಶಿರ್ವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಅನಂತ ಪದ್ಮನಾಭ ನಾಯಕ್ ಸಂಜೀವಿನಿ ಒಕ್ಕೂಟದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಸರ್ವರನ್ನೂ ಸ್ವಾಗತಿಸಿದರು ಕಾರ್ಯದರ್ಶಿ ಶ್ರೀಮತಿ ವೀಣಾವತಿ, ಸಂಪನ್ಮೂಲ ವ್ಯಕ್ತಿಗಳಾದ ಸುಜಾತಾ,ಶಶಿಕಲಾ, ಮುಖ್ಯ ಪುಸ್ತಕ ಬರಹಗಾರರಾದ ಶ್ರೀಮತಿ ಶ್ವೇತಾ,ಬಿ.ಸಿ.ಸಖಿ ಶ್ರೀಮತಿ ಸುಮಾ ಬಾಮನ್,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಉಷಾ ವೀರೇಂದ್ರ ಪಾಟ್ಕರ್,ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಪ್ರೇಮಾ ಶೆಟ್ಟಿ ಹಾಗೂ ಶ್ರೀಮತಿ ವಿಜಯಾ ಶೆಟ್ಟಿ, ಮತ್ತು ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply