Janardhan Kodavoor/ Team KaravaliXpress
27.6 C
Udupi
Tuesday, August 16, 2022
Sathyanatha Stores Brahmavara

“ಚಾವಡಿ ಚರ್ಚೆ” – ಸಂವಾದ ಕಾರ್ಯಕ್ರಮ

 ಶ್ರೀಮತಿ ಸಂಧ್ಯಾ ಕೋಟ್ಯಾನ್ ಅವರು ಚಿತ್ರಿಸಿದ ಸುಂದರವಾದ ಬಣ್ಣದ ರಂಗೋಲಿಗೆ ದೀಪ ಹಚ್ಚುವ ಜೊತೆಗೆ ರೊ. ರಾಜೇಂದ್ರ ಮಯ್ಯ ಅವರು ನಡೆಸಿಕೊಟ್ಟ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ರೋಟರಿ ಉಡುಪಿಯ ಅಧ್ಯಕ್ಷ – ರೊ. ಹೇಮಂತ್ ಯು. ಕಾಂತ್ ಅತಿಥಿಗಳನ್ನು, ಸದಸ್ಯರನ್ನು ಹಾಗೂ ವಿಶೇಷ ಆಹ್ವಾನಿತರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಧ್ಯಕ್ಷ – ರೊ. ಹೇಮಂತ್ ಯು. ಕಾಂತ್ ಸಂಪೂರ್ಣ ಚರ್ಚಾ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ನಡೆದ “ಚಾವಡಿ ಚರ್ಚೆ” – ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ ನಮ್ಮ ರೋಟರಿ ಕುಟುಂಬದ ಮೂವರು ಪ್ರತಿಭಾನ್ವಿತರಾದ – ಶ್ರೀಮತಿ ಸಂಧ್ಯಾ ಕೋಟ್ಯಾನ್ (Rongoli Artist), ಶ್ರೀಮತಿ ಶೈಲಾ ಮಯ್ಯ (Culinary Specialist) ಮತ್ತು ಕುಮಾರಿ ಶ್ರಾವ್ಯ ಬಾಸ್ರಿ (Bottle & Mandala Artist) ತಮ್ಮ – ತಮ್ಮ ಆಸಕ್ತಿಯ ಕಲೆಗಳ ಬಗ್ಗೆ, ಅವರವರ ಅನುಭವಗಳ ಬಗ್ಗೆ, ಸಾಧನೆಯ ಹಿಂದಿನ ಪರಿಶ್ರಮದ ಬಗ್ಗೆ, ತಮಗೆ ಸಿಕ್ಕಿದ ಸ್ಪೂರ್ತಿ – ಪ್ರೇರಣೆ ಸಹಾಯ- ಸಹಕಾರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಎಲ್ಲರೊಡನೆ ಹಂಚಿಕೊಂಡರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!