ನನ್ನ ಮಾತಿನ ಮನೆಯಿಂದ~ಶಿಲ್ಪಾ ಜೋಶಿ

ತುಳು ಕೂಟ (ರಿ) ಉಡುಪಿ ಏರ್ಪಡಿಸಿದ ತುಳು ನಾಟಕ ಸ್ಪರ್ಧೆಯ ನಾಟಕ
ಸಂಗಮ ಕಲಾವಿದರು , ಮಣಿಪಾಲ ಪ್ರಸ್ತುತ ಪಡಿಸಿದ “ಸೊರದಾಂತಿ ನಲಿಕೆ”

ಮೂಲ ನಾಟಕ ಆಸಿಫ್ ಕರೀಂ ಭಾಯ್ ಅವರ ಪ್ರಸಿದ್ಧ ಮನೋವೈಜ್ಞಾನಿಕ ನಾಟಕ “ಡಿ ಡಂಬ್ ಡ್ಯಾನ್ಸರ್ :

ಸಮಾಜದಲ್ಲಿ ಮಾತನಾಡಲು ಇಷ್ಟ ಪಡದ ಮಾನಸಿಕ ಕಾಯಿಲೆ ವಿಷಯವನ್ನಾಧರಿಸಿದ ನಾಟಕ.

ಚಿತ್ತ ವಿಕಲತೆ ಅಥವಾ ಸ್ಕಿಜೋಫ್ರೆನಿಯಾ ೬ ರಿಂದ ೭ ಮಿಲಿಯನ್ ಭಾರತೀಯರಲ್ಲಿ ಕಂಡುಬರುವ ಮಾನಸಿಕ ಕಾಯಿಲೆ. ಮನಸ್ಸು ಮೆದುಳಿನ ಮೇಲೆ ಧಾಳಿ ಮಾಡುವ ಖಾಯಿಲೆ ಸರಿಯಾದ ಔಷದಿ, ಕಾಯಿಲೆಯ ಬಗ್ಗೆ ತಿಳುವಳಿಕೆ ,ಮಾರ್ಗದರ್ಶನದಿಂದ ಸಾಮಾನ್ಯ ಸಾಮಾಜಿಕ ಜೀವನ ನಡೆಸುವ ವ್ಯಕ್ತಿಗಳು ಹಲವಾರು . ಈ ಕಾಯಿಲೆಗೆ ಮನುಷ್ಯನಷ್ಟೇ ಹಳೆಯ ಇತಿಹಾಸವಿದೆ. ಹಾಗು ಇದರಲ್ಲಿ ಬೇರೆ ಬೇರೆ ವಿಧ ಗಳಿವೆ. ಇಂತಹ ಕಾಯಿಲೆಗೆ ಒಳಗಾದವರು ಹೆಚ್ಚಾಗಿ ಭ್ರಮೆಯಲ್ಲಿ ಬದುಕುವವರು, ಈ ಕಾಯಿಲೆಯ ಬಗ್ಗೆ ತಿಳುವಳಿಕೆ ಇಲ್ಲದವರಿಗೆ ಇದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಈ ನಾಟಕದಲ್ಲಿ ಚಿತ್ತವಿಕಲತೆಯ ಭ್ರಮಾಧೀನ ಕಾಯಿಲೆಗೆ ಒಳಗಾದ ವ್ಯಕ್ತಿಯ ಬಗ್ಗೆ ಬೆಳಕು ಚೆಲ್ಲುತ್ತಾ ಬಾಲ್ಯದಲ್ಲಿ ತಾನು ಕಂಡ ಪುರಾಣದ ನಾಯಕನೇ ಬೆಳೆಯುತ್ತಾ ತಾನಾಗಿ ಪರಿವರ್ತನೆ ಗೊಳ್ಳುವ ಕಥಾವಸ್ತು. ಮನಃಶಾಸ್ತ್ರದಲ್ಲಿ ಕೌಂಟರ್ ಟ್ರಾನ್ಸ್ಫರ್ಎನ್ಸಿ ಅನ್ನೋದು ತುಂಬಾ ಎಚ್ಚರಿಕೆ ವಹಿಸ ಬೇಕಾದ ವಿಷಯ. ಇಲ್ಲದಿದ್ರೆ ಚಿಕಿತ್ಸೆ ಮಾಡುವವರು ರೋಗಿಯ ಭಾವನೆಗಳ ಬಲಿಯಾಗಿ ಅವರು ಅದನ್ನು ಅನುಭವಿಸಲಿಕ್ಕೆ ಆರಂಭಿಸುತ್ತಾರೆ .

ಎಲ್ಲಿಯೋ ಒಂದು ಕಡೆ ಅತಿ ಶಿಸ್ತಿನ ಕಲಿಕೆ, ಮಿತಿ ಮೀರಿದ ಕಲಿಕೆಯ ತುಡಿತ, ತನ್ನನ್ನು ಸಾಬೀತು ಪಡಿಸಬೆಕೆಂಬ ಆಸೆ ಎಲ್ಲವೂ ನಿಧಾನವಾಗಿ ಒಂದು ವಿಷ ವರ್ತುಲದಲ್ಲಿ ಜಾರುತ್ತಾ ಅಲ್ಲಿಂದ ಹೊರ ಬರಲಾಗದ ಸ್ಥಿತಿ .

ಕಥಾ ವಿವರ:

ಯಕ್ಷಗಾನ ಗುರುಕುಲದಲ್ಲಿ ಕಲಿಯುವ ವಿದ್ಯಾರ್ಥಿ . ಗುರುಗಳ ಮೆಚ್ಚುಗೆಗಾಗಿ ಮಿತಿ ಮೀರಿ ಪ್ರಯತ್ನ ಪಡುವುದು. ಪಾತ್ರವೇ ತಾನಾಗಿ ಅನುಭವಿಸುವುದು, ಗುರುಗಳು ನೀನು ಮಾತನಾಡುವುದಲ್ಲ ಕುಣಿದು ತೋರಿಸುವ ಪಾತ್ರ ಅಂತ ಹೇಳಿದ್ದಕ್ಕೆ ತನ್ನ ನಾಲಗೆಯನ್ನು ತಾನೇ ಕೊಯ್ದು ಶಾಶ್ವತ ವಾಗಿ ಕುಣಿಯುವುದಕ್ಕೆ ತನ್ನನ್ನು ಮೀಸಲಾಗಿಡುವುದು. ಭೀಮ ನ ಪಾತ್ರ ತಾನೇ ಆಗಿ ಗುರುಗಳ ಮಗಳು ದ್ರೌಪದಿ ಹಾಗು ದುಶ್ಯಾಸನ ಇನ್ನಿತರ ಪಾತ್ರಗಳನ್ನು ಊಹಿಸಿ ಪುರಾಣಲೋಕದಲ್ಲೇ ಬದುಕುವ ದೃಶ್ಯ.

ಭೀಮನ ಪಾತ್ರ ಮಾಡುತ್ತಾ ಅದನ್ನೇ ಜೀವಿಸುವ ಅವನ ಅವನ ಕಾಯಿಲೆ ಗುಣಪಡಿಸಲಿಕ್ಕೆ ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುವ ವೈದ್ಯೆ ಈ ಭೀಮನ ಪ್ರಭಾವಕ್ಕೊಳಗಾಗಿ ಚಿಕಿತ್ಸೆ ಮಾಡುತ್ತಾ. ಅವನ ಗುರುಗಳ ಮಗಳನ್ನು ಕೊಂದು ತಾನೇ ದ್ರೌಪದಿ ಎಂಬ ಭ್ರಮೆ ಯಲ್ಲಿರುವುದು.

ಸೊರದಾಂತಿ ನಲಿಕೆ ನೋಡುವವರ ಉಸಿರನ್ನು ಸ್ಥಬ್ಧವಾಗಿಸುತ್ತದೆ. ಸಂಗಮ ಕಲಾವಿದರು ಬೆಳಕಿನ ವಿನ್ಯಾಸದಲ್ಲಿ ಎತ್ತಿದ ಕೈ ರಾಜು ಮಣಿಪಾಲ. ಯಕ್ಷಗಾನ ಬಳಸಿ ದೃಶ್ಯಾವಳಿಯನ್ನು ಕಣ್ಣಿನ ಮುಂದೆ ಕಟ್ಟಿದ ರೀತಿ . ಮತ್ತೇನು ಎಂಬ ಕುತೂಹಲ ಮೂಡಿಸುತ್ತದೆ.

ಗುರು ಗಳ ಪಾತ್ರದಲ್ಲಿ ಸಂತೋಷ್ ಶೆಟ್ಟಿ, ಭೀಮ- ಅನಿಶ್ ಪ್ರಸಾದ್, ದೀಲಿಪ್ ಪಾತ್ರಧಾರಿ ಪ್ರೇಮ -ವೀಣಾ, ವೈಷ್ಣವಿ ಧನರಾಜ್, ನಮೃತಾ, ಶ್ರೇಯಸ್ ಎಲ್ಲರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಾರಂಭದಲ್ಲಿ ವೈದ್ಯರುಗಳ ಸಂಭಾಷಣೆ ಸ್ವಲ್ಪ ಉದ್ದ ಆದ್ರೂ ಕಥೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ.

ಪ್ರಶಾಂತ್ ಉದ್ಯಾವರ್ ಅವರ ನೃತ್ಯ ಸಂಯೋಜನೆ, ಭುವನ್ ಮಣಿಪಾಲ ಅವರ ನಿರ್ದೇಶನ. ಉತ್ತಮ ನಾಟಕ, ಕಥಾವಸ್ತು. ತಮಗರಿವಾಗದ ರೀತಿಯಲ್ಲಿ ಖಿನ್ನತೆ ಅಥವಾ ಬೇರೆ ರೀತಿಯ ಮಾನಸಿಕ ಕಾಯಿಲೆಗೆ ತುತ್ತಾಗುವ ಕಲೆಯೇ ಸರ್ವಸ್ವ ಎಂದು ನಂಬಿದವರ ಬದುಕಿನ ದುರಂತಕ್ಕೆ ಹಿಡಿದ ಕೈಗನ್ನಡಿ

ಇಲ್ಲಿ ಯಕ್ಷಗಾನ ಕಲಾವಿದ ಅಥವಾ ವೈದ್ಯೆ ಒಂದು ನಿದರ್ಶನ. ರಂಗಭೂಮಿ ಒಂದು ಸಶಕ್ತ ಮಾಧ್ಯಮ. ನೋಡುವವರಿಗೆ ಮಾನಸಿಕ ಕಾಯಿಲೆಯ ಸಂದೇಶವನ್ನು ಅರ್ಥ ಮಾಡಿಕೊಡುವಲ್ಲಿ ಈ ನಾಟಕ ಯಶಸ್ವೀ ಆಗಿದೆ
– ಶಿಲ್ಪಾ ಜೋಶಿ .

 
 
 
 
 
 
 
 
 
 
 

Leave a Reply