ಕಾಪು (ದಕ್ಷಿಣ) ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಗೆ ಶಾಂತಲತಾ ಶೆಟ್ಟಿ ಸಾರಥ್ಯ

ಕಾಪು (ದಕ್ಷಿಣ) ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಪುರಸಭಾ ಸದಸ್ಯೆ ಶ್ರೀಮತಿ ಶಾಂತಲತಾ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ ಹಾಗೂ ಕಾಪು ಬ್ಲಾಕ್ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಸುವರ್ಣ ಅವರ ಶಿಫಾರಸಿನ ಮೇರೆಗೆ , ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು ಅವರ ಸೂಚನೆಯಂತೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ಶ್ರೀಮತಿ ಶಾಂತಲತಾ ಶೆಟ್ಟಿ ಅವರಿಗೆ ನೇಮಕಾತಿ ಆದೇಶವನ್ನು ನೀಡಿದ್ದಾರೆ.ಇದುವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶ್ರೀಮತಿ ಪ್ರಭಾ ಶೆಟ್ಟಿ ಅವರು ಸ್ಥಾನಕ್ಕೆ ಈ ನೂತನ ಆಯ್ಕೆಯನ್ನು ಮಾಡಲಾಗಿದೆ.

 
 
 
 
 
 
 
 
 

Leave a Reply