ನವಜಾತ ಶಿಶು ಪ್ರಾಣಪ್ರತ್ಯಾಗಮನ ತರಬೇತಿ ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಉಡುಪಿಯ ಬಾಲರೋಗ ವಿಭಾಗ, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ), ರಾಷ್ಟಿçÃಯ ನಿಯೋನಾಟಾಲಜಿ ವೇದಿಕೆ ಹಾಗೂ ಪಿಡಿಯಾಟ್ರಿಕ್ಸ್ ವಿಭಾಗ ಕೆ.ಎಂ.ಸಿ. ಮಣಿಪಾಲದ ಸಹಯೋಗದೊಂದಿಗೆ ಎರಡು ದಿನಗಳ ನವಜಾತ ಶಿಶು ಪ್ರಾಣ ಪ್ರತ್ಯಾಗಮನ ತರಬೇತಿ ಕಾರ್ಯಕ್ರಮವನ್ನು ದಿನಾಂಕ 05.06.2022 ಹಾಗೂ 06.06.2022 ರಂದು ಆಯೋಜಿಸಲಾಗಿತ್ತು.

ದಿನಾಂಕ 05.06.2022 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ವೈದ್ಯ ಡಾ. ಅಭಿಷೇಕ್ ಫಡ್ಕೆ, ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಪೀಡಿಯಾಟ್ರಿಕ್ಸ್ ವಿಭಾಗದ ಮಕ್ಕಳ ತಜ್ಞ ಡಾ. ಅಶ್ವಿಜ್ ಶ್ರೀಯಾನ್, ಕೊಡಗು ಗೋಣಿಕೊಪ್ಪ, ಲೋಪಮುದ್ರಾ ಮೆಡಿಕಲ್ ಸೆಂಟರ್‌ನ ಶಿಶು ಮತ್ತು ಮಕ್ಕಳ ತಜ್ಞ ಡಾ. ಗೌರವ್ ಅಯ್ಯಪ್ಪ ಹಾಗೂ ಮಂಗಳೂರಿನ ಯೆನಪೊಯಾ ಸ್ಪೆಷಾಲಿಟಿ ಆಸ್ಪತ್ರೆಯ ಶಿಶು ತಜ್ಞ ಡಾ. ಮಿಥುನ್ ಹೆಚ್.ಕೆ. ಉಪಸ್ಥಿತರಿದ್ದರು. ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಸುಜ, ಡಾ. ಅಪರ್ಣ, ಡಾ. ಅಂಜು ಪ್ರಾರ್ಥಿಸಿದರು. ಕಾಲೇಜಿನ ಬಾಲರೋಗ ವಿಭಾಗದ ಮುಖ್ಯಸ್ಥರಾದ ಡಾ. ಪೃಥ್ವಿರಾಜ್ ಪುರಾಣಿಕ್‌ರವರು ಅತಿಥಿಗಳನ್ನು ಸ್ವಾಗತಿಸಿದರು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾಲೇಜಿನ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗ ಮುಖ್ಯಸ್ಥರಾದ ಡಾ. ರಮಾದೇವಿ ಜಿ.ಯವರು ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ಅಧ್ಯಕ್ಷೀಯ ಮಾತುಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಕಾವ್ಯರವರು ವಂದಿಸಿದರು.

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು, ಮೂಡಬಿದ್ರೆ, ಎಸ್.ಡಿ.ಎಮ್. ಆಯುರ್ವೇದ ಕಾಲೇಜು, ಹಾಸನ ಹಾಗೂ ಉಡುಪಿಯ ಬಾಲರೋಗ ವಿಭಾಗ ಹಾಗೂ ಪ್ರಸೂತಿತಂತ್ರ ಹಾಗೂ ಸ್ತ್ರೀರೋಗ ವಿಭಾಗದ 40 ಮಂದಿ ವಿದ್ಯಾರ್ಥಿಗಳಿಗೆ ‘ನವಜಾತ ಶಿಶು ಪ್ರಾಣಪ್ರತ್ಯಾಗಮನ’ದ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.

ವಿಶ್ವದಲ್ಲಿ ಹುಟ್ಟುವ ಪ್ರತಿ 100 ಮಕ್ಕಳಲ್ಲಿ 90 ರಷ್ಟು ಶಿಶುಗಳು ಗರ್ಭದಿಂದ ಹೊರ ವಾತಾವರಣಕ್ಕೆ ಸಹಜವಾಗಿಯೇ ಹೊಂದಿಕೊಳ್ಳುತ್ತವೆ. ಉಳಿದ 10 ಮಕ್ಕಳಿಗೆ ಉಸಿರಾಟದ ಪ್ರಾರಂಭಿಕ ಪ್ರಯತ್ನಕ್ಕೆ ಸಹಕಾರ ಅಗತ್ಯ. ಅದರಲ್ಲೂ 1ಮಗುವಿಗೆ ತೀವ್ರತರದ ಸಹಾಯಕವಾಗಿ ವೆಂಟಿಲೇಷನ್, ಇಂಟ್ಯುಬೇಷನ್ ಹಾಗೂ ಮೆಡಿಕೇಶನ್ ನಂತಹ ಸಹಕಾರ ಅತ್ಯಗತ್ಯ. ಅದರಲ್ಲೂ ಹುಟ್ಟಿದ ಮೊದಲ 1 ನಿಮಿಷದಲ್ಲಿ (ಫಸ್ಟ್ ಗೋಲ್ಡನ್ ಮಿನಿಟ್ ಪ್ರೊಜೆಕ್ಟ್) ಆ ಎಳೆ ಮಗುವಿನ ಎಲ್ಲಾ ಅಂಗಾoಗಗಳಿಗೆ ಉತ್ತಮ ರಕ್ತ ಪೂರೈಸದಿದ್ದಲ್ಲಿ ಮಗುವಿನ ಸಾವು ಅಥವಾ ದೀರ್ಘಕಾಲೀನ ವ್ಯಾಧಿಗಳ ಸಾಧ್ಯತೆ ಬಹಳ. ಆದ್ದರಿಂದ ಪ್ರತಿ ಹೆರಿಗೆಯನ್ನು ನುರಿತ ವೈದ್ಯರ ಸಮ್ಮುಖದಲ್ಲಿ ನಡೆಸುವಂತೆ ಹಾಗೂ ಮಗುವಿನ ಸಂಪೂರ್ಣ ಆರೈಕೆ ಮಾಡುವಲ್ಲಿ ವೈದ್ಯರ ಪಾತ್ರ ಅಪಾರ ಎಂದು ಡಾ. ಅಶ್ವಿಜ್ ಶ್ರೀಯಾನ್ ಬೋಧಿಸಿದರು.

ದಿನಾಂಕ 06.06.2022 ರಂದು ಅಡ್ವಾನ್ಸ್ ರಿಸಸ್ಸಿಟೇಷನ್ ಪ್ರಾತ್ಯಕ್ಷಿಕಾ ಕಾರ್ಯಾಗಾರವನ್ನು ಮಣಿಪಾಲದ ಸಿಮುಲೇಶನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೆ.ಎಮ್.ಸಿ. ಮಣಿಪಾಲದ ಫೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಲೆಸ್ಲಿ ಲೂಯಿಸ್ ಹಾಗೂ ಕೊಡಗು ಗೋಣಿಕೊಪ್ಪ, ಲೋಪಮುದ್ರಾ ಮೆಡಿಕಲ್ ಸೆಂಟರ್‌ನ ಶಿಶು ಮತ್ತು ಮಕ್ಕಳ ತಜ್ಞ ಡಾ. ಗೌರವ್ ಅಯ್ಯಪ್ಪ ಅಂದಿನ ಸಂಪನ್ಮೂಲ ವ್ಯಕ್ತಿಗಳಾಗಿದ್ದರು ಹಾಗೂ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕ ತರಬೇತಿ ನೀಡಿದರು.

ನಂತರ ವಿಚಾರ ಸಂಕಿರಣವೊoದನ್ನು ಏರ್ಪಡಿಸಲಾಗಿತ್ತು. ಅಂಬಲಪಾಡಿ ಹೈಟೆಕ್ ಆಸ್ಪತ್ರೆಯ ಖ್ಯಾತ ಶಿಶು ವೈದ್ಯ ಡಾ. ಜನಾರ್ಧನ ಪ್ರಭುರವರು ವಾರ್ಮರ್ ಕೇರ್ ಹಾಗೂ ಮಕ್ಕಳಲ್ಲಿ ತುರ್ತು ಪರಿಸ್ಥಿತಿಗಳ ಶೀರ್ಘ ಗುರುತಿಸುವಿಕೆಯ ಬಗ್ಗೆ ಸರಳವಾಗಿ ವಿವರಿಸಿದರು. ತಾಯಿಯ ಗರ್ಭದಲ್ಲಿನ ಜಲಮಾಧ್ಯಮದಿಂದ ಹೊರ ಜಗತ್ತಿನ ವಾಯು ಮಾಧ್ಯಮಕ್ಕೆ ಶಿಶುವೊಂದು ಬಂದಾಗ ತಾಪಮಾನವನ್ನು ಕಾಯ್ದುಕೊಳ್ಳಲು ಬಳಸುವ ವೈದ್ಯಕೀಯ ಉಪಕರಣಗಳು, ವಿಧಾನಗಳು ಹಾಗೂ ಅದರ ಮಹತ್ವವನ್ನು ವಿವರಿಸಿದರು. ಹುಟ್ಟಿದ ತಕ್ಷಣ ಮಗು ಅಳದಿರುವುದು, ಉಸಿರಾಟದ ತೊಂದರೆ, ಅನುವಂಶಿಕ ಕಾಯಿಲೆಗಳ ಗುರುತಿಸುವಿಕೆ ಹಾಗೂ ಚಿಕಿತ್ಸೆಯ ಬಗ್ಗೆ ತಿಳಿಸಿದರು.

ಸಮಾರೋಪ ಸಮಾರಂಭ :
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ಹೈಟೆಕ್ ಆಸ್ಪತ್ರೆಯ ವೈದ್ಯರಾದ ಡಾ. ಜನಾರ್ಧನ ಪ್ರಭು, ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ., ಹಾಗೂ ಬಾಲರೋಗ ವಿಭಾಗದ ಮುಖ್ಯಸ್ಥರಾದ ಡಾ. ಪೃಥ್ವಿರಾಜ್ ಪುರಾಣಿಕ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕರಾದ ಡಾ. ನಾಗರತ್ನ ಎಸ್. ಜೆ. ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು ಹಾಗೂ ಅವರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊoಡರು. ಸಹಾಯಕ ಪ್ರಾಧ್ಯಾಪಕರಾದ ಡಾ. ಚಿತ್ರಲೇಖಾ ಕಾರ್ಯಕ್ರಮವನ್ನು ವಂದನಾರ್ಪಣೆಯೊoದಿಗೆ ಮುಕ್ತಾಯಗೊಳಿಸಿದರು.

 
 
 
 
 
 
 
 
 
 
 

Leave a Reply